Kannada NewsLatest
ಚಂದನಹೊಸೂರಿನ ಶ್ರೀ ಲಕ್ಷ್ಮೀ ದೇವಿ ಮಂದಿರದ ಜೀರ್ಣೋದ್ಧಾರಕ್ಕೆ ಅನುದಾನದ ಒದಗಿಸಿದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿ ತಾಲೂಕಿನ ಚಂದನಹೊಸೂರ ಗ್ರಾಮದ ಶ್ರೀ ಲಕ್ಷ್ಮೀ ದೇವಿ ಮಂದಿರ ಜೀರ್ಣೋದ್ಧಾರದ ಅನುದಾನದ ಎರಡನೇ ಕಂತಾಗಿ 5 ಲಕ್ಷ ರೂ.ಗಳನ್ನು ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರು ದೇವಸ್ಥಾನ ಟ್ರಸ್ಟ್ ಕಮೀಟಿಗೆ ಹಸ್ತಾಂತರಿಸಿದರು.
ಶ್ರೀ ಲಕ್ಷ್ಮೀ ದೇವಿ ಮಂದಿರದ ಜೀಣೋದ್ಧಾರದ ಸಲುವಾಗಿ ಒಟ್ಟು ಮಂಜೂರಾಗಿರುವ 8 ಲಕ್ಷ ರೂ,ಗಳ ಪೈಕಿ ಮೊದಲನೇ ಕಂತಿನಲ್ಲಿ 3 ಲಕ್ಷ ರೂ,ಗಳನ್ನು ದೇವಸ್ಥಾನ ಟ್ರಸ್ಟ್ ಕಮೀಟಿಗೆ ಈಗಾಗಲೇ ಶಾಸಕಿ ಹಸ್ತಾಂತರಿಸಿದ್ದಾರೆ. ಉಳಿದ 5 ಲಕ್ಷ ರೂ,ಗಳ ಕಂತನ್ನು ದೇವಸ್ಥಾನ ಟ್ರಸ್ಟ್ ಕಮೀಟಿಯವರಿಗೆ ಶುಕ್ರವಾರ ಶಾಸಕರು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಟ್ರಸ್ಟ್ ಕಮೀಟಿಯವರು, ಸದೆಪ್ಪ ತಾನಸಿ, ಕಲ್ಲಪ್ಪ ಕುಂದರಗಿ, ಶಿವಾಜಿ ಕಮ್ಮಾರ, ಕೆಂಪಣ್ಣ, ಶಿವಲಿಂಗ ಕರಬಣ್ಣವರ, ತಾರಿಹಾಳ ಹಾಗೂ ಚಂದನಹೊಸೂರಿನ ಹಿರಿಯರು, ಗಣ್ಯರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ