ಪ್ರಗತಿವಾಹಿನಿ ಸುದ್ದಿ; ಪುಣೆ: ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಗಳಲ್ಲಿ ಸಂಚಲನ ಮೂಡಿಸುತ್ತಿರುವ ಎಲೆಕ್ಟ್ರಿಕ್ ಸ್ಕೂಟರ್ ಗಳು ಬೆಂಕಿ ಹೊತ್ತಿಕೊಳ್ಳುತ್ತಿರುವುದು ಗ್ರಾಹಕರಲ್ಲಿ ಆತಂಕವನ್ನುಂಟು ಮಾಡಿದೆ.
ಬ್ಯಾಟರಿ ಚಾಲಿತ ಸ್ಕೂಟರ್ ಗಳು ಸುರಕ್ಷಿತವೇ ಎಂಬ ಅನುಮಾನ ಆರಂಭವಾಗಿವೆ. ರಸ್ತೆಯಲ್ಲಿ ನಿಲ್ಲಿಸಿದ್ದ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡು ಸುಟ್ಟು ಕರಕಲಾಗಿರುವ ಘಟನೆ ಪುಣೆಯಲ್ಲಿ ನಡೆದಿದೆ.
ಪುಣೆಯ ಓಲಾ ಎಸ್ 1 ಪ್ರೋ ಸಿರೀಸ್ ನ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸ್ಕೂಟರ್ ಹೊತ್ತಿ ಉರಿಯುವ ದೃಶ್ಯ ಭಾರಿ ವೈರಲ್ ಆಗಿದೆ.
ಎಲೆಕ್ಟ್ರಿಕ್ ಸ್ಕೂಟರ್ ಗಳಲ್ಲಿ ಲಿಥಿಯಂ ಬ್ಯಾಟರಿ ಇರುತ್ತದೆ. ಒಂದು ವೇಳೆ ಆ ಬ್ಯಾಟರಿಗೆ ಹಾನಿಯಾದಲ್ಲಿ ಶಾರ್ಟ್ ಸರ್ಕ್ಯೂಟ್ ಆದಲ್ಲಿ ಅಥವಾ ಉಷ್ಣಾಂಶ ಹೆಚ್ಚಳದಿಂದ ಬ್ಯಾಟರಿಯಲ್ಲಿ ಬೆಂಕಿ ಹೊತ್ತಿಕೊಳ್ಳುತ್ತದೆ. ಹೈಡ್ರೋಜನ್ ಗ್ಯಾಸ್ ಬೆಂಕಿಯ ತೀವ್ರತೆ ಹೆಚ್ಚಿಸುತ್ತದೆ.
ಓಲಾ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಬೆಂಕಿ ಕಾಣಿಸಿಕೊಂಡ ಬಗ್ಗೆ ತನಿಖೆ ಮಾಡುತ್ತಿರುವುದಾಗಿ ಓಲಾ ಕಂಪನಿ ತಿಳಿಸಿದೆ.
ಎಲೆಕ್ಟ್ರಿಕ್ ಸ್ಕೂಟರ್ ಸ್ಫೋಟ: ತಂದೆ- ಮಗಳು ಬಲಿ
ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ ಕೈತಪ್ಪಲು ಕಾರಣ ಬಿಚ್ಚಿಟ್ಟ ಹೆಚ್.ವಿಶ್ವನಾಥ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ