Latest

ಸರ್ಕಾರಿ ಕಚೇರಿ ಕುರ್ಚಿಯಲ್ಲೇ ಕುಳಿತು ಮದ್ಯ ಸೇವನೆ; ಅಧಿಕಾರಿ ಅಮಾನತು

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಸರ್ಕಾರಿ ಕಚೇರಿಯಲ್ಲಿಯೇ ಕುಳಿತು ಮದ್ಯಪಾನ ಮಾಡಿದ ಎಂಜಿನಿಯರ್ ಓರ್ವರನ್ನು ಇದೀಗ ಸರ್ಕಾರ ಅಮಾನತು ಮಾಡಿ ಆದೇಶ ಹೊರಡಿಸಿದೆ.

ಕಾನ್ಪುರ ವಿದ್ಯುತ್ ಸರಬರಾಜು ಕಂಪನಿ (ಕೆಸ್ಕೋ) ವಿದ್ಯುತ್ ಕಚೇರಿಯಲ್ಲಿ ಸಹಾಯಕ ಇಂಜಿನಿಯರ್ ಕುರ್ಚಿ ಮೇಲೆ ಕುಳಿತು ಆರಾಮವಾಗಿ ಮದ್ಯ ಸೇವನೆ ಮಾಡುತ್ತಿದ್ದ ಎಂಜಿನಿಯರ್ ತುಷಾರ್ ಕಾಂತ್ ವಿಡಿಯೋ ವೈರಲ್ ಆಗಿತ್ತು.

ಈ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಕೆಸ್ಕೋ ವ್ಯವಸ್ಥಾಪಕ ನಿರ್ದೇಶಕ ಅನಿಲ್ ಧಿಂಗ್ರಾ, ಸಹಾಯಕ ಎಂಜಿನಿಯರ್ ನನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
BJP ಅಭ್ಯರ್ಥಿಯಾಗಿ ಅರುಣ ಶಹಾಪುರ ನಾಮಪತ್ರ ಸಲ್ಲಿಕೆ

Home add -Advt

Related Articles

Back to top button