ಮತ್ತೆ ಕಚ್ಚಾ ತೈಲ ಬೆಲೆ ಹೆಚ್ಚಳ: ಪೆಟ್ರೋಲ್-ಡೀಸೆಲ್ ದರದಲ್ಲಿ ಭಾರಿ ಏರಿಕೆ ಆತಂಕ; ಕಚ್ಚಾ ತೈಲ ಬ್ಯಾರೆಲ್ ಗೆ 130 ಡಾಲರ್ ನಿಗದಿ
ಪ್ರಗತಿವಾಹಿನಿ ಸುದ್ದಿ; ನವದೆಹಲಿ: ರಷ್ಯಾ ಹಾಗೂ ಉಕ್ರೇನ್ ಯುದ್ಧದ ಪರಿಣಾಮ ಭಾರತಕ್ಕೂ ತಟ್ಟಿದ್ದು, ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆಯಾಗುವ ಆತಂಕ ಎದುರಾಗಿದೆ.
ಈಗಾಗಲೇ ಬೆಲೆ ಏರಿಕೆಯ ಬಿಸಿಯಿಂದ ಕಂಗೆಟ್ಟಿದ್ದ ಜನಸಾಮಾನ್ಯರಿಗೆ ಪೆಟ್ರೋಲ್ – ಡೀಸೆಲ್ ದರ ಮತ್ತಷ್ಟು ಏರಿಕೆಯಾಗುವ ಭೀತಿ ಶುರುವಾಗಿದೆ. ರಷ್ಯಾ ಹಾಗೂ ಉಕ್ರೇನ್ ಯುದ್ಧ ತೀವ್ರಗೊಳ್ಳುತ್ತಿದ್ದಂತೆ ಕಚ್ಚಾ ತೈಲ ಬೆಲೆಯಲ್ಲಿ ಏರಿಕೆಯಾಗಿದೆ. ಇಂದು ಪ್ರತಿ ಬ್ಯಾರಲ್ ತೈಲ ಬೆಲೆ 10 ಯುಎಸ್ಡಿಗೂ ಹೆಚ್ಚು ಏರಿಕೆಯಾಗಿದೆ.
ದಿನದ ಆರಂಭದಲ್ಲಿ ಬ್ರೆಂಟ್ ಕಚ್ಚಾ ತೈಲ 10 ಯುಎಸ್ಡಿಗೂ ಹೆಚ್ಚು ಜಿಗಿತ ಕಂಡಿದ್ದು, 130 ಯುಎಸ್ಡಿ ಸಮೀಪ ತಲುಪಿದೆ. ಯು.ಎಸ್. ಕಚ್ಚಾ ತೈಲ ಬೆಂಚ್ಮಾರ್ಕ್ 9 ಯುಎಸ್ಡಿಗೂ ಅಧಿಕ ಏರಿಕೆಯಾಗಿದ್ದು, ಈಗ ಬ್ಯಾರಲ್ಗೆ 124 ಡಾಲರ್ಗೂ ಹೆಚ್ಚಿದೆ. ಇದರ ಬೆನ್ನಲ್ಲೇ ದೇಶದಲ್ಲಿ ಪೆಟ್ರೋಲ್-ಡೀಸೆಲ್ ದರ ಏರಿಕೆಯಾಗುವ ಸಾಧ್ಯತೆ ದಟ್ಟವಾಗಿದೆ.
ಒಂದೇ ಬಾರಿ ಪೆಟ್ರೋಲ್, ಡಿಸೆಲ್ ಬೆಲೆ ಐತಿಹಾಸಿಕ ದಾಖಲೆ ಏರಿಕೆ ಸಾಧ್ಯತೆ: 2 -3 ದಿನದಲ್ಲೇ ಬಿಗ್ ಶಾಕ್ ?
ಶಿಕ್ಷಣ ಸಂಸ್ಥೆ, ವಿಶ್ವ ವಿದ್ಯಾಲಯಗಳು ಧ್ವಂಸ; ಉಕ್ರೇನ್ ನಿಂದ ಬಂದ ವೈದ್ಯಕೀಯ ವಿದ್ಯಾರ್ಥಿಗಳ ಭವಿಷ್ಯವೇನು?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ