ನಿಯತಿ ಫೌಂಡೇಶನ್ ಅಧ್ಯಕ್ಷೆ ಡಾ.ಸೋನಾಲಿ ಸರ್ನೋಬತ್ ಕೊಡುಗೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ನಿಯತಿ ಫೌಂಡೇಶನ್ ವತಿಯಿಂದ ಆರ್ಷ ವಿದ್ಯಾ ಕೇಂದ್ರದ ಮಹಿಳಾ ಆಟಗಾರ್ತಿಯರಿಗೆ ಸ್ಪೋರ್ಟ್ಸ್ ಕಿಟ್ ವಿತರಿಸಲಾಯಿತು.
ಆರ್ಷ ವಿದ್ಯಾ ಕೇಂದ್ರದಲ್ಲಿರುವ 12 ಮಣಿಪುರ ಮೂಲದ ಮಹಿಳಾ ಫುಟ್ಬಾಲ್ ಆಟಗಾರರಿಗೆ ಕ್ರೀಡಾ ಕಿಟ್ ನೀಡಲಾಯಿತು.
ಆನಗೋಳದ ಸಂತ ಮೀರಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಓದುತ್ತಿರುವ ಆರ್ಷ್ ವಿದ್ಯಾ ಕೇಂದ್ರದ 12 ಮಹಿಳಾ ಫುಟ್ಬಾಲ್ ಆಟಗಾರರಿಗೆ ಫೌಂಡೇಶನ್ ವತಿಯಿಂದ ಫುಟ್‌ಬಾಲ್ ಶೂ ಮತ್ತು ಕ್ರೀಡಾ ಕಿಟ್‌ಗಳನ್ನು ನೀಡಲಾಯಿತು.
ಸಂತ ಮೀರಾ ಶಾಲೆಯ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ನಿಯತಿ ಫೌಂಡೇಶನ್ ಅಧ್ಯಕ್ಷೆ ಡಾ.ಸೋನಾಲಿ ಸರ್ನೋಬತ್, ಸಂತ್ ಮೀರಾ ಶಾಲೆಯ ಮುಖ್ಯೋಪಾಧ್ಯಾಯಿನಿ ಸುಜಾತಾ ದಪ್ತದಾರ, ಆರ್ಷ ವಿದ್ಯಾಕೇಂದ್ರದ ಸೋಮನಾಥ ಚೌಧರಿ ಮುಖ್ಯೋಪಾಧ್ಯಾಯಿನಿ ರಿತುಜಾ ಜಾಧವ್ ಭಾಗವಹಿಸಿದ್ದರು.
ಪ್ರಾರಂಭದಲ್ಲಿ ಶಾಲಾ ಶಿಕ್ಷಕಿ ಪ್ರೀತಿ ಕೋಲ್ಕಾರ, ಅಮೃತಾ ಪೇಟಕರ ಪ್ರಾರ್ಥನೆ ಹಾಡಿದರು. ಶಿಕ್ಷಕಿ ರೀಟಾ ಧೋಂಗಡಿ ಅತಿಥಿಗಳನ್ನು ಪರಿಚಯಿಸಿದರು. ಇದಾದ ನಂತರ ನಿಯತಿ ಫೌಂಡೇಶನ್ ಅಧ್ಯಕ್ಷೆ ಡಾ.ಸೋನಾಲಿ ಸರ್ನೋಬತ್ ಅವರು ಪ್ರತಿಷ್ಠಾನದ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿ, ಮೇಘಾಲಯದ ಶಾಲಾ ವಿದ್ಯಾರ್ಥಿನಿಯರಿಗೆ ಫುಟ್ಬಾಲ್ ಶೂ ಮತ್ತು ಕ್ರೀಡಾ ಕಿಟ್‌ಗಳನ್ನು ನೀಡಿ ಮುಂಬರುವ ಕ್ರೀಡಾ ಸ್ಪರ್ಧೆಗಳಲ್ಲಿ ಅತ್ಯುತ್ತಮ ಸಾಧನೆಗೈಯಲು ಆಟಗಾರರಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸುಜಾತಾ ದಪ್ತದಾರ ಅವರು ಡಾ.ಸರ್ನೋಬತ್ ಅವರಿಗೆ ಧನ್ಯಾವದ ಸಲ್ಲಿಸಿದರು. ಶಾಲೆಯ ಕ್ರೀಡಾ ಶಿಕ್ಷಕರಾದ ಚಂದ್ರಕಾಂತ ಪಾಟೀಲ, ಪೂಜಾ ಮುಚ್ಚಂಡಿ, ಅನುರಾಧ ಪುರಿ, ಚಂದ್ರಕಾಂತ ತುರ್ಕವಾಡಿ, ವಿಣಾ ಜೋಶಿ, ಬಸವಂತ ಪಾಟೀಲ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.
ಕ್ಷತ್ರೀಯ ಮರಾಠಾ ಸಮಾಜದ ಮಹಿಳಾ ಘಟಕದ ಅಧ್ಯಕ್ಷರಾಗಿ ಡಾ.ಸೋನಾಲಿ ಸರ್ನೋಬತ್
ನಿಯತಿ ಫೌಂಡೇಶನ್ ಗೆ ಒಂದು ಲಕ್ಷ ರೂ. ದೇಣಿಗೆ; ಧನ್ಯವಾದ ಸಮರ್ಪಿಸಿದ ಡಾ.ಸೋನಾಲಿ ಸರ್ನೋಬತ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ