ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸಚಿವ ಶೇಖರ್ ಬಾಬು ಮಗಳು ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಗುಟ್ಟಾಗಿ ಪ್ರೇಮ ವಿವಾಹವಾಗಿ ತಂದೆಯಿಂದ ರಕ್ಷಣೆ ನೀಡುವಂತೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ನಡೆದಿದೆ.
ತಮಿಳುನಾಡು ಮುಜರಾಯಿ ಖಾತೆ ಸಚಿವ ಶೇಖರ್ ಬಾಬು ಮಗಳು ಜಯಕಲ್ಯಾಣಿ ಕೆಲ ದಿನಗಳಿಂದ ನಾಪತ್ತೆಯಾಗಿದ್ದರು. ಈ ಕುರಿತು ಚೆನ್ನೈನಲ್ಲಿ ದೂರು ದಾಖಲಾಗಿತ್ತು. ಇದೀಗ ವಿಜಯನಗರ ಜಿಲ್ಲೆ ಹೂವಿನಹಡಗಲಿಯ ಹಾಲಸ್ವಾಮಿ ಮಠದಲ್ಲಿ ತಾನು ಪ್ರೀತಿಸಿದ ಯುವಕ ಸತೀಶ್ ಕುಮಾರ್ ಎಂಬಾತನನ್ನು ವಿವಾಹವಾಗಿರುವ ಜಯಕಲ್ಯಾಣಿ, ತಂದೆಯ ವಿರುದ್ಧ ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿ ಮೆಟ್ಟಿಲೇರಿದ್ದಾಳೆ.
ತಮ್ಮ ವಿವಾಹಕ್ಕೆ ತಂದೆಯ ವಿರೋಧವಿದೆ. ಹೀಗಾಗಿ ತಮಗೆ ರಕ್ಷಣೆ ನೀಡುವಂತೆ ಪೊಲಿಸ್ ಆಯುಕ್ತರಿಗೆ ಮನವಿ ಮಾಡಿದ್ದಾರೆ. ತಂದೆ ಸಚಿವರಾಗಿರುವುದರಿಂದ ನಮಗೆ ತಮಿಳುನಾಡು ಸರ್ಕಾರದಿಂದ ಯಾವುದೇ ಸಹಾಯ ಸಿಗುವುದಿಲ್ಲ. ತಂದೆಯಿಂದ ಜೀವ ಬೆದರಕಿಯಿದೆ, ತಮಗೆ ರಕ್ಷಣೆ ನೀಡಿ ಎಂದು ಮನವಿ ಮಾಡಿದ್ದಾಳೆ.
ಸಚಿವ ಶೇಖರ್ ಬಾಬು ಪುತ್ರಿ ಜಯಕಲ್ಯಾಣಿ ಹಾಗೂ ಚೆನ್ನೈನಲ್ಲಿ ಉದ್ಯಮಿಯಾಗಿದ್ದ ಸತೀಶ್ ಕುಮಾರ್ ಕಳೆದ 6 ವರ್ಷಗಳಿಂದ ಪ್ರೀತಿಸುತ್ತಿದ್ದು, ಅವರ ಪ್ರೀತಿಗೆ ಮನೆಯವರ ವಿರೋಧವಿತ್ತು. ಇದೇ ಕಾರಣಕ್ಕೆ 6 ತಿಂಗಳ ಹಿಂದೆ ಓಡಿ ಹೋಗಲು ನಿರ್ಧರಿಸಿದ್ದ ಇಬ್ಬರನ್ನು ಪುಣೆಯಲ್ಲಿ ಪತ್ತೆ ಮಾಡಿ ಮಗಳನ್ನು ವಾಪಸ್ ಕರೆತಂದಿದ್ದರು. ಎರಡು ತಿಂಗಳ ಕಾಲ ಸತೀಶ್ ನನ್ನು ಗೃಹ ಬಂಧನದಲ್ಲಿ ಇರಿಸಲಾಗಿತ್ತು. ಗೃಹಬಂಧನದಲ್ಲಿದ್ದ ಇಬ್ಬರೂ ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದರು, ಬಳಿಕ ಕರ್ನಾಟಕದ ಹೂವಿನಹಡಗಲಿಯ ಹಾಲಸ್ವಾಮಿ ಮಠದಲ್ಲಿ ಮದುವೆಯಾಗಿದ್ದರು ಎಂದು ತಿಳಿದುಬಂದಿದೆ.
ಮಲಗಿದ್ದ ಪತ್ನಿಗೆ ಬೆಂಕಿಯಿಟ್ಟು ಹತ್ಯೆಗೆ ಯತ್ನಿಸಿದ ಪತಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ