ಜಾತ್ರಾ ಮಹೋತ್ಸವಕ್ಕೆ ಅನುಮತಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಿದ ಡಾ. ಸೋನಾಲಿ ಸರ್ನೋಬತ್
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಖಾನಾಪೂರ ತಾಲೂಕಿನ ದೇವಲತ್ತಿ ಗ್ರಾಮ ದೇವತೆಯಾದ ಶ್ರೀ ಲಕ್ಷ್ಮೀ ದೇವಿ ಜಾತ್ರಾ ಮಹೋತ್ಸವನ್ನು ನಡೆಸಲು ಅನುಮತಿ ನೀಡುವಂತೆ ಬಿಜೆಪಿ ಗ್ರಾಮೀಣ ಮಹಿಳಾ ಮೋರ್ಚಾ ಉಪಾಧ್ಯಕೆ ಡಾ. ಸೋನಾಲಿ ಸರ್ನೋಬತ್ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಡಾ. ಎಂ. ಜಿ. ಹಿರೇಮಠ ಅವರಿಗೆ ಮನವಿ ಸಲ್ಲಿಸಲಾಯಿತು.
ಸ್ಥಳೀಯ ದೇವಲತ್ತಿ ಗ್ರಾಮದೇವತೆಯಾದ ಶ್ರೀ ಲಕ್ಷ್ಮೀದೇವಿ ಜಾತ್ರಾ ಮಹೋತ್ಸವ ಸುಮಾರು ೨೫ ವರ್ಷಗಳ ಬಳಿಕ ಏ.೧೨ರಿಂದ ರಿಂದ ೨೦ ರವರೆಗೆ ೯ ದಿನಗಳ ಕಾಲ ನಡೆಸಲು ಗ್ರಾಮದ ಶ್ರೀ ಲಕ್ಷ್ಮೀದೇವಿ ಜಾತ್ರಾ ಮಹೋತ್ಸವ ಸಮಿತಿ ಹಾಗೂ ಸಮಸ್ಥ ಗ್ರಾಮಸ್ಥರು ತೀರ್ಮಾನಿಸಿದ್ದಾರೆ. ಜಾತ್ರಾ ಮಹೋತ್ಸವವನ್ನು ಸರಾಗವಾಗಿ ನಡೆಸಲು ಪೂರಕವಾಗಿ ಅನುಮತಿ ನೀಡುವ ಜೊತೆಗೆ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ವೈದ್ಯಕೀಯ ಸೇವೆ, ೨೪ ಗಂಟೆಗಳ ಕಾಲ ನಿರಂತರ ಸೌಲಭ್ಯ, ಕುಡಿಯುವ ನೀರಿನ ಸರಬರಾಜು, ಸಾರಿಗೆ ಬಸ್ ಸೇವೆ , ಸಾಂಸ್ಕೃತಿಕ ಕಾರ್ಯಕ್ರಮಗಳು , ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಸೇರಿದಂತೆ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಗ್ರಾಮಸ್ಥರ ಪರವಾಗಿ ವಿನಂತಿಸಿಕೊಳ್ಳುವುದಾಗಿ ಡಾ. ಸೋನಾಲಿ ಸರ್ನೋಬತ್ ಅವರು ಜಿಲ್ಲಾಧಿಕಾರಿಗೆ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಜಾತ್ರಾ ಪಂಚ ಕಮಿಟಿ, ಗ್ರಾಮ ಪಂಚಾಯ್ತಿ ಸದಸ್ಯ ಹನುಮಂತ ಗಂದಿವಾಡ್, ಸ್ಥಳೀಯ ಬಿಜೆಪಿ ಮುಖಂಡ ವಿಠ್ಠಲ ನೀಡಗಲಕರ ಉಪಸ್ಥಿತರಿದ್ದರು.
ಖಾನಾಪುರ ಕುಗ್ರಾಮಗಳಿಗೆ ಪಡಿತರ ವಿತರಣೆ ಕಲ್ಪಿಸಲು ಯಶಸ್ವಿಯಾದ ಡಾ. ಸೋನಾಲಿ ಸರ್ನೋಬತ್
https://pragati.taskdun.com/belagavi-news/dr-sonali-sarnobat-arranged-to-distribute-ration-for-the-doorstep/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ