Latest

ಪುರಸಭೆ ಸದಸ್ಯನನ್ನು ಬಂಧಿಸಿದ ಸಿಐಡಿ

ಪ್ರಗತಿವಾಹಿನಿ ಸುದ್ದಿ; ಹಾಸನ: ಪಿಎಸ್ ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಚನ್ನರಾಯಪಟ್ಟಣದ ಪುರಸಭೆ ಹಾಲಿ ಸದಸ್ಯನೋರ್ವರನ್ನು ಸಿಐಡಿ ಬಂಧಿಸಿದೆ.

ಸಿ.ಎನ್.ಶಶಿಧರ್ ಬಂಧಿದ ಪುರಸಭೆ ಸದಸ್ಯ. ವಿಚಾರಣೆಗಾಗಿ 10 ದಿನಗಳ ಕಾಲ ಶಶಿಧರ್ ಅವರನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

ಬೆಕ್ಕ ಗ್ರಾಮದ ವೆಂಕಟೇಶ್ ಅವರಿಗೆ ಕೆಲಸ ಕೊಡಿಸಲು ಡೀಲ್ ಮಾಡಿದ್ದ ಆರೋಪ ಶಶಿಧರ್ ಮೇಲಿದೆ. ಈ ಹಿಂದೆ ಜೆಡಿಎಸ್ ನಲ್ಲಿ ಗುರುತಿಸಿಕೊಂಡಿದ್ದ ಶಶಿಧರ್ ಬಳಿಕ ಪಕ್ಷ ತೊರೆದು ಬಿಜೆಪಿ ನಾಯಕರೊಂದಿಗೆ ಗುರುತಿಸಿಕೊಂಡಿದ್ದರು.
ಚಿನ್ನ-ಬೆಳ್ಳಿ ದರದಲ್ಲಿ ಮಹತ್ವದ ಬದಲಾವಣೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button