ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿ ನಗರದಲ್ಲಿ ಇತ್ತಿಚಿಗೆ ನಡೆದ ಮನೆ ಕಳ್ಳತನ ಪ್ರಕರಣ ಸಂಬಂಧ ಹಿರೇಬಾಗೇವಾಡಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಮನೆಗಳ್ಳತನ ಪತ್ತೆ ಮಾಡುವ ಕುರಿತು ಅಧೀನ ಎಲ್ಲ ಪೊಲೀಸ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ಮೇರೆಗೆ ಬೆಳಗಾವಿ ಗ್ರಾಮೀಣ ಉಪವಿಭಾಗದ ಎಸಿಪಿ ಗಣಪತಿ ಗುಡಾಜಿ ಇವರ ಮಾರ್ಗದರ್ಶನದಲ್ಲಿ ಹಿರೇಬಾಗೆವಾಡಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ವಿಜಯಕುಮಾರ ಎನ್. ಸಿನ್ನೂರ ಹಾಗೂ ಸಿಬ್ಬಂದಿ ಜನರು ಆರೋಪಿತರ ಪತ್ತೆ ಕಾರ್ಯದಲ್ಲಿ ತೊಡಗಿದ್ದಾಗ ಖಚಿತ ಮಾಹಿತಿಯನ್ನಾಧರಿಸಿ ತಾರಿಹಾಳ ಗ್ರಾಮದ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ನಾಗೇಂದ್ರ ಸ್ವಾಮಿ ತಿಪ್ಪಣ್ಣ ಕೊಳಕೊಪ್ಪ (23) ಸಾ ಶಿವಾಜಿ ಗಲ್ಲ, ತಾರಿಹಾಳ, ಜ್ಯೋತಿಭಾ ಅಂಟುಅಜಯ ಅಪ್ಪಯ್ಯಾ ತಿಪ್ಪಾಯಿ (27), ಮಹೇಶ ಪ್ರಕಾಶ ಖನಗಾಂವಕರ (21) ಹಾಗೂ ಮಂಜುನಾಥ ಅಪ್ಪಯ್ಯಾ ಕೊಲೇಕರ (21) ಎಂದು ಗುರುತಿಸಲಾಗಿದೆ.
ಬಂಧಿತರಿಂದ ಸುಮಾರು 14 ಲಕ್ಷ 69 ಸಾವಿರ ಮೌಲ್ಯದ ಬಂಗಾರದ ಆಭರಣಗಳು, ನಗದು, ಗೃಹೋಪಯೋಗಿ ವಸ್ತುಗಳು ಹಾಗೂ 03 ಮೋಟಾರ ಸೈಕಲ್‌ಗಳನ್ನು ವಶಪಡಿಸಿಕೊಂಡು ತನಿಖೆ ಮುಂದುವರೆಸಲಾಗಿದೆ.
ಕಾರ್ಯಾಚರಣೆಯಲ್ಲಿ ಹಿರೇಬಾಗೆವಾಡಿ ಪೊಲೀಸ್ ಠಾಣೆಯ ಪಿಐ ವಿಜಯಕುಮಾರ ಎನ್ ಸಿನ್ನೂರ, ಪಿಎಸ್‌ಐ ಬಿ. ಆರ್. ಮುತ್ನಾಳ, ಹಾಗೂ ಸಿಬ್ಬಂದಿ ಜನರಾದ ವಾಯ್ ಬಿ ಹತ್ತರವಾಟ, ಎ ಕೆ ಕಾಂಬಳೆ, ಎಸ್ ಎಸ್ ಭಾಂವಿ, ಜೆ. ಎ ಪಾಟೀಲ, ಆರ್ ಎಸ್ ಕೆಳಗಿನಮನಿ, ಎಮ್ ಎಸ್ ಮಂಟೂರ, ಎಸ್. ಎಮ್. ಅಳ್ಳಳ್ವ, ಎಸ್. ಎಸ್. ಜಗಜಂಪಿ, ಎ ಎಚ್ ಅಗಸಿಮನಿ ಹಾಗೂ ಟೆಕ್ನಿಕಲ್ ಸೆಲ್‌ದ ರಮೇಶ ಅಕ್ಕಿ ಪಾಲ್ಗೊಂಡಿದ್ದರು.
ಪತ್ನಿಯನ್ನು ಕೊಲೆಗೈದು ಕಥೆ ಕಟ್ಟಿದ್ದ ಪತಿ ಅರೆಸ್ಟ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ