ಪ್ರಗತಿವಾಹಿನಿ ಸುದ್ದಿ; ಭೋಪಾಲ್: ಮದುವೆಯ ಮುಹೂರ್ತದ ವೇಳೆ ಕರೆಂಟ್ ಕೈಕೊಟ್ಟ ಪರಿಣಾಮ ಅಕ್ಕನಿಗೆ ನಿಶ್ಚಯವಾಗಿದ್ದ ವರ ತಂಗಿಗೆ, ತಂಗಿಗೆ ನಿಶ್ಚಯವಾಗಿದ್ದ ವರ ಅಕ್ಕನಿಗೆ ತಾಳಿ ಕಟ್ಟಿದ ಘಟನೆ ಮಧ್ಯಪ್ರದೇಶದ ಅಸ್ಲಾನಾ ಗ್ರಾಮದಲ್ಲಿ ನಡೆದಿದೆ.
ರಮೇಶ್ ಭೀವೆರೆ ಎಂಬುವವರ ಪುತ್ರಿಯರಾದ ನಿಕಿತಾ ಹಾಗೂ ಕರೀಷ್ಮಾ ವಿವಾಹ ನಿಶ್ಚಯವಾಗಿತ್ತು. ನಿಕಿತಾ ವಿವಾಹ ದಂಗ್ವಾರ ಭೋಲಾ ಎಂಬ ಯುವಕನ ಜೊತೆ ಹಾಗೂ ಕರಿಷ್ಮಾಳ ಮದುವೆ ಗಣೇಶ್ ಜೊತೆ ಫಿಕ್ಸ್ ಆಗಿತ್ತು.
ರಾತ್ರಿ ಮದುವೆಗೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಇನ್ನೇನು ಮುಹೂರ್ತದ ಸಮಯ ಈ ವೇಳೆ ಕಂಟ್ ಹೋಗಿದೆ. ಮದುಮಗಳಿಬ್ಬರೂ ಒಂದೇ ರೀತಿಯ ಉಡುಗೆ ತೊಟ್ಟಿದ್ದರಿಂದ ಗೊಂದಲದಲ್ಲಿ ವಧು-ವರರು ಅದಲು ಬದಲಾಗಿ ವಿವಾಹವಾಗಿದ್ದಾರೆ.
ವಿವಾಹದ ಬಳಿಕ ಸಪ್ತಪದಿ ತುಳಿಯುವಾಗ ಕಂರೆಂಟ್ ಬಂದಿದ್ದು, ಆಗ ಎಡವಟ್ಟಾಗಿದ್ದು ಅರಿವಿಗೆ ಬಂದಿದೆ. ಬಳಿಕ ಹಿರಿಯರು ಸಮಾಲೋಚನೆ ನಡೆಸಿ, ನಿಶ್ಚಿತವಾಗಿದ್ದ ವಧು-ವರರೊಂದಿಗೆ ಮತ್ತೊಮ್ಮೆ ಮದುವೆ ಮಾಡಿಸಿದ ಪ್ರಸಂಗವೂ ನಡೆದಿದೆ.
ರಾಜನಾಥ್ ಸಿಂಗ್ ಭೇಟಿಯಾದ ಸಿಎಂ ಬೊಮ್ಮಾಯಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ