Latest

ಫಲ ನೀಡದ ಸಂಧಾನ: ಮುಂದುವರಿದ ಕಾಂಗ್ರೆಸ್ ಧರಣಿ; ಕರಗಿದ ಶಾಸಕರ ಸಂಖ್ಯೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರದ್ದ ರಾಷ್ಟ್ರಧ್ವಜ ಕುರಿತು ರಾಷ್ಟ್ರದ್ರೋಹಿ ಹೇಳಿಕೆ ನೀಡಿದ್ದು ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು ಎಂದು ಆಗ್ರಹಿಸಿದ ಕಾಂಗ್ರೆಸ್ ಶಾಸಕರು ವಿಧಾನಸಭೆ ಮತ್ತು ವಿಧಾನಪರಿಷತ್ ನಲ್ಲಿ ನಡೆಸುತ್ತಿರುವ ಅಹೋರಾತ್ರಿ ಮುಂದುವರಿದಿದೆ.

ಮುಖ್ಯಮಂತ್ರಿ ಬದವರಾಜ ಬೊಮ್ಮಾಯಿ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮೊದವರು ನಡೆಸಿದ ಮಾತುಕತೆ ವಿಫಲವಾಗಿದ್ದು, ಧರಣಿ ಮುಂದುವರಿಸಿದ್ದಾರೆ.

ಈ ಮಧ್ಯೆ, ಕಾಂಗ್ರೆಸ್ ನ ಒಟ್ಟೂ ಸಂಖ್ಯಾ ಬಲದ ಶಾಸಕರಲ್ಲಿ ಅರ್ಧದಷ್ಟು ಶಾಸಕರು ಮಾತ್ರ ಈಗ ಸದನದಲ್ಲಿದ್ದಾರೆ. ಆರಂಭದಲ್ಲಿ ಹೆಚ್ಚು ಕಡಿಮೆ 70ರಷ್ಟಿದ್ದ ಶಾಸಕರ ಪೈಕಿ ಈಗ 33 -34 ಶಾಸಕರು ಮಾತ್ರ ಉಳಿದುಕೊಂಡಿದ್ದಾರೆ. ಉಳಿದವರು ಊಟಕ್ಕೆಂದು ತೆರಳಿದವರು ಇನ್ನೂ ವಾಪಸ್ಸಾಗಲಿಲ್ಲ.

ಮುಖಂಡರಾದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ, ಎಂ.ಬಿ.ಪಾಟೀಲ ಮೊದಲಾದವರು ಸದನದಲ್ಲೇ ಇದ್ದಾರೆ. ಬೆಳಗಾಗುವ ಮುನ್ನ ಶಾಸಕರ ಸಂಖ್ಯೆ ಎಷ್ಟಿರಲಿದೆ ಕಾದು ನೋಡಬೇಕಿದೆ.

ಕಾಂಗ್ರೆಸ್ಸಿಗರ ಮನವೊಲಿಸಲು ಸಿಎಂ, ಸ್ಪೀಕರ್, ಬಿಎಸ್ವೈ ಯತ್ನ

 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button