Latest
ಮುಳುಗಿದ ಅರೆಬಿಯನ್ ಹಡಗು; ಭಾರತ, ಪಾಕಿಸ್ತಾನ ಸೇರಿ ಹಲವು ದೇಶದ 30 ಸಿಬ್ಬಂದಿಯಿದ್ದ ಹಡಗು ; ಇಲ್ಲಿದೆ ದುರ್ಘಟನೆ ಕಾರಣ

ಪ್ರಗತಿವಾಹಿನಿ; ದುಬೈ –
ಅರೇಬಿಯನ್ ಹಡಗೊಂದು ಇರಾನ್ ಅಸ್ಸಾಲುಯೆ ಬಂದರಿನ ಬಳಿ ಗುರುವಾರ ಮುಳುಗಿದೆ. ಈ ಹಡಗಿನಲ್ಲಿ ಭಾರತ, ಪಾಕಿಸ್ತಾನ ಸೇರಿ ಹಲವು ದೇಶದ 30 ಸಿಬ್ಬಂದಿಯಿದ್ದರು.
ಹವಾಮಾನ ಏರುಪೇರಿನಿಂದಾಗಿ ಸಮುದ್ರದಲ್ಲಿ ಅತಿಯಾಗಿ ಗಾಳಿ ಬೀಸಿರುವುದರಿಂದ ಅಲ್ ಸಾಲ್ಮಿ’ ಎಂಬ ಹಡಗು ನೀರುಪಾಲಾಗಿದೆ. ಅಸ್ಸಾಲುಯೆ ಬಂದರಿನಿಂದ ಕೇವಲ 50 ಕಿ.ಮೀ ಅಂತರದಲ್ಲೇ ಈ ಘಟನೆ ನಡೆದಿದೆ.ಹಡಗು ಇರಾಕ್ನ ಉಮ್ ಕಸ್ರ್ಗೆ ಕಾರು ಮತ್ತು ಇತರೆ ಸಾಮಾಗ್ರಿಗಳನ್ನು ಹೊತ್ತೂಯ್ಯುತ್ತಿತ್ತು.
ಹಡಗಿನಲ್ಲಿದ್ದ 16 ಮಂದಿಯನ್ನು ರಕ್ಷಿಸಲಾಗಿದೆ. 11 ಮಂದಿಗೆ ಲೈಫ್ ಜಾಕೆಟ್ ನೀಡಲಾಗಿತ್ತು. ಒಬ್ಬ ಸಿಬ್ಬಂದಿಯನ್ನು ಹತ್ತಿರದ ಟ್ಯಾಂಕರ್ನವರು ರಕ್ಷಿಸಿದ್ದಾರೆ. ಉಳಿದ ಇಬ್ಬರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.