ಪ್ರಗತಿವಾಹಿನಿ ಸುದ್ದಿ; ಅಮೃತಸರ: ಪಂಜಾಬ್ ನ ಅಮೃತಸರ-ಅಟ್ಟಾರಿ ರಸ್ತೆಯಲ್ಲಿರುವ ಹೆಡ್ ಕ್ವಾರ್ಟಸ್ ನಲ್ಲಿ ತನ್ನ ಸಹೋದ್ಯೋಗಿಗಳ ಮೇಲೆಯೇ ಗುಂಡಿನ ದಾಳಿ ನಡೆಸಿ, ಐವರು ಹತ್ಯೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡ ಯೋಧ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಹೊಸವಂಟಮೂರಿಯವನು ಎಂದು ಗೊತ್ತಾಗಿದೆ.
144ನೇ ಬೆಟಾಲಿಯನ್ ನ ಬಿ ಕಾಯ್, ಕಾನ್ ಸ್ಟೇಬಲ್ ಆಗಿದ್ದ ಸತ್ಯಪ್ಪ ಎಸ್ ಕೆ, ಸಹೋದ್ಯೋಗಿಗಳು ಹಾಗೂ ಒಆರ್ ಎಸ್ ಬ್ಯಾರಕ್ ನಲ್ಲಿದ್ದವರ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಅಲ್ಲದೇ ಬಳಿಕ ತನಗೆ ತಾನೇ ಗುಂಡು ಹಾರಿಸಿಕೊಂಡಿದ್ದಾನೆ. ಒಟ್ಟು ಐವರು ಯೋಧರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 6 ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ.
34 ವರ್ಷದ ಸತ್ಯಪ್ಪ ವಂಟಮೂರಿಯವನಾಗಿದ್ದು ಮಾನಸಿಕ ಅಸ್ವಸ್ಥತೆಗೆ ಚಿಕಿತ್ಸೆ ಪಡೆಯುತ್ತಿದ್ದ ಎನ್ನಲಾಗುತ್ತಿದೆ. ಈ ಬಗ್ಗೆ ಪೂರ್ಣ ವಿವರ ಇನ್ನಷ್ಟೆ ಬರಬೇಕಿದೆ.
ಸಹೋದ್ಯೋಗಿಗಳ ಮೇಲೆಯೇ ಗುಂಡಿನ ದಾಳಿ; ಐವರು ಯೋಧರು ಸಾವು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ