Latest

ಉಕ್ರೇನ್ ರೈತರ ವೀರಾವೇಶಕ್ಕೆ ರಷ್ಯಾ ತೆತ್ತ ಬೆಲೆ ಎಷ್ಟು ಗೊತ್ತೇ? ಇದು ರೈತ ಸೈನ್ಯದ ತಾಕತ್ತು

ಕೀವ್ –  ರಷ್ಯಾ- ಉಕ್ರೇನ್ ನಡುವಿನ ಯುದ್ಧ ಬುಧವಾರ ಏಳನೇ ದಿನಕ್ಕೆ ಕಾಲಿಟ್ಟಿದ್ದು ದಿನದಿಂದ ದಿನಕ್ಕೆ ತೀವ್ರತೆ ಪಡೆಯುತ್ತಿದೆ. ರಷ್ಯಾ ಸೈನ್ಯ ಉಕ್ರೇನ್‌ನೊಳಗೆ ನುಗ್ಗಿದ್ದು ಬಹುತೇಕ ನಗರಗಳಲ್ಲಿ ಸಾರ್ವಜನಿಕರನ್ನೂ ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿರುವ ಬಗ್ಗೆ ವರದಿಯಾಗುತ್ತಿದೆ.

ಆದರೆ ಇನ್ನೊಂದಡೆ ಉಕ್ರೇನ್‌ನ ರೈತರು ವೀರಾವೇಶ ಮೆರೆದಿದ್ದು ರಷ್ಯಾದ ಯುದ್ಧ ಟ್ಯಾಂಕರ್‌ಗಳು ಮಿಸೈಲ್‌ಗಳು ಸೇರಿದಂತೆ ೧೧೨ ಕೋಟಿ ರೂ. ಮೌಲ್ಯದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡು ಸುಟ್ಟು ಭಸ್ಮ ಮಾಡಿದ ಘಟನೆ ಬೆಳಕಿಗೆ ಬಂದಿದೆ.

ದಕ್ಷಿಣ ಉಕ್ರೇನ್‌ನ ಬಶ್ಟಾಂಕಾ ಬಳಿ ರೈತರ ಹೊಲಗಳಲ್ಲಿ ನೂರಾರು ಕೋಟಿ ಮೌಲ್ಯದ ಶಸ್ತ್ರಾಸ್ತ್ರಗಳನ್ನು ರಷ್ಯನ್ ಸೇನಾ ನೆಲೆ ನಿರ್ಮಿಸಿಕೊಂಡು ಇಟ್ಟಿದೆ. ಇದರ ಕಾವಲಿಗೂ ನೂರಾರು ರಷ್ಯನ್ ಸೈನಿಕರಿದ್ದಾರೆ. ಆದರೆ ಇದ್ಯಾವುದನ್ನೂ ಲೆಕ್ಕಿಸದ ಬಶ್ಟಾಂಕಾದ ರೈತರು ರಷ್ಯನ್ ಸೇನಾ ನೆಲೆಗೆ ದಾಳಿ ಮಾಡಿ ಶಸ್ತ್ರಾಸ್ತ್ರಗಳಿಗೆ ಬೆಂಕಿ ಹಚ್ಚಿದ್ದಾರೆ. ರಷ್ಯಾದ ಅತ್ಯಂತ ಬೆಲೆ ಬಾಳುವ ಸರ್ಫೇಸ್ ಟು ಏರ್ ಮಿಸೈಲ್ ಸೇರಿದಂತೆ ಕೋಟ್ಯಾಂತರ ಶಸ್ತ್ರಾಸ್ತ್ರಗಳು ಸಂಪೂರ್ಣ ಸುಟ್ಟು ಬೂದಿಯಾಗಿದೆ. ಈ ಸಂದರ್ಭದಲ್ಲಿ ರೈತ ಸೈನ್ಯದ ವೀರಾವೇಶಕ್ಕೆ ರಷ್ಯನ್ ಸೈನ್ಯ ಬೆದರಿ ಕಾಲ್ಕಿತ್ತಿದೆ.

ಘಟನೆಯನ್ನು ಬಶ್ಟಾಂಕಾದ ಮೇಯರ್ ಬೋರಿಸ್ ಫಿಲಾಟೋವ್ ಖಚಿತಪಡಿಸಿದ್ದಾರೆ. ಘಟನೆಯ ಕುರಿತು ಮಾತನಾಡಿರುವ ಅವರು, ತಾನು ಯುದ್ಧ ಮತ್ತು ರಕ್ತಪಾತದ ಬಗ್ಗೆ ವಯಕ್ತಿಕವಾಗಿ ಒಲವು ಹೊಂದಿಲ್ಲ. ಆದರೆ ಉಕ್ರೇನ್ ಮೇಲಿನ ರಷ್ಯಾ ದಾಳಿ ರೈತರನ್ನು ಕೆರಳಿಸಿದೆ. ರೈತರ ಸೈನ್ಯವನ್ನು ಎದುರಿಸಲು ರಷ್ಯಾ ಸೈನ್ಯಕ್ಕೆ ಸಾಧ್ಯವಾಗದೆ ಇಲಿಯಂತೆ ಕಾಲ್ಕಿತ್ತಿದ್ದಾರೆ. ರೈತರ ವೀರಾವೇಶ ಎಷ್ಟಿತ್ತೆಂದರೆ ಸ್ವತಃ ನಮಗೂ ಅವರನ್ನು ತಡೆಯಲು ಸಾಧ್ಯವಾಗಲಿಲ್ಲ ಎಂದು ವಿವರಿಸಿದ್ದಾರೆ.

Home add -Advt

ಪುಟಿನ್ ಬೆಂಬಲಕ್ಕೆ ನಿಂತ ಅಭಯ್ ಕುಮಾರ್ ಯಾರು ? ಪುಟಿನ್ ಸರಕಾರದಲ್ಲೊಬ್ಬ ಭಾರತೀಯ ! ಓದಿ ಈ ಕುತೂಹಲಕರ ಸುದ್ದಿ

Related Articles

Back to top button