ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಆಭರಣ ಪ್ರಿಯರಿಗೆ ಸಮಾಧಾನಕರ ಸುದ್ದಿ. ದೇಶದಲ್ಲಿ ಇಂದು ಬಂಗಾರದ ಬೆಲೆ ಯಥಾಸ್ಥಿತಿ ಕಾಯ್ದುಕೊಂಡಿದ್ದು, ಯಾವುದೇ ಬದಲಾವಣೆಯಾಗಿಲ್ಲ. ಆದರೆ ಬೆಳ್ಳಿ ದರದಲ್ಲಿ ಕೆಜಿಗೆ 1,100ರೂಪಾಯಿ ಕುಸಿದಿದೆ.
ಇಂದು ಕೂಡ ದೇಶದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 48,200 ರೂ ಇದೆ. 24 ಕ್ಯಾರೆಟ್ ಚಿನ್ನದ ಬೆಲೆ 52,590 ರೂ ಇದೆ. ಮಹಾನಗರಗಳಲ್ಲಿ ಚಿನ್ನ ಬೆಳ್ಳಿ ದರ ಇಂದು ಎಷ್ಟಿದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ರಾಜಧಾನಿ ಬೆಂಗಳೂರಿನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 48,200 ರೂಪಾಯಿ ನಿಗದಿಯಾಗಿದೆ. 24 ಕ್ಯಾರೆಟ್ ಚಿನ್ನ 52,590 ರೂಪಾಯಿ ಇದೆ.
ಇನ್ನು ಹಲವು ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ದರ ಚೆನ್ನೈ- 48,540 ರೂ. ಮುಂಬೈ- 48,200 ರೂ, ದೆಹಲಿ- 48,200 ರೂ, ಕೊಲ್ಕತ್ತಾ- 48,200 ರೂ, ಹೈದರಾಬಾದ್- 48,200 ರೂ, ಪುಣೆ- 48,300 ರೂ ಇದೆ.
24 ಕ್ಯಾರೆಟ್ ಚಿನ್ನ ಚೆನ್ನೈ- 52,960 ರೂ, ಮುಂಬೈ- 52,590 ರೂ, ದೆಹಲಿ- 52,590 ರೂ, ಕೊಲ್ಕತ್ತಾ- 52,590 ರೂ, ಹೈದರಾಬಾದ್- 52,590 ರೂ, ಪುಣೆ- 52,690 ರೂ, ಮೈಸೂರು- 52,590 ರೂ. ಇದ್ದು ಯಾವುದೇ ಬದಲಾವಣೆ ಆಗಿಲ್ಲ.
ಆದರೆ ಇಂದು ದೇಶದಲ್ಲಿ ಬೆಳ್ಳಿ ದರದಲ್ಲಿ ಬದಲಾವಣೆಯಾಗಿದ್ದು, ಭಾರಿ ಕುಸಿತ ಕಂಡಿದೆ. ದೆಹಲಿಯಲ್ಲಿ ಕೆಜಿ ಬೆಳ್ಳಿ ದರ 68,900 ರೂ, ಕೋಲ್ಕತ್ತಾದಲ್ಲಿ ಕೂಡ ಇದೇ ದರ ಇದೆ. ಬೆಂಗಳೂರಿನಲ್ಲಿ ಕೆಜಿ ಬೆಳ್ಳಿ ದರ 73,400 ರೂ, ಚೆನ್ನೈ 73,400 ರೂ ನಿಗದಿಯಾಗಿದೆ.
ಸತತ 5ನೇ ದಿನವೂ ಏರಿಕೆಯಾದ ಪೆಟ್ರೋಲ್-ಡೀಸೆಲ್ ದರ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ