Latest

ಮಹಿಳೆಯ ಮೇಲೆ ಆಸಿಡ್ ದಾಳಿ; ಸಹಪಾಠಿಗಳಿಂದಲೇ ಕೃತ್ಯ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮನೆಯ ಜಗುಲಿ ಮೇಲೆ ಮಲಗಿದ್ದ ಮಹಿಳೆ ಮೇಲೆ ಆಸಿಡ್ ದಾಳಿ ನಡೆಸಿರುವ ಘೋರ ಘಟನೆ ರಾಜಧಾನಿ ಬೆಂಗಳೂರಿನ ನಂದಿನಿ ಲೇಔಟ್ ನಲ್ಲಿ ನಡೆದಿದೆ.

ರಂಗಭೂಮಿ ಕಲಾವಿದೆಯಾಗಿರುವ ದೇವಿ ಎಂಬ ಮಹಿಳೆ ಮೇಲೆ ರಂಗಭೂಮಿ ಸಹಪಾಠಿಗಳೆ ಆಸಿಡ್ ದಾಳಿ ನಡೆಸಿದ್ದಾರೆ. ಮಾರ್ಚ್ 18 ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

Home add -Advt

ಪ್ರಕರಣ ದಾಖಲಿಸಿಕೊಂಡಿರುವ ನಂದಿನಿ ಲೇಔಟ್ ಠಾಣೆ ಪೊಲೀಸರು, ರಮೇಶ್, ಸ್ವಾತಿ, ಯೋಗೇಶ್ ಎಂಬ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಈ ಹಿಂದೆ ಮಹಿಳೆ ದೇವಿ ಬಿಎಂಟಿಸಿಯಲ್ಲಿ ನಿರ್ವಾಹಕ ಹುದ್ದೆಯಲ್ಲಿದ್ದರು. ಅನಾರೋಗ್ಯ ಕಾರಣಕ್ಕೆ ನಿರ್ವಾಹಕ ಹುದ್ದೆ ತ್ಯಜಿಸಿದ್ದರು. ಬಳಿಕ ರಂಗಭೂಮಿ ಕಲಾವಿದೆಯಾಗಿದ್ದರು. ಆದರೆ ಅವರ ಮೇಲೆ ಆಸಿಡ್ ದಾಳಿ ನಡೆಸಲು ನಿಖರ ಕಾರಣ ತಿಳಿದುಬಂದಿಲ್ಲ.

ಬಸ್ ಅಪಘಾತ ಪ್ರಕರಣ; ಪರಾರಿಯಾಗಿದ್ದ ಚಾಲಕ ಅರೆಸ್ಟ್; ಎಫ್ ಐ ಆರ್ ದಾಖಲು

Related Articles

Back to top button