ಭಾರತೀಯ ಶಸ್ತ್ರಚಿಕಿತ್ಸಾ ತಜ್ಞವೈದ್ಯರ ಸಂಘದ ಅಧ್ಯಕ್ಷರಾದ ಡಾ. ಜಿ ಸಿದ್ದೇಶ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ರೋಗಿಗಳ ವೈದ್ಯಕೀಯ ಪರೀಕ್ಷೆಗಳ ಮೂಲಕ ಚಿಕಿತ್ಸೆ ನೀಡದೇ, ರೋಗಿಗಳೊಂದಿಗೆ ನೇರ ಸಂಪರ್ಕದಲ್ಲಿರಬೇಕು. ವೈದ್ಯರು ಮಾರುಕಟ್ಟೆ ಮತ್ತು ಲಾಭದ ಸೇವೆಗಳಿಗೆ ಗಮನ ನೀಡದೇ ಕೌಶಲ್ಯಭರಿತ ವಿಶೇಷ ಶಸ್ತ್ರಚಿಕಿತ್ಸೆಗಳ ಗುಣಮಟ್ಟ ಕಾಯ್ದುಕೊಂಡು ದೀರ್ಘ ತರಬೇತಿಯೊಂದಿಗೆ ರೋಗಿಗಳ ಸೇವೆಯಲ್ಲಿ ತೊಡಗಿಬೇಕೆಂದು ಭಾರತೀಯ ಶಸ್ತ್ರಚಿಕಿತ್ಸಾ ತಜ್ಞವೈದ್ಯರ ಸಂಘದ ಅಧ್ಯಕ್ಷರಾದ ಡಾ. ಜಿ ಸಿದ್ದೇಶ ಅವರಿಂದಿಲ್ಲಿ ಹೇಳಿದರು.
ಕಾಹೆರ, ಜವಾಹರಲಾಲ ನೆಹರು ವೈದ್ಯಕೀಯ iಹಾವಿದ್ಯಾಲಯ, ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರ ಇವುಗಳ ಸಂಯುಕ್ತಾಶ್ರಯದಲ್ಲಿ ಜೆಎನ್‌ಎಂಸಿ ಸೈಂಟಿಫಿಕ್ ಸೊಸಾಯಿಟಿಯ ೪೦ನೇ ವಾರ್ಷಿಕ ಕಾರ‍್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಸ್ತ್ರಚಿಕಿತ್ಸೆಯಿಂದ ಸಂಪೂರ್ಣ ಚೇತರಿಸಿಕೊಂಡ ನಂತರ ರೋಗಿಯ ನಗುವನ್ನು ನೋಡುವುದೇ ಶಸ್ತ್ರಚಿಕಿತ್ಸಕರಿಗೆ ತುಂಬಾ ತೃಪ್ತಿದಾಯಕ ಎಂದ ಅವರು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ವೈದ್ಯಕೀಯ ವೃತ್ತಿಯನ್ನು ಪ್ರವೇಶಿಸುತ್ತಿರುವುದು ಸ್ವಾಗತಾರ್ಹ ಬದಲಾವಣೆಯಾಗಿದೆ ಸಂತೋಷ ವ್ಯಕ್ತಪಡಿಸಿದರು.
ರೋಗಗಳ ಮಾದರಿ ಬದಲಾಗುತ್ತಿವೆ. ಆಧುನಿಕತೆಯಲ್ಲಿ ಅನೇಕ ಸೂಪರ್ ಸ್ಪೆಲಿಟಿ ವಿಭಾಗಗಳು ಹುಟ್ಟಿಕೊಳ್ಳುತ್ತಿವೆ. ವೈದ್ಯಕೀಯ ಕ್ಷೇತ್ರದಲ್ಲಿ ಅಭಿವೃದ್ಧಿ, ತಾಂತ್ರಿಕ ಪ್ರಗತಿಗಳು ಕಂಡು ಬರುತ್ತಿದ್ದು, ಇದರಿಂದ ಶಸ್ತ್ರಚಿಕಿತ್ಸಕರು ಸವಾಲುಗಳನ್ನು ಎದುರಿಸುವಂತಾಗಿದೆ. ವೈದ್ಯಕೀಯ ವಿಜ್ಞಾನವು ವಿಕಸನಗೊಳ್ಳುತ್ತಿದೆ. ವೈದ್ಯ ಸೇವೆಯಲ್ಲಿರುವವರು ಇತ್ತೀಚಿನ ಕೌಶಲ್ಯ, ತಂತ್ರಜ್ಞಾನಗಳೊಂದಿಗೆ ಕಲಿಕೆಯ ಸಾಮರ್ಥ್ಯವನ್ನು ನವೀಕರಿಸಿಕೊಳ್ಳಬೇಕು. ನಿರಂತರ ಕಲಿಕೆ, ಬದಲಾಗುತ್ತಿರುವ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದು ಮುಖ್ಯ ಎಂದು ಸಲಹೆ ನೀಡಿದರು.
ಡಾ.ಬಿ.ಎಸ್.ಜಿರಗೆ ಉಪನ್ಯಾಸ ನೀಡಿದ ಡಾ.ಜಿ.ಸಿದ್ದೇಶ್, ಶ್ರಮವಿಲ್ಲದ ಜೀವನಶೈಲಿಯಿಂದಾಗಿ ಸಾಂಕ್ರಾಮಿಕವಲ್ಲದ ರೋಗಗಳು ವಿಶೇ?ವಾಗಿ ಕ್ಯಾನ್ಸರ್ ರೋಗವು ಹೆಚ್ಚುತ್ತಿದ್ದು, ರೋಗವು ತನ್ನ ಮುಖಚರ‍್ಯೆಯನ್ನು ಬದಲಾಯಿಸುವುದು ವೈದ್ಯಕೀಯ ಕ್ಷೇತ್ರಕ್ಕೆ ಸವಾಲಾಗಿದೆ. ವಯಸ್ಸಾದವರ ಜನಸಂಖ್ಯೆ ಅಧಿಕಗೊಳ್ಳುತ್ತಿದ್ದು, ಅವರ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಬೇಕು. ತೂಕ ಕಡಿಮೆಗೊಳಿಸುವ ಶಸ್ತ್ರಚಿಕಿತ್ಸೆ ಮತ್ತು ಕಾಸ್ಮೆಟಿಕ್ ಶಸ್ತ್ರಚಿಕಿತ್ಸೆಯ ಅರಿವು ಹೆಚ್ಚಾಗಿರುವದರಿಂದ ಶಸ್ತ್ರಚಿಕಿತ್ಸೆಗೆ ಒಳಗಾಗುವರ ಸಂಖ್ಯೆ ಹೆಚ್ಚಾಗುತ್ತಿದ್ದು, ಅದೊಂದು ಪ್ರವೃತ್ತಿಯಾಗಿ ಮಾರ್ಪಟ್ಟಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಚಿಕ್ಕ ರಂದ್ರದ ಮೂಲಕ ಶಸ್ತ್ರಚಿಕಿತ್ಸೆ, ಎಂಡೋಸ್ಕೋಪಿ, ಲೇಸರ್ ಮತ್ತು ರೊಬೊಟಿಕ್ಸ್, ನ್ಯಾವಿಗೇ?ನ್ ತಂತ್ರಜ್ಞಾನದಿಂದ ಶಸ್ತ್ರಚಿಕಿತ್ಸೆಗಳು ಸರಳವಾಗಿವೆ. ಕೃತಕ ಬುದ್ಧಿಮತ್ತೆ ವೈದ್ಯರಿಗೆ ಸಹಾಯ ಮಾತ್ರ, ವೈದ್ಯರಿಗೆ ಪರ್ಯಾಯ ಆಯ್ಕೆಯಲ್ಲ. ವೈದ್ಯರು ಮಾನವ ಸ್ಪರ್ಶವನ್ನು ಕಳೆದುಕೊಳ್ಳಬಾರದು ಎಂದು ಸಲಹೆವಿತ್ತರು.
ಉಪಕುಲಪತಿ ಡಾ. ವಿವೇಕ್ ಸಾವೋಜಿ ಮಾತನಾಡಿ, ಗುಣಮಟ್ಟದ ಆರೋಗ್ಯ ಸೇವೆಯನ್ನು ತಲುಪಿಸಲು ಜ್ಞಾನವನ್ನು ಸಂಗ್ರಹಿಸುವುದು, ಶಸ್ತ್ರಚಿಕಿತ್ಸಾ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವುದು ಅತ್ಯಗತ್ಯ. ರೋಗಿಗಳಿಗೆ ಉತ್ತಮ ಆರೈಕೆ ನೀಡಲು ವೈದ್ಯರು ಜ್ಞಾನವನ್ನು ಹಂಚಿಕೊಳ್ಳುವ ಕಾರ್ಯದಲ್ಲಿ ನಿಯಮಿತವಾಗಿ ಭಾಗವಹಿಸಬೇಕು. ಜೀವಮಾನವಿಡೀ ಕಲಿಯುವುದು ವೈದ್ಯಕೀಯ ವೃತ್ತಿಯ ಲಕ್ಷಣ. ಸಂಶೋಧನೆಯ ಮೂಲಕ ಮಾತ್ರ ಅಭಿವೃದ್ಧಿ ಹೊಂದಬಹುದು. ಕಾಹೇರ ಉತ್ತಮ ಸಂಶೋಧನಾ ಯೋಜನೆಗಳಿಗೆ ಸಾಕ? ಧನಸಹಾಯ ನೀಡುತ್ತಿದೆ. ಅದು ಅಂತಿಮವಾಗಿ ಸಮಾಜಕ್ಕೆ ಪ್ರಯೋಜವಾಗಲಿದೆ ಎಂದು ತಿಳಿಸಿದರು.
ಆಸ್ಪತ್ರೆಯ ಸ್ತ್ರೀರೋಗ ಮತ್ತು ಹೆರಿಗೆ ವಿಭಾಗವು ಅತ್ಯಂತ ಸಂಕೀರ್ಣ ಮತ್ತು ಕ್ಲಿಷ್ಟಕರವಾದ ಶಸ್ತ್ರಚಿಕಿತ್ಸೆಗಳನ್ನು ನೆರವೇರಿಸುತ್ತಿರುವದರಿಂದ ಅತ್ಯುತ್ತಮ ವಿಭಾಗವಾಗಿ ಹೊರಹೊಮ್ಮಿದ್ದು, ಡಾ. ಅನಿತಾ ದಲಾಲ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು.
ಕಾಹೆರ ಕುಲಸಚಿವರಾದ ಡಾ.ವಿ.ಎ.ಕೋಠಿವಾಲೆ, ರಿಜಿಸ್ಟ್ರಾರ್, ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ‍್ಯರಾದ ಡಾ.ಎನ್.ಎಸ್.ಮಹಾಂತಶೆಟ್ಟಿ ಅವರು ಮಾತನಾಡಿದರು. ಸಂಘಟನಾಧ್ಯಕ್ಷರಾದ ಡಾ. ಶ್ರೀಶೈಲ್ ಮೆಟಗುಡ್ ಸ್ವಾಗತಿಸಿ, ಪರಿಚಯಿಸಿದರು. ಡಾ.ರಮೇಶ ಕೌಜಲಗಿ ವಂದಿಸಿದರು. ಈ ಸಂದರ್ಭದಲ್ಲಿ ಡಾ.ವಿ.ಡಿ.ಪಾಟೀಲ, ಡಾ.ಎಂ.ವಿ.ಜಾಲಿ, ಡಾ.ವಿ.ಎಂ.ಪಟ್ಟಣಶೆಟ್ಟಿ, ಡಾ.ಸುಮಾ, ಡಾ.ಸಮೀರ್ ಚಾಟೆ, ಡಾ.ರಾಹುಲ್, ಡಾ.ಆರೀಫ್ ಮಾಲ್ದಾರ್, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
*ಮರಳಿ ತೀರ್ಥಹಳ್ಳಿಗೆ ಅಭಿಯಾನ ಕೈಗೊಳ್ಳಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆ*
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ