Latest

ಮಹಿಳೆ ಮತ್ತು ಆಕೆಯ ಪುತ್ರಿಯನ್ನು ಕೊಂದ ಆರೋಪ; ಮಾಜಿ ಶಾಸಕನಿಗೆ ಜೀವಾವಧಿ ಶಿಕ್ಷೆ

ಪ್ರಗತಿ ವಾಹಿನಿ ಸುದ್ದಿ; ಭುವನೇಶ್ವರ: ಲೀವ್ ಇನ್ ರಿಲೇಶನ್‌ಶಿಪ್ ಹೊಂದಿದ್ದ ಮಹಿಳೆ ಮತ್ತು ಆಕೆಯ ಮಗಳನ್ನು ಕೊಂದ ಆರೋಪದಲ್ಲಿ ಓರಿಸ್ಸಾದ ಮಾಜಿ ಶಾಸಕ ಬಿಜು ಜನತಾ ದಳ (ಬಿಜೆಡಿ ) ಮುಖಂಡ ಅನೂಪ್ ಸಾಯ್‌ಗೆ ಜೀವಾವಧಿ ಶಿಕ್ಷೆ ವಿಧಿಸಿ ಚತ್ತಿಸ್‌ಘಡದ ರಾಯ್‌ಗರ್ ಸೆಶನ್ಸ್ ನ್ಯಾಯಾಲಯ ತೀರ್ಪು ನೀಡಿದೆ.

ಮೊದಲು ಕಾಂಗ್ರೆಸ್ ಪಕ್ಷದಲ್ಲಿದ್ದ ಅನೂಪ್ ಸಾಯ್ ೨೦೦೦ ದಿಂದ ೨೦೦೯ರ ಅವದೀಯಲ್ಲಿ ಬ್ರಜ್‌ರಂಜ್‌ನಗರ್ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿದ್ದರು. ಬಳಿಕ ೨೦೧೪ರಲ್ಲಿ ಅವರು ಬಿಜು ಜನತಾ ದಳ ಸೇರಿದ್ದರು.

ಈ ನಡುವೆ ೨೦೧೧ರಲ್ಲಿ ಅವರಿಗೆ ಕಲ್ಪನಾ ದಾಸ್ (೩೨) ಎಂಬ ಮಹಿಳೆಯ ಪರಿಚಯವಾಗಿತ್ತು. ಪತಿಯಿಂದ ಅದಾಗಲೇ ವಿಚ್ಛೇದನ ಪಡೆದಿದ್ದ ಕಲ್ಪನಾರೊಂದಿಗೆ ಅನೂಪ್ ಲೀವ್ ಇನ್ ರಿಲೇಶನ್ ಹೊಂದಿದರು. ಅಲ್ಲದೇ ಕಲ್ಪನಾ ಮತ್ತು ಆಕೆಯ ಪುತ್ರಿ ಬುಬ್ಲಿ (೧೪) ಅವರ ವಾಸಕ್ಕೆ ಪ್ರತ್ಯೇಕ ಪ್ಲಾಟ್ ಖರೀದಿಸಿಕೊಟ್ಟಿದ್ದರು.

ಆದರೆ ಕಲ್ಪನಾ ತನನ್ನು ಮುದುವೆಯಾಗುವಂತೆ ಅನೂಪ್‌ರನ್ನು ಒತ್ತಾಯಿಸತೊಡಗಿದ್ದರು. ಈ ನಡುವೆ ೨೦೧೬ರಲ್ಲಿ ಕಲ್ಪನಾ ಮತ್ತು ಆಕೆಯ ಪುತ್ರಿಯ ಪ್ಲಾö್ಯಟ್‌ನಿಂದ ಕಾಣೆಯಾಗಿದ್ದರು. ೨೦೧೬ರ ಮೇ ೭ರಂದು ಅವರಿಬ್ಬರ ಶವ ಚತ್ತೀಸ್‌ಘಡ ಗಡಿಯ ಜರ್ಸುದಾ ಎಂಬಲ್ಲಿ ಪತ್ತೆಯಾಗಿತ್ತು.

Home add -Advt

ತನಿಖೆ ನಡೆಸಿದ ಪೊಲೀಸರು ೨೦೨೦ರಲ್ಲಿ ಅನೂಪ್ ಸಾಯ್ ಮತ್ತು ಆತನ ಕಾರ್ ಡ್ರೆöÊವರ್ ಬರ್ಧನ್ ತಪ್ಪೋ ಎಂಬುವವನನ್ನು ಬಂಧಿಸಿದ್ದರು. ಅನೂಪ್ ಸಾಯ್ ಮೇಲೆ ಐಪಿಸಿ ಸೆಕ್ಷನ್ ೩೦೨ (ಕೊಲೆ) ೨೦೧( ಸಾಕ್ಷö್ಯ ನಾಶ) ಹಾಗೂ ೧೨೦ಬಿ (ಸಾಕ್ಷö್ಯಗಳ ನಾಶ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಚತ್ತೀಸ್‌ಗಡದ ರಾಯ್‌ಗರ್ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅನೂಪ್ ಸಾಯ್‌ಗೆ ಜೀವಾವಧಿ ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.
ಸಿಬ್ಬಂದಿ ಅಚಾತುರ್ಯ, ಬ್ಯಾಂಕಿನೊಳಗೇ ಲಾಕ್ ಆದ ತಂದೆ ಮಗ

Related Articles

Back to top button