ಡಾ. ಪ್ರಭಾಕರ ಕೋರೆಗೆ ನ್ಯೂಯಾರ್ಕ್‌ನ ಪ್ರತಿಷ್ಠಿತ ಇಂಡೋ ಅಮೇರಿಕನ್ ಪ್ರೆಸ್ ಕ್ಲಬ್‌ನಿಂದ ಜೀವಮಾನ ಸಾಧನೆ ಪ್ರಶಸ್ತಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ ಪ್ರಭಾಕರ ಕೋರೆ ಅವರಿಗೆ ಅಮೇರಿಕಾದ ಪ್ರತಿಷ್ಠಿತ ಇಂಡೋ ಅಮೇರಿಕನ್ ಪ್ರೆಸ್ ಕ್ಲಬ್‌ನಿಂದ ೨೧ ಮೇ, ೨೦೨೨ ರಂದು ನ್ಯೂಯಾರ್ಕ್‌ನಲ್ಲಿ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಉತ್ತರ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ವಿಶೇ?ವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಜನಸಾಮಾನ್ಯರಿಗೆ ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ ಸೇವೆಗಳನ್ನು ಒದಗಿಸುವ ಮೂಲಕ ಸಮಾಜ ಮತ್ತು ರಾಷ್ಟ್ರ ನಿರ್ಮಾಣ ಕಾರ್ಯಚಟುವಟಿಕೆಗಳಿಗೆ ಡಾ.ಕೋರೆ ಅವರ ಕೊಡುಗೆಗಳನ್ನು ಗುರುತಿಸಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ.
ನ್ಯೂಯಾರ್ಕ್‌ನಲ್ಲಿರುವ ಭಾರತೀಯ ರಾಯಭಾರಿಯ ಕಚೇರಿಯಲ್ಲಿ ಪ್ರೆಸ್ ಕ್ಲಬ್ ಆಫ್ ಯುಎಸ್‌ಎ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. ನ್ಯೂಯಾರ್ಕ್‌ನ ಭಾರತೀಯ ರಾಯಭಾರಿ ಕಚೇರಿಯ ಕನ್ಸೂಲ್ ಜನರಲ್‌ರಾದ  ರಣಧೀರ ಜೈಸ್ವಾಲ್ ಅವರು ಪ್ರಶಸ್ತಿಯನ್ನು ಪ್ರದಾನ ಮಾಡಿದರು. ನ್ಯೂಯಾರ್ಕ್‌ನ ಮಾಜಿ ಮೇಯರ್ ಬಿಲ್ ಡೆ ಬ್ಲಾಸಿಯೊ ಮತ್ತು ಭಾರತೀಯ ಉದ್ಯಮಿ ಮತ್ತು ನ್ಯೂಯಾರ್ಕ್ ನಗರದ ಆರ್ಥಿಕ ಅಭಿವೃದ್ಧಿ ಮಂಡಳಿಯ ಸದಸ್ಯರಾದ ಪ್ಯಾಮ್ ಕ್ವಾತ್ರಾ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು.
ಜೇವಿಯರ್ ವಿಶ್ವವಿದ್ಯಾಲಯದ ಅಧ್ಯಕ್ಷ  ರವಿಶಂಕರ ಭೂಪ್ಲಾಪುರ, ಖ್ಯಾತ ಕ್ಯಾನ್ಸರ್ ತಜ್ಞವೈದ್ಯರಾದ ಪದ್ಮಶ್ರೀ ಡಾ ದತ್ತಾತ್ರೇಯುಡು ನೋರಿ ಮತ್ತು ಇಂಡೋ ಅಮೇರಿಕನ್ ಪ್ರೆಸ್ ಕ್ಲಬ್‌ನ ಕಾರ್ಯಾಧ್ಯಕ್ಷರಾದ ಕಮಲೇಶ್ ಮೆಹ್ತಾ ಅವರು ಉಪಸ್ಥಿತರಿದ್ದರು.

ಡಾ.ಪ್ರಭಾಕರ ಕೋರೆಗೆ ಅಮೆರಿಕೆಯ ಪ್ರತಿಷ್ಠಿತ ಥಾಮಸ್ ಜೆಫರಸನ್ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button