ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ವಿಶ್ವ ಹಿಂದೂ ಪರಿಷತ್ ಉತ್ತರ ಕರ್ನಾಟಕ ಸಹಸಂಘಟನಾ ಮಂತ್ರಿ ಭೂಮಿ ಪೂಜೆ ನಡೆಸಿಕೊಟ್ಟರು.
ವೇದಿಕೆ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ಪೂಜ್ಯ ಶ್ರೀ ಜಗದ್ಗುರು ಪಂಚ ಮ ಶಿವಲಿಂಗೇಶ್ವರ ಮಹಾಸ್ವಾಮೀಜಿ ನಿಡಸೋಸಿ ಮಾತನಾಡುತ್ತ ಈ ನಾಡಿಗೆ ದಕ್ಷಿಣ ಕಾಳಿ ಮಂದಿರ ವಿಶೇಷ ಮತ್ತು ಕಾಳಿ ಆರಾಧಕರಿಗೆ ಒಂದು ಅವಕಾಶ ಮಾಡಿಕೊಟ್ಟ ಶ್ರೀ ಶಿವಾನಂದ ಗುರೂಜಿಯವರು ಸ್ವಂತ ಕಾಳಿ ದೇವಿಯನ್ನು ಒಲಿಸಿಕೊಂಡು. ನಾಡಿನ ಉದ್ದಾರಕ್ಕೆ ಶ್ರಮಿಸುತ್ತಿದ್ದಾರೆ.ಈ ಮಂದಿರದ ಖರ್ಚು ಅಂದಾಜು ಮೂರು ಕೋಟಿ ಬರಲಿದ್ದು ಈ ಮಂದಿರ ಸಮಾಜದಮಂದಿರ ಆಗಬೇಕೆಂದು ಸಮಾಜದ ಬಾಂಧವರಲ್ಲಿ ಆಗ್ರಹ ಮಾಡಿದರು.
ಪಿಜಿ ಹುಣ ಶ್ಯಾಳ ಪೂಜ್ಯ ಶ್ರೀ ನಿಜಗುಣ ದೇವರು ತಮ್ಮ ಆಶೀರ್ವಾದದಲ್ಲಿ ಸನ್ಯಾಸಿಗಳಾದ ನಾವು ವಿದ್ಯಾ ಗುರುಗಳನ್ನು ಮತ್ತು ದೀಕ್ಷಾ ಗುರುಗಳನ್ನು ಸ್ಮರಿಸುವುದು ಸನ್ಯಾಸಿಗಳ ಕರ್ತವ್ಯಗಳೆಂದರು. ಸಮ್ಮುಖ ವಹಿಸಿದ್ದ ಶ್ರೀ ಚಂದ್ರಶೇಖರ ಸ್ವಾಮೀಜಿ ಹುಕ್ಕೇರಿ ಹಿರೇಮಠ ಬೆಳಗಾವಿ ಸ್ವಾಮೀಜಿಗಳಾದವರು ಪೂಜ್ಯ ಶ್ರೀ ಶಿವಾನಂದ ಗುರೂಜಿ ಅವರ ಹತ್ತಿರ ಬಂದು ನೋಡಬೇಕು ಕೇವಲ ಐದು ವರ್ಷದಲ್ಲಿ ಜ್ಞಾನ ಮಂದಿರ, ಗೋಶಾಲೆ ಗುರುಮಂದಿರ ಕಾಳಿ ಮಂದಿರ ಗುರುಕುಲ ಇದು ಪೂಜ್ಯರ ಮಹಾಸಾಧನೆ. ಸಾನಿಧ್ಯ ವಹಿಸಿದ ಪೂಜ್ಯ ಶ್ರೀ ಗುರುಸಿದ್ಧ ಮಹಾಸ್ವಾಮಿಜಿ ಕಾರಂಜಿ ಮಾಠ ಬೆಳಗಾವಿ ಇವರು ಆಶ್ರಮಶ ಸ್ವಾವಲಂಬಿ ಮತ್ತು ಕೃಷಿ ಗೋಶಾಲೆ ಜ್ಞಾನಮಂದಿರ ಗುರುಮಂದಿರ ವಿಶೇಷ ಸಾಧಕರಿಗೆ ಅಲ್ಪ ಸಮಯದಲ್ಲಿ ಈ ನಾಡಿಗೆ ದೊರಕಿದ್ದು ಪುಣ್ಯ ಕಾರ್ಯವಾಗಿದೆ ಎಂದರು.
ಪ್ರಾಸ್ತಾವಿಕ ನುಡಿಗಳನ್ನು ಆಡಿದ ಪೂಜ್ಯಶ್ರೀ ಶಿವಾನಂದ್ ಗುರೂಜಿ ಮಹಾಕಾಳಿ ಮಂದಿರ ಬಗ್ಗೆ ನೆರೆದ ಸಭಿಕರಿಗೆ ಮಹಾಕಾಳಿ ಶಕ್ತಿ ಸತ್ಯದರ್ಶನವನ್ನು ಅವರು ಅನುಭವಕ್ಕೆ ಬಂದ ದೇವಿ ಸ್ವರೂಪ ಮಂದಿರ ಎಂದು ಹೇಳಿದರು. ಆಶಯನುಡಿ ಶ್ರೀ ಮನೋಹರ್ ಜಿ ಮಠ ಇವರು ಮಂದಿರ ಜೊತೆಗೆ ಮಠಗಳ ಮಹತ್ವ ತಿಳಿಸಿಕೊಟ್ಟರು ಮತ್ತು ಭಾರತ ದರ್ಶನ ಮಾಡಿಕೊಟ್ಟರು. ಮಹಾದಾನಿಗಳ ಸನ್ಮಾನ ಕೂಡ ನೆರವೇರಿತು ಈ ಮಂದಿರ ೩ ಕೋಟಿ ರೂ ಖರ್ಚು ಇದು ಒಂದು ಕೋಟಿ ಕಿಂತ ಹೆಚ್ಚು ಹಣವನ್ನು ದಾನಿಗಳು ನೀಡಿದರು.
ಪೂಜ್ಯ ಅಡಿವಿ ಸಿದ್ದೇಶ್ವರ ಸ್ವಾಮೀಜಿ ಅಂಕಲಗಿ ಮಠ ಅವರು ಉಪಸ್ಥಿತರಿದ್ದರು. ಇವರು ಒಂದು ಲಕ್ಷ ರೂ ದೇಣಿಗೆ ನೀಡಿದರು. ಮೂರು ವರ್ಷದಲ್ಲಿ ಈ ಮಂದಿರ ಪೂರ್ಣಗೊಳ್ಳುತ್ತದೆ. ವಂದನಾರ್ಪಣೆ ಶ್ರೀಕಾಂತ್ ಕದಮ್ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಅಧ್ಯಕ್ಷರು, ಸ್ವಾಗತ ಮತ್ತು ಪರಿಚಯ ಡಾಕ್ಟರ್ ಶ್ರೀಬಸವರಾಜ ಬಾಗೋಜಿ ವಿಶ್ವ ಹಿಂದೂ ಪರಿಷತ್ ನಗರ ಅಧ್ಯಕ್ಷ, ನಿರೂಪಣೆ ಮತ್ತು ಶಾಂತಿ ಮಂತ್ರ ಬಸವರಾಜ್ ಹಳಂಗಳಿ ವಿಶ್ವ ಹಿಂದೂ ಪರಿಷತ್ ಧರ್ಮಆಚಾರರ ಸಂಪರ್ಕ, ಮಠದ ಸದ್ಭಕ್ತರು ಮತ್ತು ಮಾತೆಯರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ನಂದಗಡ: ಹಿಜಾಬ್ VS ಕೇಸರಿ ಶಾಲು ಸುಖಾಂತ್ಯ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ