Latest

ಉಚಿತ ಬೇಸಿಗೆ ಶಿಬಿರಕ್ಕೆ ಅರ್ಜಿ ಆಹ್ವಾನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ನಗರದ ಜಿಲ್ಲಾ ಬಾಲಭವನದಲ್ಲಿ ೧೫ ದಿನಗಳ ಕಾಲ ಉಚಿತ ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿದೆ.
ಈ ಬೇಸಿಗೆ ಶಿಬಿರವು ಶ್ರೀನಗರ ಡಬಲ ರೋಡ ಅಕ್ಕನ ಮಾರ್ಗ ಮಾಳಮಾರುತಿ ಬಡಾವಣೆಯಲ್ಲಿರುವ ಬಾಲಭವನದಲ್ಲಿ ಬೆಳಿಗ್ಗೆ ೧೦ ಗಂಟೆಯಿಂದ ೪ ಗಂಟೆಯವರೆಗೆ ಹಮ್ಮಿಕೊಳ್ಳಲಾಗುವುದು.
ತರಬೇತಿ ಶಿಬಿರದ ಚಟುವಟಿಕೆಗಳಾದ ಚಿತ್ರಕಲೆ, ಜೇಡಿಮಣ್ಣಿನ ಕಲೆ, ಶಾಸ್ತ್ರೀಯ ಸಮೂಹ ನೃತ್ಯ, ಶಾಸ್ತ್ರೀಯ ಸಮೂಹ ಸಂಗೀತ, ಕರಾಟೆ, ಯೋಗ, ಕ್ರೀಡೆ (ಚೆಸ್ ಮತ್ತು ಕೇರಂ) ಜ್ಯೂವಲರಿ ಮೇಕಿಂಗ್, ಮೆಹಂದಿ ಹಾಗೂ ಪ್ರವಾಸ, ಹೊರಸಂಚಾರ ಆಯ್ಕೆಯಾದ ೫೦ ಮಕ್ಕಳಿಗೆ ಮಾತ್ರ ಆಯೋಜಿಸಲಾಗಿದ್ದು ೫ ರಿಂದ ೧೬ ವರ್ಷದೊಳಗಿನ ಮಕ್ಕಳಿಗೆ ಅವಕಾಶ ಕಲ್ಪಿಸಲಾಗಿದೆ.
ಸರಕಾರಿ ಶಾಲೆ ಮಕ್ಕಳು, ವಿಕಲಚೇತನ ಮಕ್ಕಳು ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗದ ಮಕ್ಕಳಿಗೆ ವಿಶೇಷ ಆಧ್ಯತೆ ನೀಡಲಾಗುವುದು. ಶಿಬಿರದ ಅವಧಿಯಲ್ಲಿ ಮಕ್ಕಳಿಗೆ ವಿವಿಧ ಸ್ಪರ್ಧೆ ಹಾಗೂ ಉಪನ್ಯಾಸ ಹಮ್ಮಿಕೊಳ್ಳಲಾಗುವುದು. ಶಿಬಿರದ ೮೫ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿರುವದರಿಂದ ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು.
ಅರ್ಜಿಯನ್ನು ಏಪ್ರಿಲ್ ೩೦ ರವರೆಗೆ ವಿಸ್ತರಿಸಲಾಗಿದ್ದು, ಅಂದು ಸಾಯಂಕಾಲ ೫.೩೦ ರೊಳಗೆ ಸಲ್ಲಿಸಬೇಕು. ಇಲ್ಲಿ ಮೊದಲು ಬಂದವರಿಗೆ ಆಧ್ಯತೆ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿವಾಜಿನಗರ ಮೂರನೇ ಕ್ರಾಸ್, ಬೆಳಗಾವಿ. ದೂರವಾಣಿ ಸಂಖ್ಯೆ (೦೮೩೧) ೨೪೦೭೨೩೫ ಶ್ರೀಮತಿ. ದ್ರಾಕ್ಷಾಯಣಿ. ಭೀ. ಎಮ್. : ೮೧೪೭೩೦೭೫೦೭ ಜಿಲ್ಲಾ ಬಾಲಭವನ ಬೆಳಗಾವಿ ಈ ವಿಳಾಸಕ್ಕೆ ಸಂಪರ್ಕಿಸಿ ಅರ್ಜಿಯನ್ನು ಸಲ್ಲಿಸಬೇಕು ಎಂದು ಬೆಳಗಾವಿಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Back to top button