Good News : ಬೆಳಗಾವಿ – ದೆಹಲಿ ಮಧ್ಯೆ ಪ್ರತಿ ನಿತ್ಯ 189 ಆಸನದ ವಿಮಾನ : ಭಾನುವಾರದಿಂದಲೇ ಆರಂಭ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ವಾರದಲ್ಲಿ 4 ದಿನ ಸಂಚರಿಸುತ್ತಿದ್ದ ಬೆಳಗಾವಿ – ದೆಹಲಿ ನಡುವಿನ ನೇರ ವಿಮಾನ ಇನ್ನು ಮುಂದೆ ನಿತ್ಯವೂ ಸಂಚರಿಸಲಿದೆ.
ಸಂಚಾರ ದಟ್ಟಣೆ ಗಮನಿಸಿ ಆಪರೇಟಿಂಗ್ ಕಂಪನಿ ಈ ನಿರ್ಧಾರಕ್ಕೆ ಬಂದಿದ್ದು, ಭಾನುವಾರದಿಂದಲೇ ನಿತ್ಯದ ವಿಮಾನ ಶುರುವಾಗಿದೆ.
ಸ್ಪೈಸ್ ಜೆಟ್ ಕಂಪನಿ ವಾರದಲ್ಲಿ 4 ದಿನ ಬೆಳಗಾವಿ – ದೆಹಲಿ ಮಧ್ಯೆ ವಿಮಾನ ಸಂಚಾರ ನಡೆಸುತ್ತಿತ್ತು. ಪ್ರಯಾಣಿಕರ ಸಂಖೆ ಸಾಕಷ್ಟು ಹೆಚ್ಚಿರುವುದರಿಂದ ಅದನ್ನು ವಾರದ 7 ದಿನವೂ ಆರಂಭಿಸಲಾಗಿದೆ ಎಂದು ಏರ್ಪೋರ್ಟ್ ನಿರ್ದೇಶಕ ರಾಜೇಶ ಕುಮಾರ ಮೌರ್ಯ ಪ್ರಗತಿವಾಹಿನಿಗೆ ತಿಳಿಸಿದರು.
ಬೆಳಗ್ಗೆ 6.05ಕ್ಕೆ ದೆಹಲಿಯಿಂದ ಹೊರಡುವ ವಿಮಾನ 8.45 ಕ್ಕೆ ಬೆಳಗಾವಿ ತಲುಪಲಿದೆ. 9.15ಕ್ಕೆ ಬೆಳಗಾವಿಯಿಂದ ಹೊರಟು 11.45ಕ್ಕೆ ದೆಹಲಿ ತಲುಪಲಿದೆ.
189 ಸೀಟರ್ ಬೋಯಿಂಗ್ B737 /700 ವಿಮಾನ ಇದಾಗಿದೆ. ಭಾನುವಾರ 114 ಜನರು ದೆಹಲಿಯಿಂದ ಬೆಳಗಾವಿಗೆ ಆಗಮಿಸಿದರೆ, 167 ಜನರು ಬೆಳಗಾವಿಯಿಂದ ದೆಹಲಿಗೆ ತೆರಳಿದರು.
#AzadiKaAmritMahotsav #HighPotentialBelagaviAirport
Acft :B737-700
189Seater)by @flyspicejet
Delhi pax Footfall:
27th March
Arr from Delhi-114/189
Dep to Delhi-167/189
Now,Delhi Flight all Days.
Thanks @flyspicejet@AAI_Official @MoCA_GoI @ushapadhee1996 @AAIRHQS @DelhiAirport pic.twitter.com/SEgLq8Gukt— Belagavi Airport ಬೆಳಗಾವಿ ವಿಮಾನ ನಿಲ್ದಾಣ (@aaiblgairport) March 27, 2022
ವರ್ಷದ ಉದ್ಯಮ ಪ್ರಶಸ್ತಿಗೆ ಬೆಳಗಾವಿಯ ಸಿಕೇರ್ – CCARE of Belagavi awarded as the ENTERPRISE of The YEAR
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ