ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಧನಸಹಾಯ ಬಿಡುಗಡೆ ಮಾಡಿಸಿದ ಲಕ್ಷ್ಮೀ ಹೆಬ್ಬಾಳಕರ್
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರು ಬೆಳಗಾವಿ ಗ್ರಾಮೀಣ ಕ್ಷೇತ್ರದ 7 ಜನರಿಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಯ ಚಿಕಿತ್ಸಾ ವೆಚ್ಚವಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 4 ಲಕ್ಷ ರೂ. ಗಳನ್ನು ಬಿಡುಗಡೆ ಮಾಡಿಸಿದ್ದಾರೆ.
ಹೊನಗಾದ ಗಜಾನನ ಬಾವುಕಣ್ಣಾ ಹುಂದ್ರೆ, ಸಂತಿಬಸ್ತವಾಡದ ಕಲಿಮುಲ್ಲಾ ಖಾನ್ ಮಣಿಯಾರ್, ಕುದ್ರೆಮನೆಯ ಅನಿತಾ ಶಂಕರ ಪಾವುಸ್ಕರ್, ಕುದ್ರೆಮನೆಯ ರಘುನಾಥ ಬುಜಂಗ್, ಹಿರೇಬಾಗೇವಾಡಿಯ ಶಂಕರಗೌಡ ಪಾಟೀಲ, ತುಮ್ಮರಗುದ್ದಿಯ ಕಲ್ಮೇಶ ಹೊಸೂರಿ, ಅಂಬೆವಾಡಿಯ ಬೊಮ್ಮಣ್ಣ ಬಾತಖಾಂಡೆ ಧನ ಸಹಾಯ ಪಡೆದವರು.
ಗುರುವಾರ ಈ ಕುರಿತು ಸಂಬಂಧಿಸಿದವರಿಗೆ ಮಾಹಿತಿ ಪತ್ರ ನೀಡಿದ ಲಕ್ಷ್ಮೀ ಹೆಬ್ಬಾಳಕರ್, ಆರೋಗ್ಯ ಎಲ್ಲಕ್ಕಿಂತ ಮುಖ್ಯ. ಆರೋಗ್ಯ ಕಾಪಾಡಿಕೊಳ್ಳಲು ಆದ್ಯತೆ ನೀಡಬೇಕು. ಹಾಗಂತ ಆರೋಗ್ಯ ಕೈಕೊಟ್ಟಾಗ ಧೃತಿಗೆಡಬೇಕಾಗಿಲ್ಲ. ನಿಮ್ಮ ಜೊತೆಗೆ ನಾನಿದ್ದೇನೆ ಎಂದು ಭರವಸೆ ನೀಡಿದರು.
ಈವರೆಗೂ ಕ್ಷೇತ್ರದ ಸಾವಿರಾರು ಜನರಿಗೆ ವಿವಿಧ ರೀತಿಯ ಚಿಕಿತ್ಸೆಗಾಗಿ ಕೊಟ್ಯಂತರ ರೂ.ಗಳ ನೆರವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ, ವಯಕ್ತಿಕವಾಗಿ ಮತ್ತು ಲಕ್ಷ್ಮೀ ತಾಯಿ ಫೌಂಡೇಶನ್ ನಿಂದ ಒದಗಿಸಲಾಗಿದೆ ಎಂದು ಅವರು ತಿಳಿಸಿದರು.
ಪುರಾಣ ಪ್ರವಚನಗಳು ನಮ್ಮನ್ನು ಮಾನಸಿಕವಾಗಿ ಗಟ್ಟಿಗೊಳಿಸುತ್ತವೆ – ಲಕ್ಷ್ಮೀ ಹೆಬ್ಬಾಳಕರ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ