https://www.facebook.com/mahadev.dharennavar.7/videos/1137873313083046/?t=42
https://www.facebook.com/mahadev.dharennavar.7/videos/pcb.1137874073082970/1137873579749686/?type=3&__tn__=HH-R&eid=ARB8Q9XzKIxpNqaF_P3dpBJja6IRfzeGeuusUOeXJiRpnq_zlYzixh-V951kXVfrw2eE9FA6HQ3tMjU2
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಕಳೆದ ಲೋಕಸಭಾ ಚುನಾವಣೆಯಲ್ಲಿ ಬಳಸಿದ್ದ ಬೆಳಗಾವಿ ನಗರದ ಅನಗೋಳ ಭಾಗದ ಸಾಮರ್ಥ್ಯ ಸೌಧದಲ್ಲಿ ಅಂದಿನಿಂದ ಇಂದಿನವರೆಗೂ ವಿದ್ಯುತ್ ದೀಪಗಳು, ಫ್ಯಾನ್ ನಿರಂತರವಾಗಿ ಉರಿಯುತ್ತಲೇ ಇವೆ.
ಚುನಾವಣೆಗೆ ಬಳಸಿಕೊಂಡ ಅಧಿಕಾರಿಗಳು ಲೈಟ್ ಮತ್ತು ಫ್ಯಾನ್ ಆಫ್ ಮಾಡುವ ಗೋಜಿಗೆ ಹೋಗಲೇ ಇಲ್ಲ. ಏಪ್ರಿಲ್ 23ರಿಂದಲೂ, ಅಂದರೆ ಕಳೆದ 12 ದಿನಗಳಿಂದಲೂ ವಿದ್ಯುತ್ ಅಪವ್ಯಯವಾಗುತ್ತಲೇ ಇದೆ.
ಪ್ಯಾನ್, ಹೊರಾಂಗಣ ವಿದ್ಯುತ್ ದೀಪ, ಹಾಲ್ ದೀಪಗಳು ಹಾಗೂ ಕಟ್ಟಡದ ಹಿಂಬದಿಯಲ್ಲಿ ದೀಪಗಳು ನಿರಂತರವಾಗಿ ಉರಿಯುತ್ತಿರುವುದನ್ನು ಗಮನಿಸಿದ ವಡಗಾವಿ “ಮಿಷನ್ ಕ್ರಾಂತಿ ಸೇವಾ ಸಮಿತಿಯ ಯುವಕ ಮಹಾದೇವ ಧರೆಣ್ಣವರ್ ಇಂದು ಮೇನ್ ಸ್ವಿಚ್ ಆಫ್ ಮಾಡಿದ್ದಾರೆ.
ಈ ಕಟ್ಟಡ ಯಾವುದಕ್ಕೂ ಬಳಕೆಯಿಲ್ಲದೆ ಭೂತ ಬಂಗಲೆಯಂತಾಗಿರುವುದನ್ನು ವಿರೋಧಿಸಿ ಮಹಾದೇವ ಕಳೆದ 4 ವರ್ಷಗಳಿಂದಲೂ ಪ್ರಗತಿಭಟನೆ ನಡೆಸುತ್ತಲೇ ಇದ್ದಾರೆ. ಬಡವರ ಕಲ್ಯಾಣ ಕಾರ್ಯಕ್ರಮಗಳನ್ನು ನಡೆಸಲಾದರೂ ಕೊಡಿ, ಹಿರಿಯ ನಾಗರಿಕರ ಸೇವಾ ಕೇಂದ್ರವನ್ನಾದರೂ ಮಾಡಿ,ಇಲ್ಲವಾದರೆ ಬಾಡಿಗೆ ಕಟ್ಟಡಗಳಲ್ಲಿರುವ ಸರಕಾರಿ ಕಛೇರಿಗಳನ್ನು ಇಲ್ಲಿಗೆ ಸ್ಥಳಾಂತರಿಸಿ ಎಂದುಅವರು ಆಗ್ರಹಿಸುತ್ತಿದ್ದಾರೆ.
ಈಗ ಕಟ್ಟಡ ವ್ಯರ್ಥವಾಗಿದ್ದು ಸಾಕಾಗದೆನ್ನುವಂತೆ ವಿದ್ಯುತ್ ನ್ನೂ ವ್ಯರ್ಥ ಮಾಡಲಾಗುತ್ತಿದೆ!
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ