Latest

ಜೋಕಾಲಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಬಾಲಕ

ಪ್ರಗತಿವಾಹಿನಿ ಸುದ್ದಿ; ಚಿಕ್ಕಮಗಳೂರು: ಅಪ್ಪನ ಜತೆ ಜಗಳವಾಡಿದ್ದ ನಾಲ್ಕನೇ ತರಗತಿ ಬಾಲಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಆಲ್ದೂರು ಗ್ರಾಮದಲ್ಲಿ ನಡೆದಿದೆ.

ಚೇತನ್ (9) ಮೃತ ಬಾಲಕ. ಹಾವೇರಿ ಜಿಲ್ಲೆ ರಾಣೆಬೆನ್ನೂರು ಶೇಷಗಿರಿಯವರಾದ ಬಾಲಕನ ಪೋಷಕರು ನಾಲ್ಕು ವರ್ಷಗಳ ಹಿಂದೆ ಆಲ್ದೂರಿಗೆ ತೆರಳಿ ಕಾಫಿ ತೋಟದಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಹೊಸಳ್ಳಿ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

ಬಾಲಕ ಚೇತನ್ ಮುಂಗೋಪಿಯಾಗಿದ್ದು, ಸದಾ ತಂದೆ ಹಾಗೂ ಮಗನ ನಡುವೆ ಜಗಳವಾಗುತ್ತಿತ್ತು. ಓದಿನಲ್ಲಿ ತುಂಬಾ ಚುರುಕಾಗಿದ್ದ ಬಾಲಕ ಕ್ಷುಲ್ಲಕ ಕಾರಣಕ್ಕೆ ತಂದೆಯ ಜತೆ ಜಗಳ ಮಾಡಿದ್ದು, ಇದೇ ವಿಚಾರವಾಗಿ ಮನನೊಂದು ಮನೆಯಲ್ಲಿಯೇ ಜೋಕಾಲಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಪುಟ್ಟ ಬಾಲಕನ ಸಾವಿಗೆ ಕಂಟುಂಬದವರು ಹಾಗೂ ನೆರೆಹೊರೆಯ ಜನರು ಶಾಕ್ ಆಗಿದ್ದಾರೆ.

ಪೋಷಕರ ಎದುರಲ್ಲೇ ಮಗಳನ್ನು ಕಿಡ್ನ್ಯಾಪ್ ಮಾಡಿದ ದುಷ್ಕರ್ಮಿಗಳು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button