Latest

“ಎಲ್ಲಿ ನಿನ್ನ ಗಂಡ?, ಅವನನ್ನು ಬಿಡುವುದಿಲ್ಲ, ಎಲ್ಲಿ ಅಡಗಿ ಕುಳಿತಿದ್ದಾನೆ?”

ಅನಂತ್ ಕುಮಾರ್ ಹೆಗಡೆಗೆ ಕೊಲೆ ಬೆದರಿಕೆ

ಪ್ರಗತಿವಾಹಿನಿ ಸುದ್ದಿ, ಶಿರಸಿ:
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಂತ್ ಕುಮಾರ್ ಹೆಗಡೆಗೆ ಅಪರಿಚಿತ ವ್ಯಕ್ತಿಯಿಂದ ಕೊಲೆ ಮಾಡುವುದಾಗಿ ಮತ್ತೆ ದೂರವಾಣಿ ಕರೆ ಬಂದಿದೆ.
ಶಿರಸಿಯ ಕೆ ಎಚ್ ಬಿ ಕಾಲೊನಿಯಲ್ಲಿನ ಅನಂತ್ ಕುಮಾರ್ ಹೆಗಡೆ ಮನೆಯ ಲ್ಯಾಂಡ್ ಫೋನ್ ಗೆ ತಡರಾತ್ರಿ 12:45ರ ಸುಮಾರಿಗೆ 0022330000 ಈ ಸಂಖ್ಯೆಯಿಂದ ಅನಾಮದೇಯ ವ್ಯಕ್ತಿಯಿಂದ ಕರೆ ಬಂದಿದೆ. ಈ ಸಮಯದಲ್ಲಿ ಅನಂತ್ ಕುಮಾರ್ ಹೆಗಡೆ ಪತ್ನಿ ಶ್ರೀರೂಪಾ ಹೆಗಡೆ ಕರೆಯನ್ನು ಸ್ವೀಕರಿಸಿದ್ದಾರೆ.
“ಎಲ್ಲಿ ನಿನ್ನ ಗಂಡ? ಅವನನ್ನು ಬಿಡುವುದಿಲ್ಲ, ಎಲ್ಲಿ ಅಡಗಿ ಕುಳಿತಿದ್ದಾನೆ? ಒಂದು ಬಾರಿ ತಪ್ಪಿಸಿಕೊಂಡ ಮಾತ್ರಕ್ಕೆ ಪ್ರತೀ ಬಾರಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅವನನ್ನು ಮುಗಿಸುತ್ತೇವೆ. ಪೊಲೀಸ್  ಭದ್ರತೆ ಯಲ್ಲಿ ಎಷ್ಟು ದಿನಾ ತಿರುಗಾಡುತ್ತಾರೋ ನೋಡುತ್ತೇವೆ. ನಿಮ್ಮ ಜೊತೆಗೆ ನಿಮ್ಮ ಭದ್ರತಾ ಸಿಬ್ಬಂದಿಯನ್ನೂ  ಮುಗಿಸುತ್ತೇವೆ” ಎಂದು ಉರ್ದು ಮಿಶ್ರಿತ ಹಿಂದಿಯಲ್ಲಿ ಅನಾಮದೇಯ ವ್ಯಕ್ತಿ ಕರೆ ಮಾಡಿದ್ದಾನೆ.
ಈ ವೇಳೆ ಸಚಿವರು ಮನೆಯಲ್ಲಿಯೇ ಮತ್ತೊಂದು ಕರೆಯಲ್ಲಿ ಮಾತನಾಡುತ್ತಿದ್ದರು. ಬೆದರಿಕೆ ಕರೆ ಎಂದ ತಕ್ಷಣವೇ  ಭದ್ರತಾ ಸಿಬ್ಬಂದಿಗಳಿಗೆ ಕರೆಯ ಸಂಭಾಷಣೆಯನ್ನು ಕೇಳಿಸಿದ್ದಾರೆ. ಈ ಸಂಬಂಧ ಸಚಿವರ ಆಪ್ತ ಕಾರ್ಯದರ್ಶಿ ಸುರೇಶ್ ಶೆಟ್ಟಿಯಿಂದ ಶಿರಸಿ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅನಂತ್ ಕುಮಾರ್ ಹೆಗಡೆಗೆ ಈ ಹಿಂದೆ ಕೂಡಾ ಜೀವ ಬೆದರಿಕೆ ಕರೆಗಳು ಬಂದಿದ್ದವು. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button