Kannada NewsLatest

ಮಧುಮೇಹ ಪೀಡಿತ ಮಕ್ಕಳಿಗಾಗಿ ಬೇಸಿಗೆ ಶಿಬಿರ ಉದ್ಘಾಟಿಸಿದ ಸಂಸದೆ ಮಂಗಲಾ ಅಂಗಡಿ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಏನೂ ಅರಿಯದ ಮಗ್ದ ಮಕ್ಕಳನ್ನು ನಿರಾಶೆಗೊಳಿಸದೇ, ಇರುವ ಸೌಲಭ್ಯಗಳನ್ನು ಬಳಸಿಕೊಂಡು ಸವಾಲನ್ನು ಎದುರಿಸುವ ಶಕ್ತಿಯನ್ನು ತಿಳಿಸಿ. ಮಧುಮೇಹದಿಂದ ಬಳಲುತ್ತಿದ್ದರೂ ಕೂಡ ಎಲ್ಲರಂತೆ ನಾವೂ ಕೂಡ ಸಾಧನೆ ಮಾಡಬಹುದೆಂಬ ಆತ್ಮವಿಶ್ವಾಸ ಹಾಗೂ ಸಕಾರಾತ್ಮಕ ಧೋರಣೆಯನ್ನು ಮಕ್ಕಳಲ್ಲಿ ತುಂಬಬೇಕೆಂದು ಸಂಸದರಾದ ಮಂಗಲಾ ಸುರೇಶ ಅಂಗಡಿ ಕರೆ ನೀಡಿದರು.

ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ಮಧುಮೇಹ ಪೀಡಿತ ಮಕ್ಕಳಿಗಾಗಿ ದಿ. 14 ಮೇ 2022 ರಂದು ಏರ್ಪಡಿಸಿದ್ದ 22 ಬೇಸಿಗೆಯ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ ಅವರು, ಮುಗ್ದ ಮಕ್ಕಳ ಆರೋಗ್ಯದ ಕಾಳಜಿ ಕುರಿತು ಪಾಲಕರು ತೀವ್ರತರವಾದ ನಿಗಾವಹಿಸಿ ಕಾಪಾಡಬೇಕು. ಆಹಾರ ಪದ್ದತಿ ಮತ್ತು ಜೀವನ ಶೈಲಿಯಲ್ಲಿ ಪಾಲಕರ ಪಾತ್ರ ಅತ್ಯಂತ ಮಹತ್ವವಾದದ್ದು, ಮಕ್ಕಳೊಂದಿಗೆ ನಲಿದಾಡುತ್ತ, ಜೀವನದ ಕಲೆಯ ಅರಿವು ಮೂಡಿಸಬೇಕು. ಮಧಮೇಹ ಪೀಡಿತ ಮಕ್ಕಳಲ್ಲಿ ತನ್ನತನದ ಗೌರವ, ಆತ್ಮವಿಶ್ವಾಸ ಹಾಗೂ ಸಕಾರಾತ್ಮ ಧೋರಣೆಯನ್ನು ಬೆಳೆಸಬೇಕು ಎಂದ ಅವರು ಆಸ್ಪತ್ರೆಯ ಹಾಗೂ ಈ ಕರ‍್ಯದ ರೂವಾರಿ ಡಾ. ಎಂ. ವಿ. ಜಾಲಿ ಅವರ ಕಾರ‍್ಯವೈಖರಿಯನ್ನು ಶ್ಲಾಘಿಸಿದರು.

ತರುಣ ಭಾರತ ದಿನಪತ್ರಿಕೆಯ ಸ್ಥಾನಿಕ ಸಂಪಾದಕಿ ಮನಿಷಾ ಸುಬೇದಾರ ಅವರು ಮಾತನಾಡಿ, ಮಕ್ಕಳಲ್ಲಿರುವ ನ್ಯೂನ್ಯತೆಯನ್ನು ಪಾಲಕರು ಗುರುತಿಸಿ. ಮಗು ಮಧುಮೇಹದಿಂದ ಬಳಲುತ್ತಿದೆ ಎಂದು ಕಂಡು ಬಂದಾಗ ಕಾಳಜಿವಹಿಸಿ. ಮೆದುಳು ಸರಿಯಾಗಿ ಕಾರ್ಯನಿರ್ವಹಿಸದಿದ್ದರೂ ಕೂಡ ಮಕಳ ಅರೈಕೆ ಮಾಡುವ ಎಷ್ಟೋ ತಾಯಂದಿರು ನಮ್ಮ ಕಣ್ಣಮುಂದೆ ಇದ್ದಾರೆ. ಶಾಲಾ ಮಟ್ಟದಲ್ಲಿ ಅನಾರೋಗ್ಯ ಪೀಡಿತ ಮಕ್ಕಳನ್ನು ಗುರುತಿಸಿ. ನಿರಂತರವಾಗಿ ಚಿಕಿತ್ಸೆ ಪಡೆಯುವ ಮಕ್ಕಳಿಗೆ ಯಾವ ರೀತಿ ಕಾಳಜಿ ಹಾಗೂ ಆರೈಕೆ ಮಾಡಬೇಕೆಂಬುದನ್ನು ಶಿಕ್ಷಕರಿಗೆ ಜಾಗೃತಿ ಮೂಡಿಸಿ. ಶಾಲೆಯಲ್ಲಿ ಒಳ್ಳೆಯ ವಾತಾವರಣ ಇಲ್ಲ. ಬಾಲ್ಯ ವಿವಾಹವನ್ನು ನಿಲ್ಲಿಸಿ. ಏನು ಮಾಡಲು ಬಯಸುತ್ತಾರೆ ಎಂಬುದನ್ನು ಅರಿತು ಅವರಿಗೆ ಪ್ರೋತ್ಸಾಹ ನೀಡಿ. ಯಾವುದೇ ಆರೋಗ್ಯ ತೊಂದರೆ ಎದ್ದರೂ ಕೂಡ ಒಳ್ಳೆಯ ಮನಸ್ಸಿನಿಂದ ಸ್ವೀಕಾರ ಮಾಡಿ. ಇನ್ನೊಬ್ಬರಿಗೆ ಸಹಾಯ ಹಸ್ತ ಚಾಚಿ ಎಂದು ಸಲಹೆ ನೀಡಿದರು.

ಚಿಕ್ಕ ಮಕ್ಕಳ ಮಧುಮೇಹ ತಜ್ಞವೈದ್ಯೆ ಡಾ. ಸುಜಾತಾ ಜಾಲಿ ಅವರು ಮಾತನಾಡಿ, ಹೊಸದಾಗಿ ಪ್ರತಿ ವರ್ಷ ಸುಮಾರು 40 ಸಾವಿರ ಮಕ್ಕಳು ಮಧುಮೇಹ (ಟೈಪ್ 1) ದಿಂದ ಬಳಲುತ್ತಿದ್ದಾರೆ. ಸದ್ಯಕ್ಕೆ 66 ಮಿಲಿಯನ್ ಮಧುಮೇಹ ಪೀಡಿತರಿದ್ದಾರೆ. ಈ ಕೇಂದ್ರದಲ್ಲಿ 260 ಮಕ್ಕಳು ದಾಖಲಾಗಿದ್ದು, ಉಚಿತ ಚಿಕಿತ್ಸೆ ಹಾಗೂ ಇನ್ಸುಲಿನ್ ನೀಡಲಾಗುತ್ತಿದೆ. ಭಾರತದಲ್ಲಿಯೇ ಅತ್ಯಧಿಕ ಮಧುಮೇಹ ಪೀಡಿತ ಮಕ್ಕಳಿಗೆ ಚಿಕಿತ್ಸೆ ನೀಡುತ್ತಿರುವ ಕೇಂದ್ರ ಇದೊಂದೆ. ಶೇ. 72ರಷ್ಟು ರೋಗಿಗಳು ಗ್ರಾಮೀಣ ಪ್ರದೇಶದಿಂದ ಬರುತ್ತಾರೆ. ಅದರಲ್ಲಿ ಶೇ. 60ರಷ್ಟು ಮಕ್ಕಳು ಆರ್ಥಿಕವಗಿ ಹಿಂದುಳಿದವರಾಗಿದ್ದಾರೆ. ಪ್ರತಿ ತಿಂಗಳು ಮಧುಮೇಹದಿಂದ ಬಳಲುತ್ತಿರುವ 5 ಮಕ್ಕಳು ಕಂಡು ಬರುತ್ತಾರೆ. ಮಧುಮೇಹ ಪೀಡಿತ ಮಕ್ಕಳ ವೈದ್ಯಕೀಯ ವೆಚ್ಚ ಪ್ರತಿ ವರ್ಷ ಸಾವಿರಾರು ರೂ.ಇನ್ಸುಲಿನ್‌ಗೆ ಹಾಗೂ ಇನ್ನಿತರ ವೈದ್ಯಕೀಯ ವೆಚ್ಚಗಳಿಗಾಗಿ ಸಾಕಷ್ಟು ಹಣ ಖರ್ಚಾಗುತ್ತದೆ. ಇದನ್ನರಿತ ಮಧುಮೇಹ ಕೇಂದ್ರವು ಅನೇಕ ಸಂಸ್ಥೆಗಳ ಸಹಯೋಗದಲ್ಲಿ ಚಿಕಿತ್ಸಾ ವೆಚ್ಚವನ್ನು ನೋಡಿಕೊಳ್ಳುತ್ತಿದೆ ಎಂದು ತಿಳಿಸಿದರು.

ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಎಂ ವಿ ಜಾಲಿ, ಕೆಎಲ್‌ಇ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ವಿವೇಕ ಸಾವೋಜಿ ಅವರು ಮಾತನಾಡಿದರು. ಕುಲಸಚಿವ ಡಾ. ವಿ ಎ ಕೋಠಿವಾಲೆ, ಜೆ ಎನ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚರ‍್ಯರಾದ ಡಾ. ಎನ್. ಎಸ್. ಮಹಾಂತಶೆಟ್ಟಿ, ಡಾ ಸಂಜಯ ಕಂಬಾರ, ಡಾ. ಹೆಚ್ ಬಿ ರಾಜಶೇಖರ, ಡಾ. ತನ್ಮಯಾ ಮೆಟಗುಡ್, ಡಾ. ದೀಪಶ್ರೀ ಡಾ. ಜ್ಯೋತಿ ನಿರ್ವಾಣಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ನಿಯಮಿತವಾಗಿ ಚಿಕಿತ್ಸೆ ಪಡೆಯುತ್ತ ಮಧುಮೇಹವನ್ನು ನಿಂತ್ರಣದಲ್ಲಿಟ್ಟುಕೊAಡಿರುವ ಕೃಷ್ಣಾ ಯಡೂರೆ, ಪವಿತ್ರಾ ಕಾರಗಿ ಹಾಗೂ ಬೆಸ್ಟ ಮದರ ಯಮುನಾ ಕೋರಿಗಿರಿ ಅವರಿಗೆ ಸ್ವರ್ಣ ಪದಕ ನೀಡಿ ಗೌರವಿಸಲಾಯಿತು. ಶಿಬಿರದಲ್ಲಿ ಚಿತ್ರಕಲೆ, ಸಂಗೀತ, ನೃತ್ಯ, ರಸಪ್ರಶ್ನೆ, ಯೋಗ ಮತ್ತು ಧ್ಯಾನ, ಮಧುಮೇಹ ಅಡುಗೆ ತಯಾರಿಕೆ, ಆಹಾರ ಸೇವನೆಯ ಪದ್ದತಿ, ಮಧುಮೇಹ ಶಿಕ್ಷಣ ಸೇರಿದಂತೆ ವಿವಿಧ ಕರ‍್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಶಿಬಿರದಲ್ಲಿ ಸುಮಾರು 160 ಕ್ಕೂ ಅಧಿಕ ಮಕ್ಕಳು ಪಾಲ್ಗೊಂಡಿದ್ದರು.

ರಾಜ್ಯಸಭೆ ಚುನಾವಣೆ; ನಿರ್ಮಲಾ ಸೀತಾರಾಮನ್ ಸೇರಿ ಐವರ ಹೆಸರು ಶಿಫಾರಸು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button