Kannada NewsKarnataka NewsLatest

ಸಿರಿಗನ್ನಡ ಗೌರವ ಹಾಗೂ ಸಿರಿಗನ್ನಡ ಪುಸ್ತಕ ಪ್ರಶಸ್ತಿ ಪ್ರಕಟ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –   ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನವು ೨೦೨೦ ನೇ ಸಾಲಿನ ಸಿರಿಗನ್ನಡ ಗೌರವ ಹಾಗೂ ಸಿರಿಗನ್ನಡ ಪುಸ್ತಕ ಪ್ರಶಸ್ತಿಯನ್ನು ಪ್ರಕಟಿಸಿದೆ.
ಸಿರಿಗನ್ನಡ ಗೌರವ ಪ್ರಶಸ್ತಿಗೆ ಉದ್ಯಮಿ ಹಾಗೂ ಸಾಮಾಜಿಕ ಕಾರ್ಯಕರ್ತ ರಾಜೇಂದ್ರ ಜೈನ ಮತ್ತು ಖ್ಯಾತ ವೈದ್ಯ ಡಾ ಎಮ್ ಎಲ್ ತುಕ್ಕಾರ ಅವರು ಭಾಜನರಾಗಿದ್ದಾರೆ.
ಸಿರಿಗನ್ನಡ ಪುಸ್ತಕ ಪ್ರಶಸ್ತಿಗೆ ಕೆ ಚಂದ್ರ ಮೌಳಿ ಅವರ ಕಾಶಿ ರಹಸ್ಯ ಹಾಗೂ ಡಾ ಆರ್ ಬಿ ಚಿಲಮಿ ಅವರ ಕನಕದಾಸರು ಮತ್ತು ತತ್ತ್ವಪದಕಾರರು ಕೃತಿಗಳು ಆಯ್ಕೆಯಾಗಿವೆ.
ದತ್ತಿನಿಧಿ ಪ್ರಶಸ್ತಿಗಳಾದ ಪ್ರೋ ಪಿ ಕೆ ಬಾಗೋಜಿ ದತ್ತಿನಿಧಿ ಪ್ರಶಸ್ತಿ- ಜೀವಮನ ಸಾಧನೆಗಾಗಿ ಪುರುಷ ವಿಭಾಗಕ್ಕೆ ಡಾ ಬಸವರಾಜ ಜಗಜಂಪಿ, ದಿ ಸುಮನ ಗುರುನಾಥ ಹುದಲಿ ದತ್ತಿನಿಧಿ ಪ್ರಶಸ್ತಿ ಮಹಿಳೆಯರಿಗಗಿ ಸಾಮಾಜಿಕ ಮತ್ತು ಸಹಕಾರಿ ಕ್ಷೇತ್ರದ ಸೇವೆಗಾಗಿ  ಸುಮಾ ಪಾಟೀಲ, ಜಿಲ್ಲೆಯ ಲೇಖಕಿಯರಿಗೆ ಜೀವಮಾನ ಸಾಧನೆಗಾಗಿ ಡಾ ಲತಾ ಗುತ್ತಿ ದತ್ತಿ ನಿಧಿ ಪ್ರಶಸ್ತಿಯು  ರಂಜನಾ ನಾಯಕ, ಶ್ರೇಷ್ಠ ಶಿಕ್ಷಕ ಸಾಹಿತಿಗಾಗಿ ನೀಡುವ ದಿ. ವೆಂ ಲ. ಜೋಶಿ ಸ್ಮಾರಕ ದತ್ತಿ ನಿಧಿ ಪ್ರಶಸ್ತಿ ವೀರಣ್ಣ ಮಡಿವಾಳರ, ಬೆಳಗಾವಿಯ ಸಂಗೀತ ಪ್ರತಿಷ್ಠಾನವು ನೀಡುವ ವೇಣುನಾದ ಸಂಗೀತ ಪ್ರಶಸ್ತಿಗೆ  ಭಾರತಿ ಭಟ್, ಕೆ ಚಂದ್ರ ಮೌಳಿ ದತ್ತಿ ನಿಧಿ ಪ್ರಶಸ್ತಿಯು ಉತ್ತಮ ಪ್ರಕಾಶನ ಸಂಸ್ಥೆ ಪ್ರಸಾರಾಂಗ ಬಸವರಾಜ ಕಟ್ಟಿಮನಿ ಪ್ರತಿಷ್ಠಾನ, ಬೆಳಗಾವಿ ಇವರಿಗೆ ನೀಡಲಾಗಿದೆ.
ದಿ. ಶ್ರೀದೇವಿ ದಾಸಪ್ಪ ಶಾನಭಾಗ ದತ್ತಿ ಪ್ರಶಸ್ತಿ ಡಾ ಬಸು ಬೇವಿನಗಿಡದ ಅವರ ದಕ್ಕದ ಕಾಡು ಅನುವಾದಿತ ಕೃತಿಗೆ,  ಪಿ ವಿಜಯಕುಮಾರ ದತ್ತಿ ಪ್ರಶಸ್ತಿ   ಶಕುಂತಲಾ ಪಿ ಹಿರೇಮಠ ಅವರ ಹೊಸ ಚಿಗುರು ಹಳೆ ಬೇರು ಕೃತಿಗೆ, ದಿ ಡಾ ಹಣಮಂತರಾವ್ ಸವಣೂರ ಸ್ಮಾರಕ ದತ್ತಿ ಪ್ರಶಸ್ತಿ ಯ ರು ಪಾಟೀಲ ಅವರ ಜಲದಗ್ನಿ  ಎಸ್ ಎಮ್ ಕುಲಕರ್ಣಿ ಷಷ್ಟ್ಯಬ್ಧಿ ಸಮಿತಿ ದತ್ತಿ ಪ್ರಶಸ್ತಿ  ದೀಪಿಕಾ ಚಾಟೆ ಅವರ ಮನಸ್ಸಿನ ದೊಂಬರಾಟ ಕೃತಿಗೆ, ದಿ ಚಂದ್ರವ್ವ ಧರ್ಮಾಜಿ ಅನಗೋಳ ದತ್ತಿ ಪ್ರಶಸ್ತಿ  ರಾಜೇಶ್ವರಿ ಹಿರೇಮಠ ಅವರ ಕಾಮನ ಬಿಲ್ಲು ಕೃತಿಗೆ, ಶಿವಕವಿ ಉಳವೀಶ ಹುಲೇಪ್ಪನವರಮಠ ದತ್ತಿ ಪ್ರಶಸ್ತಿ ನಾಗೇಶ ಜೆ ನಾಯಕ ಅವರ ಗರೀಬನ ಜೋಳಿಗೆ ಕೃತಿಗೆ.  ಅಪ್ಪಾಸಾಹೇಬ ಸದರಜೋಶಿ ಮತ್ತು ಕುಟುಂಬದ ದತ್ತಿ ಪ್ರಶಸ್ತಿ ಡಾ ಗುರದೇವಿ ಹುಲೇಪ್ಪನವರಮಠ ಅವರ ಸಾಹಿತ್ಯ ಸುರಧಿ ಕೃತಿಗೆ. ದಿ ರಾಮರಾವ್ ಶಿರಹಟ್ಟಿ ದತ್ತಿ ಪ್ರಶಸ್ತಿ ನೀರಜಾ ಗಣಾಚಾರಿ ಅವರ ಸೇವಾಯಾನ ಕೃತಿಗೆ ಲಭ್ಯವಾಗಿದೆ.
ಡಾ ವಿಶ್ವನಾಥ ಕಾರ್ನಾಡ, ಮುಂಬಯಿ ಹಾಗೂ ಡಾ ಕರುಣಾಕರ ಶೆಟ್ಟಿ ಪಣಿಯೂರು, ಮುಂಬಯಿ ಇವರು ಪ್ರಶಸ್ತಿಗಾಗಿ ಪುಸ್ತಕಗಳನ್ನು ಮೌಲ್ಯಮಾಪನ ಮಾಡಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭದ ಸ್ಥಳ, ದಿನಾಂಕ ಎಲ್ಲ ವಿವರಗಳನ್ನು ನಂತರ ವಿಜೇತರಿಗೆ ತಿಳಿಸಲಾಗುವದು ಎಂದು ಪ್ರತಿಷ್ಟಾನವು ಪ್ರಕಟಣೆಯಲ್ಲಿ ತಿಳಿಸಿದೆ.

ಬುಧವಾರ ಸಿಹಿ ಸುದ್ದಿ ಕೊಟ್ಟ ಸಿಎಂ ಬೊಮ್ಮಾಯಿಗೆ ಸರಕಾರಿ ನೌಕರರ ಸಂಘದ ಸನ್ಮಾನ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button