Kannada NewsKarnataka News

Good News – ಕೋವಿಡ್ ರಿಲೀಫ್ ಪ್ಯಾಕೇಜ್ – ಮಾ.4 ರಂದು ನೊಂದಣಿ ; ಲಿಂಕ್ ಇಲ್ಲಿದೆ

ಹೋಟೆಲ್, ರೆಸಾರ್ಟ್, ರೆಸ್ಟೋರೆಂಟ್ ಮತ್ತು ಮನರಂಜನಾ ಪಾರ್ಕ್‌

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಕೊವಿಡ್-೧೯ ಪ್ರವಾಸೋದ್ಯಮ ವಲಯಕ್ಕೆ ತೀವ್ರವಾದ ಹೊಡೆತವನ್ನು ನೀಡಿದ್ದು, ಇದರಿಂದ ಅಪಾರವಾದ ನಷ್ಟವನ್ನು ಅನುಭವಿಸಿದ ಹೋಟೆಲ್, ರೆಸಾರ್ಟ್, ರೆಸ್ಟೋರೆಂಟ್ ಮತ್ತು ಮನರಂಜನಾ ಪಾರ್ಕಗಳನ್ನು ತೆರೆಯಲು ಮತ್ತು ನಿರ್ವಹಣೆ ಮಾಡಲು ರಾಜ್ಯ ಸರ್ಕಾರವು ಪ್ರೋತ್ಸಾಹದಾಯಕ ಕ್ರಮಗಳನ್ನು ಕೈಗೊಂಡಿದೆ.

ಈ ಪ್ರಸ್ತುತ ಆರ್ಥಿಕ ವರ್ಷವು ಮುಕ್ತಾಯಗೊಳ್ಳುತ್ತಿರುವುದರಿಂದ ಸರ್ಕಾರವು ನೀಡಲಿರುವ ಕೋವಿಡ್ ರಿಲೀಫ್ ಪ್ಯಾಕೇಜ್ ಅನ್ನು ಪಡೆಯಲು ಪ್ರವಾಸೋದ್ಯಮ ಇಲಾಖೆಯು ನೊಂದಣಿ ಪ್ರಕ್ರಿಯೆಯನ್ನು ಶೀಘ್ರಗೊಳಿಸಲು ಮಾರ್ಚ್ ೪ ರಂದು ಬೆಳಗಾವಿಯ ರಾಮದೇವ ಹೋಟೇಲ್‌ನಲ್ಲಿ ನೊಂದಣಿ ಶಿಬಿರವನ್ನು ಹಮ್ಮಿಕೊಂಡಿದೆ.
೨೦೨೧-೨೨ನೇ ಹಣಕಾಸಿನ ವರ್ಷದಲ್ಲಿ ಹೊಟೇಲ್, ರೆಸಾರ್ಟ್, ರೆಸ್ಟೋರೆಂಟ್, ಮತ್ತು ಮನರಂಜನಾ ಪಾರ್ಕ್‌ಗಳ ಶೇ.೫೦. ಆಸ್ತಿ ತೆರಿಗೆಯನ್ನು ಮಾತ್ರ ಪಾವತಿ ಮಾಡಬೇಕಿದ್ದು, ಉಳಿದ ಶೇ.೫೦. ರಷ್ಟನ್ನು ರಿಯಾಯಿತಿ ಹಾಗೂ ಎಪ್ರಿಲ್, ಮೇ, ಜೂನ್-೨೦೨೧ ತಿಂಗಳಲ್ಲಿ ವಿದ್ಯುತ್ ಶಕ್ತಿ ಡಿಮಾಂಡ್/ಪಿಕ್ಸಡ್ ಶುಲ್ಕವನ್ನು ಪಾವತಿ ಮಾಡುವದರಿಂದ ವಿನಾಯಿತಿ ನೀಡಲಾಗಿದೆ.
ಈ ವಿನಾಯಿತಿ ಪಡೆಯಲು ಇಲಾಖೆಯ ಅಧಿಕೃತ ಜಾಲತಾಣವಾದ  http://www.karnatakatourism.org ಮೂಲಕ KTT ಈ ಅಡಿ ನೊಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿರುತ್ತದೆ. ಈ ನೊಂದಣ ವಿಶೇಷ ಶುಲ್ಕ ೫೦೦ ರೂ.ಗಳನ್ನು ಮಾತ್ರ ನಿಗದಿಗೊಳಿಸಿ, ಪರವಾನಗಿ ಅವಧಿಯನ್ನು ೫ ವರ್ಷಗಳವರೆಗೆ ವಿಸ್ತರಿಸಿ ಇಲಾಖೆಯಿಂದ ಪರವಾನಗಿ ನೀಡಲಾಗುತ್ತಿರುತ್ತದೆ.
ಈ ಶಿಬಿರದಲ್ಲಿ ಹೊಟೇಲ್, ರೆಸಾರ್ಟ್, ರೆಸ್ಟೋರೆಂಟ್, ಮತ್ತು ಮನರಂಜನಾ ಪಾರ್ಕ್‌ಗಳ ಮಾಲೀಕರು ಪಾಲ್ಗೊಂಡು ತಮ್ಮ ಸಂಸ್ಥೆಗಳ ನೊಂದಣಿಯನ್ನು ಇಲಾಖೆಯಲ್ಲಿ ಮಾಡಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: ೦೮೩೧-೨೪೭೦೮೭೯ ಹಾಗೂ ಮೊಬೈಲd ನಂಬರ್: ೯೫೯೧೭೭೮೮೨೪ ಗೆ ಸಂಪರ್ಕಿಸಬಹುದು ಎಂದು ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪಾಕಿಸ್ತಾನೀಯರ ಪ್ರಾಣ ಉಳಿಸಿದ ಭಾರತದ ರಾಷ್ಟ್ರ ಧ್ವಜ!

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button