Latest

ಲುಂಗಿ ಡ್ಯಾನ್ಸ್ ಖ್ಯಾತಿಯ ಯೋ ಯೋ ಹನಿಸಿಂಗ್ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ

ಪ್ರಗತಿ ವಾಹಿನಿ ಸುದ್ದಿ ನವದೆಹಲಿ – 

ಲುಂಗಿ ಡ್ಯಾನ್ಸ್ ಸೇರಿದಂತೆ ತಮ್ಮದೆ ಆದ ವಿಶಿಷ್ಟ ಶೈಲಿಯ ಹಾಡುಗಳ ಮೂಲಕ ಜನಪ್ರಿಯರಾಗಿರುವ ಹೃದೇಶ್ ಸಿಂಗ್ ( ಯೋ ಯೋ ಹನಿ ಸಿಂಗ್ ) ಅವರ ಮೇಲೆ ದಕ್ಷಿಣ ದೆಹಲಿಯ ಕ್ಲಬ್ ಒಂದರಲ್ಲಿ ಹಲ್ಲೆ ನಡೆದಿದ್ದು ಈ ಕುರಿತು ಹನಿ ಸಿಂಗ್ ಪೊಲೀಸ್ ದೂರು ದಾಖಲಿಸಿದ್ದಾರೆ.

ಯೋ ತಯೋ ಹನಿ ಸಿಂಗ್ ಮತ್ತು ತಂಡ ದಕ್ಷಿಣ ದೆಹಲಿಯ ಎರಡನೇ ಬಡಾವಣೆಯ ಸ್ಕೋಲ್ ಕ್ಲಬ್‌ನಲ್ಲಿ ಕಾರ್ಯಕ್ರಮ ನೀಡಲು ತೆರಳಿದ್ದರು. ಕಾರ್ಯಕ್ರಮ ನಡೆಯುತ್ತಿರುವಾಗಲೇ ವೇದಿಕೆ ಮೇಲೆ ಏರಿದ ೪-೫ ಜನ ಯುವಕರ ಗುಂಪು ಕಲಾವಿದರನ್ನು ಎಳೆದಾಡಿದ್ದಾರೆ. ಅಲ್ಲದೆ ಹಲ್ಲೆ ಕೂಡ ನಡೆಸಿದ್ದಾರೆ.

ಹನಿ ಸಿಂಗ್ ಅವರ ಕೈ ಹಿಡಿದು ಎಳೆದ ವ್ಯಕ್ತಿಯೊಬ್ಬ ಅವರ ಮೇಲೆ ಹಲ್ಲೆ ನಡೆಸಿದ್ದಾನೆ. ಆತನ ಕೈಯ್ಯಲ್ಲಿ ಆಯುಧವಿದ್ದಿದ್ದನ್ನು ನೋಡಿದ್ದೇನೆ. ಘಟನೆಯ ಬಳಿಕ ನಾವು ಕಾರ್ಯಕ್ರಮವನ್ನು ಅರ್ಧಕ್ಕೇ ನಿಲ್ಲಿಸಿ ವಾಪಾಸಾಗಿದ್ದೇವೆ ಎಂದು ಹನಿ ಸಿಂಗ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ದಕ್ಷಿಣ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

Home add -Advt

ಕೇಂದ್ರ ಸಚಿವ ಅನುರಾಗ ಸಿಂಗ್ ಠಾಕೂರ್ ಭೇಟಿಯಾದ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಸಂಸದ ಅಣ್ಣಾಸಾಹೇಬ ಜೊಲ್ಲೆ

Related Articles

Back to top button