Latest

ಈ ಉಪಕಾರ ಎಂದಿಗೂ ಮರೆಯಲ್ಲ; ಭಾರತೀಯ ರಾಯಭಾರ ಕಚೇರಿ, ಪ್ರಧಾನಿ ಮೋದಿಗೆ ಧನ್ಯವಾದ ಹೇಳಿದ ಪಾಕಿಸ್ತಾನ ಯುವತಿ

ಪ್ರಗತಿವಾಹಿನಿ ಸುದ್ದಿ; ಕೀವ್: ಉಕ್ರೇನ್ ಮೇಲಿನ ರಷ್ಯಾ ಯುದ್ಧ 14 ನೇ ದಿನಕ್ಕೆ ಕಾಲಿಟ್ಟಿದೆ. ಯುದ್ಧ ಪೀಡಿತ ಉಕ್ರೇನ್ ನಲ್ಲಿ ಸಿಲುಕಿರುವ ವಿದೇಶಿಯರ ಸ್ಥಳಾಂತರ ಕಾರ್ಯ ಚುರುಕುಗೊಂಡಿದೆ. ಈ ನಡುವೆ ಕೀವ್ ನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಪಾಕಿಸ್ತಾನ ವಿದ್ಯಾರ್ಥಿನಿ ಸ್ಥಳಾಂತರಕ್ಕೆ ಭಾರತೀಯ ರಾಯಭಾರ ಕಚೇರಿ ಸಹಾಯ ಮಾಡಿದ್ದು, ಯುವತಿ ಅಧಿಕಾರಿಗಳಿಗೆ ಹಾಗೂ ಪ್ರಧಾನಿ ಮೋದಿಯವರಿಗೆ ಧನ್ಯವಾದ ತಿಳಿಸಿದ್ದಾರೆ.

ಪಾಕಿಸ್ತಾನದ ಆಸ್ಮಾ ಶಫಿಕ್ ಎಂಬಾಕೆ ಉಕ್ರೇನ್ ರಾಜಧಾನಿ ಕೀವ್ ನಲ್ಲಿ ಸಿಲುಕಿದ್ದರು. ಈ ವೇಳೆ ಕೀವ್ ನಿಂದ ಆಕೆ ಸ್ಥಳಾಂತರಕ್ಕೆ ಭಾರತೀಯ ರಾಯಭಾರ ಕಚೇರಿ ಸಹಾಯ ಮಾಡಿದ್ದು, ಪಾಕಿಸ್ತಾನ ಗಡಿಗೆ ತೆರಳಲು ನೆರವಾಗಿದೆ.

ಈ ಕುರಿತು ಆಸ್ಮಾ ಶಫಿಕ್ ವಿಡಿಯೋ ಬಿಡುಗಡೆ ಮಾಡಿದ್ದು, ನಾನು ಸೇರಿದಂತೆ ಹಲವರು ಕೀವ್ ನಲ್ಲಿ ಸಿಲುಕಿದ್ದೆವು. ಈ ವೇಳೆ ನಮ್ಮೆಲ್ಲರನ್ನೂ ಭಾರತೀಯ ರಾಯಭಾರ ಕಚೇರಿ ಸುರಕ್ಷಿತವಾಗಿ ಕೀವ್ ನಿಂದ ಸ್ಥಳಾಂತರ ಮಾಡಿದೆ. ಈ ಉಪಕಾರವನ್ನು ಎಂದಿಗೂ ಮರೆಯಲ್ಲ. ನಮ್ಮನ್ನು ಯುದ್ಧ ನೆಲದಿಂದ ಪಾರು ಮಾಡಿದ್ದಕ್ಕೆ ಭಾರತೀಯ ರಾಯಭಾರ ಕಚೇರಿಗೆ ಹಾಗೂ ಪ್ರಧಾನಿ ನರೇಂದ್ರ ಮೋದಿಯವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.

ಆಸ್ಮಾ ಕೀವ್ ನಿಂದ ಉಕ್ರೇನ್ ನ ಪಶ್ಚಿಮ ಗಡಿಯತ್ತ ಪ್ರಯಾಣ ಬೆಳೆಸಿದ್ದು, ಅಲ್ಲಿಂದ ವಿಮಾನದ ಮೂಲಕ ಪಾಕಿಸ್ತಾನಕ್ಕೆ ತೆರಳಲಿದ್ದಾರೆ.

ಬೆಳ್ಳಿ ದರದಲ್ಲಿ ಕುಸಿತ; ಹಾಗಾದರೆ ಇಂದು ಚಿನ್ನದ ದರ ಎಷ್ಟಿದೆ?

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button