Latest

ಒಂದು ತಿಂಗಳ ಬಳಿಕ ಶೇನ್ ವಾರ್ನ್ ಅತ್ಯಂಕ್ರಿಯೆ : ಸಿಗರೇಟ್ ಮತ್ತು ಬಿಯರ್‌ ಬಾಟಲಿ ಇಟ್ಟು ಶ್ರದ್ಧಾಂಜಲಿ

ಮೆಲ್ಬೋರ್ನ್ –
ಥಾಯ್ ಲ್ಯಾಂಡ್ ನಲ್ಲಿ ಖಾಸಗಿ ಕೆಲಸದ ನಿಮಿತ್ತ ತೆರಳಿದ್ದಾಗ ಹೃದಯಾಘಾತದಿಂದ ಸಾವನ್ನಪ್ಪಿದ್ದ ಶೇನ್ ವಾರ್ನ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆ ಬಳಿಕೆ ಇತ್ತೀಚೆಗಷ್ಟೇ ಆಸ್ಟ್ರೇಲಿಯಾಕ್ಕೆ ಕರೆತರಲಾಗಿತ್ತು. ಹೃದಯಘಾತದಿಂದ ಅವರು ಮೃತಪಟ್ಟಿದ್ದಾಗಿ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಹೇಳಲಾಗಿತ್ತು.  ನಂತರ ಅವರ ಪಾರ್ಥಿವ ಶರೀರವನ್ನು ಸೂರತ್ ಥನಿ ಮತ್ತು ಬ್ಯಾಂಕಾಂಕ್ ಗೆ ರವಾನಿಸಲಾಗಿತ್ತು.
ಮಾರ್ಚ್ 4 ರಂದು ಹೃದಯಾಘಾತದಿಂದ ಸಾವನ್ನಪ್ಪಿದ್ದ ಆಸ್ಟ್ರೇಲಿಯಾ ಕ್ರಿಕೆಟ್ ದಿಗ್ಗಜ ಶೇನ್ ವಾರ್ನ್ ಇದೀಗ ಅವರ ತವರು ಎಂಸಿಜೆ ಮೈದಾನದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಕ್ರಿಯೆ ನೆರವೇರಿಸಲಾಯಿತು. ಈ ವೇಳೆ ಶೇನ್ ತಂದೆ, ಮೂವರು ಮಕ್ಕಳು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು, ಗಣ್ಯರು ಉಪಸ್ಥಿತರಿದ್ದರು. ಇದೇ ವೇಳೆ ಎಂಸಿಜೆ ಮೈದಾನದ ಒಂದು ಸ್ಟ್ಯಾಂಡ್ ಗೆ ಶೇನ್ ವಾರ್ನ್ ಹೆಸರು ನಾಮಕರಣ ಮಾಡಲಾಯಿತು.
ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ವಿಕ್ಟೋರಿಯನ್ನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಲಿದ್ದಾರೆ ಎಂದು ಪ್ರಧನಿ ಹೇಳಿಕೊಂಡಿದ್ದಾರೆ. ಜೊತೆಗೆ ಈಗಾಗಲೇ ಅನೇಕ ಅಭಿಮಾನಿಗಳು ವಾರ್ನ್​ರವರಿಗೆ ಗೌರವ ಸಲ್ಲಿಸಲು MCG ಬಳಿ ಬರುತ್ತಿದ್ದು, ಎಂಸಿಜಿಯಲ್ಲಿರುವ ವಾರ್ನ್ ಅವರ ಪ್ರತಿಮೆಗೆ ಜನರು ಹೂವು, ಸಿಗರೇಟ್ ಮತ್ತು ಬಿಯರ್‌ ಬಾಟಲಿ ಇಟ್ಟು ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.

Related Articles

Back to top button