ಪ್ರಗತಿವಾಹಿನಿ ಸುದ್ದಿ; ಮುಂಬೈ: ಸದಾ ವಿಚಿತ್ರ ಉಡುಗೆಗಳ ಮೂಲಕವೇ ಹೆಚ್ಚು ಸುದ್ದಿಯಲ್ಲಿರುವ ಹಿಂದಿ ಕಿರುತೆರೆ ನಟಿ ಉರ್ಫಿ ಜಾವೇದ್ ಇದೀಗ ಮತ್ತೊಂದು ವಿಚಿತ್ರ ಬಟ್ಟೆ ತೊಟ್ಟು ಸುದ್ದಿಯಾಗಿದ್ದಾರೆ.
ಈ ಬಾರಿ ಉರ್ಫಿ ಗುಲಾಬಿ ಬಣ್ಣದ ವಿಭಿನ್ನ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಲ್ಲದೇ ನಡೆದಾಡಲು ಪರದಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಉರ್ಫಿಯ ವಿಚಿತ್ರ ಫ್ಯಾಷನ್ ಅವಸ್ಥೆ ಕಂಡು ನೆಟ್ಟಿಗರು ಸಾಕಷ್ಟು ಕಾಲೆಳೆದಿದ್ದಾರೆ.
ಒಬ್ಬರು ಇದು ಫ್ಯಾಷನ್ ಡಿಸಾಸ್ಟರ್ ಎಂದು ಕಮೆಂಟ್ ಹಾಕಿದ್ದರೆ, ಮತ್ತೊಬ್ಬರು ಇದೆಲ್ಲ ಫ್ಯಾಷನ್ ಅಂತ ಹೇಳಲ್ಲ ಎಂದು ಯಾರಾದರೂ ಆಕೆಗೆ ತಿಳಿಸಿ ಎಂದಿದ್ದಾರೆ. ಕೆಲವರು ಫ್ಯಾಷನ್ ಹೆಸರಲ್ಲಿ ಇನ್ನು ಏನೆಲ್ಲ ನೋಡಬೇಕು ಎಂದಿದ್ದಾರೆ.
ಒಟ್ಟಾರೆ ಹಿಂದಿ ಬಿಗ್ ಬಾಸ್ ಒಟಿಟಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಉರ್ಫಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗಲೆಲ್ಲ ಡಿಫ್ರೆಂಟ್ ಫ್ಯಾಷನ್, ವಿಚಿತ್ರ ಉಡುಗೆ ತೊಡುಗೆ ಮೂಲಕವೇ ಗಮನ ಸೆಳೆಯುತ್ತಿದ್ದಾರೆ.
ಐಪಿಎಲ್ ಹರಾಜು ಪ್ರಕ್ರಿಯೆ ಆರಂಭ; ಯಾವ ಆಟಗಾರರು ಎಷ್ಟು ಮೊತ್ತಕ್ಕೆ ಯಾವ ತಂಡದ ಪಾಲು?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ