ಪ್ರಗತಿ ವಾಹಿನಿ ಸುದ್ದಿ ನವದೆಹಲಿ –
ಭಾರತದಿಂದ ಹಾರಿ ಬಂದ ಎರಡೇ ಎರಡು ಸೂಪರ್ ಸಾನಿಕ್ ಮಿಸೈಲ್‌ಗೆ ಪಾಕಿಸ್ತಾನ ಗರಬಡಿದಂತಾಗಿದೆ.
ಶುಕ್ರವಾರ ಭಾರತದಿಂದ ಹಾರಿದ, ಸ್ಪೋಟಕಗಳಿಲ್ಲದ ಎರಡು ಸೂಪರ್‌ಸಾನಿಕ್ ಮಿಸೈಲ್‌ಗಳು ಪಾಕಿಸ್ತಾನದ ಗಡಿಯಿಂದ ಸುಮಾರು ೧೨೪ ಕಿಮೀ ಒಳಗೆ ಬಿದ್ದಿದೆ. ಮಿಸೈಲ್‌ಗಳಲ್ಲಿ ಸ್ಪೋಟಕಗಳಿಲ್ಲದಿದ್ದರೂ ಪಾಕಿಸ್ತಾನವು ಭಾರತದ ಈ ನಡೆಯಿಂದ ಅಕ್ಷರಶಃ ಕಂಗಾಲಾಗಿದೆ. ಮಿಸೈಲ್ ಪರಿಶೀಲಿಸಿದ ಪಾಕ್ ಸೈನ್ಯದ ಮಿಸೈಲ್ ತಂತ್ರಜ್ಞರು ಅಪಾಯಕಾರಿಯಲ್ಲದ ಮಿಸೈಲ್ ಎಂದು ಸ್ಪಷ್ಟಪಡಿಸಿದ್ದಾರೆ. ಆದಾಗ್ಯೂ ಪಾಕ್ ಈ ಕುರಿತು ಭಾರತಕ್ಕೆ ಸ್ಪಷ್ಟೀಕರಣ ಕೇಳಿದೆ.
ಭಾರತ ಹೇಳಿದ್ದೇನು ?
ಎರಡು ಸೂಪರ್‌ಸಾನಿಕ್ ಮಿಸೈಲ್‌ಗಳು ಪರೀಕ್ಷಾರ್ಥ ಪ್ರಯೋಗದ ಸಂದರ್ಭದಲ್ಲಿ ಆಕಸ್ಮಿಕವಾಗಿ ಪಾಕಿಸ್ತಾನದೆಡೆಗೆ ಹಾರಿವೆ ಎಂದು ಭಾರತದ ರಕ್ಷಣಾ ಇಲಾಖೆ ಈ ಕುರಿತು ಸ್ಪಷ್ಟೀಕರಣ ನೀಡಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ