ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಯುಗಾದಿಯ ನಂತರ ಚಿನ್ನದ ದರದಲ್ಲಿ ಸುಮಾರು 650 -710 ರೂ.ಗಳಷ್ಟು ಏರಿಕೆ ಕಂಡಿದ್ದು, ಕಳೆದ 3 ದಿನದಿಂದ ಸ್ಥಿರವಾಗಿದೆ.
ಬೆಳ್ಳಿ ಮತ್ತು ಬಂಗಾರ ಎರಡೂ ಮಾರ್ಚ್ ತಿಂಗಳ ಕನಿಷ್ಠ ಮತ್ತು ಗರಿಷ್ಠ ದರದ ಸರಾಸರಿ ದರ ಇಂದು ಕಾಣಿಸಿದೆ.
ಸೋಮವಾರ ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ದರ 48,600 ಇದ್ದರೆ, 24 ಕ್ಯಾರೆಟ್ ದರ 53,020 ರೂ. ಇದೆ. ಕಳದ 3 ದಿನದಿಂದ ಇದೇ ದರ ಮುಂದುವರಿದಿದೆ.
ಕಳೆದ ಶುಕ್ರವಾರ (ಏ.8) 22 ಕ್ಯಾರೆಟ್ ಚಿನ್ನದ ದರ 48, 250 ರೂ ಹಾಗೂ 24 ಕ್ಯಾರೆಟ್ ದರ 52,630 ಇತ್ತು. ಶನಿವಾರ ದಿಢೀರ್ 350 -390 ರೂಗಳಷ್ಟು ಏರಿಕೆ ಕಂಡಿತ್ತು.
ಯುಗಾದಿಯ ದಿನ 22 ಕ್ಯಾರೆಟ್ ದರ 47,950, 24 ಕ್ಯಾರೆಟ್ ದರ 52,310 ರೂ. ದಾಖಲಾಗಿತ್ತು.
ಮಾರ್ಚ್ ತಿಂಗಳಲ್ಲಿ ಗರಿಷ್ಠ 22 ಕ್ಯಾರೆಟ್ ಗೆ 49,800 ಹಾಗೂ 24 ಕ್ಯಾರೆಟ್ ಗೆ 54,330 ದಾಖಲಾಗಿತ್ತು. ಮಾರ್ಚ್ ತಿಂಗಳ ಕನಿಷ್ಠ ದರ 22 ಕ್ಯಾರೆಟ್ ಗೆ 46,700 ಹಾಗೂ 24 ಕ್ಯಾರೆಟ್ ಗೆ 50,950 ರೂ. ದಾಖಲಾಗಿದೆ.
ಬೆಳ್ಳಿ –
ಬೆಳ್ಳಿಯ ದರ ನಿನ್ನೆಗಿಂತ ಇಂದು ಸ್ವಲ್ಪ ಏರಿಕೆ ಕಂಡಿದೆ. ಇದು ಏಪ್ರಿಲ್ ತಿಂಗಳ ಗರಿಷ್ಠ ದರವಾಗಿದೆ. ನಿನ್ನೆ ಕಿಲೋಗೆ 71,500 ಇದ್ದ ದರ ಇಂದು 71,700 ರೂ. ಆಗಿದೆ. ಶನಿವಾರ (ಏ.8) 71,300 ದರ ದಾಖಲಾಗಿತ್ತು. ಯುಗಾದಿಯ ದಿನ ಕೂಡ 71,300 ರೂ. ದಾಖಲಾಗಿತ್ತು.
ಏಪ್ರಿಲ್ 6ರಂದು 70, 700 ರೂ. ದಾಖಲಾಗಿತ್ತು. ಕಳೆದ 10 ದಿನದಲ್ಲಿ ಒಂದು ಸಾವಿರ ರೂ, ಅಂದರೆ 70,700 ಮತ್ತು 71,700ರ ಮಧ್ಯೆ ಏರಿಳಿತವಾಗುತ್ತಿದೆ. ಮಾರ್ಚ್ ತಿಂಗಳಲ್ಲಿ ಗರಿಷ್ಠ 76,700 ರೂ.ವರೆಗೆ ಬೆಳ್ಳಿ ದರ ದಾಖಲಾಗಿದೆ.
ಸ್ವತಃ ಔಟ್ ಘೋಷಿಸಿಕೊಂಡು ಹೊರನಡೆದ ಆರ್. ಅಶ್ವಿನ್: ಐಪಿಎಲ್ನಲ್ಲೊಂದು ಅಚ್ಚರಿಯ ವಿದ್ಯಮಾನ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ