Latest

ಗಾಂಧಿ ಆಶ್ರಮ, ಬೊಟಾನಿಕಲ್ ಗಾರ್ಡನ್ ಗಳಿಗೆ ಹಣದ ನಿರೀಕ್ಷೆಯಲ್ಲಿ ಶಾಸಕ ಹರ್ಷವರ್ಧನ್

ಸಬರಮತಿ ಆಶ್ರಮದ ಮಾದರಿಯಲ್ಲಿ ಬದನವಾಳು ಗ್ರಾಮ ಅಭಿವೃದ್ಧಿ; ಶಾಸಕ ಹರ್ಷವರ್ಧನ್

 

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬದನವಾಳು ಗಾಂಧಿ ಆಶ್ರಮ ಮತ್ತು ನಂಜನಗೂಡು ಪಟ್ಟಣದ ಉದ್ದೇಶಿತ ಕಪಿಲವನದ ಅಭಿವೃದ್ಧಿಗೆ ಪ್ರಸಕ್ತ ಹಣಕಾಸು ವರ್ಷದ ಬಜೆಟ್ ನಲ್ಲಿ 20 ಕೋಟಿ ರೂಪಾಯಿಗಳ ಅನುದಾನ ನೀಡುವಂತೆ ನಂಜನಗೂಡು ಶಾಸಕ ಬಿ ಹರ್ಷವರ್ಧನ್ ಅವರು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರಲ್ಲಿ ಮನವಿಮಾಡಿದ್ದಾರೆ.

ವಿಧಾನಸೌಧದಲ್ಲಿ ಅವರು ಸಚಿವರಿಗೆ ಮನವಿಸಲ್ಲಿಸಿದರು. ಗಾಂಧಿ ಆಶ್ರಮ ಇರುವ ಬದನವಾಳು ಗ್ರಾಮವನ್ನು ಗುಜರಾತ್ ಸಬರಮತಿ ಆಶ್ರಮದ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಹರ್ಷವರ್ಧನ ಸಚಿವರಿಗೆ ವಿವರಿಸಿದರು.

ಈಗಾಗಲೇ ನೀಲನಕ್ಷೆಯನ್ನು ಸಿದ್ಧಪಡಿಸಲಾಗಿದೆ. ಖಾದಿನೂಲುವ ಕೇಂದ್ರ ಕಾರ್ಯನಿರ್ವಹಿಸುತ್ತಿದ್ದ ಬದನವಾಳುವಿಗೆ ಮಹಾತ್ಮಗಾಂಧಿ ಭೇಟಿ ನೀಡಿದ್ದರು. ಆ ಕೇಂದ್ರ ಇನ್ನೂ ಕಾರ್ಯನಿರ್ವಹಿಸುತ್ತಿದೆ. ಐತಿಹಾಸಿಕ ಮಹತ್ವಹೊಂದಿರುವ ಈ ಸ್ಥಳವನ್ನು ಮಹಾತ್ಮರ 150ನೇ ವರ್ಷಾಚರಣೆ ಅಂಗವಾಗಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ ಎಂದು ಶಾಸಕರು ತಿಳಿಸಿದರು. ಅಭಿವೃದ್ಧಿಗಾಗಿ ತಾವು ರೂಪಿಸಿರುವ ಯೋಜನೆಗಳ ಪ್ರತಿಯನ್ನು ಸಹ ಸಚಿವರಿಗೆ ಸಲ್ಲಿಸಿದರು.

ದೇವಾಲಯಗಳ ನಗರ ಎಂದೇ ಪ್ರಸಿದ್ಧವಾಗಿರುವ ನಂಜನಗೂಡನ್ನು ಹಸಿರು ನಗರವನ್ನಾಗಿ ಸಹ ಮಾಡಲು ಉತ್ಸುಕರಾಗಿರುವ ಶಾಸಕರು, ಕಪಿಲವನವನ್ನು ಊಟಿಯ ಸಸ್ಯೋದ್ಯಾನದ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಯೋಜಿಸಿದ್ದಾರೆ.

ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ಶ್ರೀಕಂಠೇಶ್ವರ ದೇವಸ್ಥಾನದಿಂದಾಗಿ ನಂಜನಗೂಡು ಪ್ರಸಿದ್ಧ ಪ್ರವಾಸಿ ಸ್ಥಳವಾಗಿದೆ ಎಂದು ಹರ್ಷವರ್ಧನ್ ಅವರುತಿಳಿಸಿದರು. ಈ ಪಟ್ಟಣವು ಮೈಸೂರಿನಿಂದ ಕೇವಲ 23 ಕಿಮೀದೂರದಲ್ಲಿದೆ. ಪಟ್ಟಣದ ಸಮೀಪದಲ್ಲಿ ಸಾಗುವ ರಾಷ್ಟ್ರೀಯ ಹೆದ್ದಾರಿಯು ಕೇರಳ ಮತ್ತು ತಮಿಳುನಾಡಿಗೆ ಸಂಪರ್ಕ ಕಲ್ಪಿಸುತ್ತದೆ.

ನಂಜನಗೂಡು ಐತಿಹಾಸಿಕ ಸ್ಥಳ ಮಾತ್ರವಲ್ಲ ಭೌಗೋಳಿಕವಾಗಿಯೂ ಸುಂದರವಾಗಿದೆ. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಸರ್ಕಾರವು ಪ್ರಸಕ್ತಸಾಲಿನ ಬಜೆಟ್ ನಲ್ಲಿ ಎರಡೂ ಯೋಜನೆಗಳನ್ನು ಸೇರಿಸಬೇಕು ಎಂದು ಅವರು ಒತ್ತಾಯಿಸಿದರು.
ಒಂದೇ ಪ್ರಕರಣದಲ್ಲಿ 38 ಅಪರಾಧಿಗಳಿಗೆ ಮರಣದಂಡನೆ, 11 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button