Latest

ಖಾರ್ಕೀವ್ ತೊರೆದ ಭಾರತೀಯರು; ಸಿಎಂ ಹೇಳಿದ್ದೇನು?

 

ಪ್ರಗತಿವಾಹಿನಿ ಸುದ್ದಿ; ಹುಬ್ಬಳ್ಳಿ: ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರನ್ನು ಆಪರೇಷನ್ ಗಂಗಾ ಕಾರ್ಯಾಚರಣೆ ಮೂಲಕ ತ್ವರಿತವಾಗಿ ಏರ್ ಲಿಫ್ಟ್ ಮಾಡಲಾಗುತ್ತಿದೆ. 210 ಭಾರತೀಯರ ಏರ್ ಲಿಫ್ಟ್ ನಡೆದಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಐಎಎಫ್ ವಿಮಾನದಲ್ಲಿ 210 ಭಾರತೀಯರನ್ನು ಉಕ್ರೇನ್ ನಿಂದ ಕರೆ ತರಲಾಗಿದೆ. ದೆಹಲಿಯ ಹಿಂಡನ್ ಏರ್ ಬೇಸ್ ಗೆ ಬುಕಾರೆಸ್ಟ್ ನಿಂದ ಆಗಮಿಸಿದ್ದಾರೆ. ಉಕ್ರೇನ್ ನ ಖಾರ್ಕೀವ್ ನಗರದಲ್ಲಿದ್ದ ಎಲ್ಲಾ ಭಾರತೀಯರು ಆ ಪ್ರದೇಶ ತೊರೆದಿದ್ದಾರೆ. ಸಧ್ಯ ಖಾರ್ಕೀವ್ ನಲ್ಲಿ ಯಾವುದೇ ಭಾರತೀಯರು ಇಲ್ಲ ಎಂದು ಹೇಳಿದರು.

ಉಕ್ರೇನ್ ನಲ್ಲಿ ಸಿಲುಕಿರುವ ರಾಜ್ಯದ 200ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರಲಾಗುತ್ತಿದೆ. ರಾಯಭಾರ ಕಚೇರಿ ಸಿಬ್ಬಂದಿಗಳು ಸಹಾಯ ಮಾಡುತ್ತಿದ್ದಾರೆ. ಇನ್ನು ಉಕ್ರೇನ್ ನಲ್ಲಿ ಮೃತಪಟ್ಟ ನವೀನ್ ಮೃತದೇಹವನ್ನು ತರಲು ಪ್ರಯತ್ನ ನಡೆದಿದೆ. ಅಲ್ಲಿನ ಪರಿಸ್ಥಿತಿ ನೋಡಿಕೊಂಡು ಮೃತದೇಹ ತರಲಾಗುತ್ತದೆ ಎಂದು ಹೇಳಿದರು.
ಒಂದೇ ನಾಣ್ಯದ ಎರಡು ಮುಖಗಳಾದ ಎರಡೂ ರಾಷ್ಟ್ರೀಯ ಪಕ್ಷಗಳು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button