ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಆಶಾ ಕಾರ್ಯಕರ್ತೆಯರ ಹಾಗೂ ಬಿಸಿಯೂಟ ತಯಾರಕರ ಗೌರವ ಧನ ಹೆಚ್ಚಳ ಮಾಡಲಾಗುವುದು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಘೋಷಿಸಿದ್ದಾರೆ. ಬಹುದಿನಗಳ ಬೇಡಿಕೆಗೆ ರಾಜ್ಯ ಸರ್ಕಾರ ಸ್ಪಂದಿಸಿದ್ದು, ಗೌರವ ಧನ ಹೆಚ್ಚಳ ಮಾಡುವುದಾಗಿ ಘೋಷಿಸಿದೆ.
ವಿಧಾನಸೌಧದಲ್ಲಿ 2022-23ನೇ ಸಾಲಿನ ಬಜೆಟ್ ಮಂಡನೆ ವೇಳೆ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ, ಆಶಾ ಕಾರ್ಯಕರ್ತೆಯರ ಗೌರವ ಧನ 1,000 ರೂಪಾಯಿ ಹೆಚ್ಚಿಸಲಾಗುವುದು. ಗ್ರಾಮ ಸಹಾಯಕರಿಗೆ 1000 ರೂ. ಹಾಗೂ ಬಿಸಿಯೂಟ ತಯಾರಕರಿಗೂ ತಲಾ 1000 ರೂ.ಗೌರವ ಧನ ಹೆಚ್ಚಳ ಮಾಡಲಾಗುವುದು ಎಂದರು.
ಇನ್ನು ಅಂಗನವಾಡಿ ಕಾರ್ಯಕರ್ತರಿಗೆ ಸೇವಾ ಅನುಭವ ಆಧಾರದಲ್ಲಿ 1000ನಿಂದ 1500 ರೂಗಳಷ್ಟು ಹೆಚ್ಚಳ ಮಾಡಲಾಗುವುದು. ಪ್ರವಾಸಿ ಗೈಡ್ ಗಳಿಗೆ ಮಾಸಿಕ 2,000 ಪ್ರೋತ್ಸಾಹ ಧನ ನೀಡಲಾಗುವುದು ಎಂದು ತಿಳಿಸಿದರು.
ರೈತ ಶಕ್ತಿ ಹೊಸ ಯೋಜನೆ ಘೋಷಿಸಿದ ಸಿಎಂ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ