ಪ್ರಗತಿವಾಹಿನಿ ಸುದ್ದಿ, ಬೆಂಗಳೂರು:
ಪ್ರಯಾಣಿಕನೊಬ್ಬ ಮಾಡಿದ ತಮಾಷೆಯಿಂದಾಗಿ ವಿಮಾನ 16 ಗಂಟೆ ವಿಳಂಬವಾಗಿ ಹೊರಡಬೇಕಾಯಿತು.
ಬೆಂಗಳೂರಿನಿಂದ ಸಿಂಗಾಪುರಕ್ಕೆ ತೆರಳಬೇಕಿದ್ದ 173 ಪ್ರಯಾಣಿಕರು ವಿಮಾನದಲ್ಲೇ 16 ಗಂಟೆ ಕಳೆಯಬೇಕಾಯಿತು.
ಹಾಗಾದರೆ ಆ ಪ್ರಯಾಣಿಕ ಮಾಡಿದ ತಮಾಷೆ ಏನು? ಇದರಿಂದ ಪ್ರಯಾಣಿಕರು ಹಾಗೂ ಏರಲೈನ್ಸ್ ಸಂಸ್ಥೆ ಪಟ್ಟ ಪಾಡೇನು? ಇಲ್ಲಿದೆ ವಿವರ ನೋಡಿ:
ಸಿಂಗಾಪುರಕ್ಕೆ ಹೊರಟಿದ್ದ ವಿಮಾನ ಮಧ್ಯರಾತ್ರಿ 1.20ರ ವೇಳೆಗೆ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಹೊರಡಬೇಕಿತ್ತು. ಆದರೆ, ವಿಮಾನ ಹೊರಟಿದ್ದು ಸಂಜೆ 5.23ಕ್ಕೆ.
ವಿದೇಶಿ ಪ್ರಯಾಣಿಕರೊಬ್ಬರು ತನ್ನ ಬ್ಯಾಗೊಂದರಲ್ಲಿ ಗನ್ ಇದೆ ಎಂದು ಬೆದರಿಕೆ ಹಾಕಿದ್ದರು. ಆ ಪ್ರಯಾಣಿಕನನ್ನು ತಕ್ಷಣ ಏರ್‌ಪೋರ್ಟ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದ್ದು, ವಿಚಾರಿಸಲಾಗಿದೆ.
ಬಳಿಕ, ಆ ವ್ಯಕ್ತಿ ತಮಾಷೆ ಮಾಡಿದ್ದಾನೆಂದು ತಿಳಿದುಬಂದಿದ್ದು, ಏರ್‌ಪೋರ್ಟ್ ಪೊಲೀಸ್ ಅಧಿಕಾರಿಗಳು ಆತನನ್ನು ಬಿಡುಗಡೆ ಮಾಡಿದ್ದಾರೆ. ಅವರ ಬ್ಯಾಗ್‌ನಲ್ಲಿದ್ದದ್ದು ಗನ್ ಅಲ್ಲ ಬದಲಾಗಿ ಗಿಟಾರ್ ಎಂದು ತಿಳಿದುಬಂತು.
”ಪ್ರಯಾಣಿಕರೊಬ್ಬರು ಕ್ಯಾಬಿನ್ ಸಿಬ್ಬಂದಿಗೆ ಮೌಖಿಕ ಭದ್ರತೆ ಬೆದರಿಕೆ ಹಾಕಿದ ಕಾರಣದಿಂದಾಗಿ ಅವರನ್ನು ಸಿಐಎಸ್‌ಎಫ್ ಅಧಿಕಾರಿಗಳು ವಿಮಾನದಿಂದ ಕೆಳಗಿಳಿಸಿದ್ದರು. ಇನ್ನು, ಈ ಕಾರಣಕ್ಕೆ ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರನ್ನು ಕೆಳಗಿಳಿಸಲಾಗಿತ್ತು. ಜತೆಗೆ, ಎಲ್ಲ ಲಗೇಜ್‌ಗಳನ್ನು ಹೊರಗೆ ತೆಗೆಯಲಾಗಿತ್ತು. ನಂತರ ಎಲ್ಲ ಲಗೇಜ್‌ಗಳನ್ನು ಭದ್ರತೆ ಹಾಗೂ ಇಮ್ಮಿಗ್ರೇಷನ್ ಕ್ಲಿಯರೆನ್ಸ್‌ಗಾಗಿ ರೀಸ್ಕ್ರೀನ್ಡ್ ಮಾಡಲಾಯ್ತು. ಆ ವಿಮಾನದ ಬದಲಿಗೆ ಬೆಂಗಳೂರಿಗೆ ಮತ್ತೊಂದು ವಿಮಾನ ಹಾಗೂ ಪ್ರತ್ಯೇಕ ಸಿಬ್ಬಂದಿಯನ್ನು ಕಳಿಸಲಾಯ್ತು. ಜತೆಗೆ, ಪ್ರಯಾಣಿಕರಿಗೆ ಆಹಾರ ನೀಡಲಾಯ್ತು. ಅಲ್ಲದೆ, ಈ ಘಟನೆಯಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ಏರ್‌ಪೋರ್ಟ್‌ನಲ್ಲಿದ್ದ ಇತರೆ ಯಾವುದೇ ವಿಮಾನಗಳ ಕಾರ್ಯಾಚರಣೆಗೆ ತೊಂದರೆಯಾಗಿಲ್ಲ” ಎಂದು ಸಿಂಗಾಪುರ ಏರ್‌ಲೈನ್ಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ