ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರು ಸಮವಾರ ಉಚಗಾವಿಯಲ್ಲಿ ಶ್ರೀ ಜ್ಞಾನೇಶ್ವರ ವಾರ್ಕರಿ ಸಂಪ್ರದಾಯ ಪಾರಾಯಣ ಮಂಡಳದ ಕಟ್ಟಡ ನಿರ್ಮಾಣದ ಕಾಮಗಾರಿಗೆ ಭೂಮಿ ಪೂಜೆಯನ್ನು ನೆರವೇರಿಸಿ, ನಾಮಫಲಕವನ್ನು ಅನಾವರಣಗೊಳಿಸಿದರು.
ಈ ಸಂದರ್ಭದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಮಾತನಾಡಿ, ಬೆಳಗಾವಿ ಗ್ರಾಮೀಣ ಕ್ಷೇತ್ರದ ಎಲ್ಲ ಸಮಾಜ, ಎಲ್ಲ ಭಾಷೆ ಹಾಗೂ ಎಲ್ಲ ಪ್ರದೇಶಗಳ ಅಭಿವೃದ್ಧಿಗೆ ಸಮಾನ ಆದ್ಯತೆ ನೀಡುತ್ತಿದ್ದು, ಇಡೀ ಕ್ಷೇತ್ರದ ಜನರು ನಮ್ಮೊಂದಿಗೆ ಸಹಕಾರ ನೀಡುತ್ತಿದ್ದಾರೆ. ಇದೇ ಸಹಕಾರದಿಂದ ಮುಂದಿನ ದಿನಗಳಲ್ಲಿ ಕ್ಷೇತ್ರ ರಾಜ್ಯದಲ್ಲೇ ಮಾದರಿಯಾಗುವ ವಿಶ್ವಾಸವಿದೆ. ಮುಂದಿನ ದಿನಗಳಲ್ಲಿ ಅನೇಕ ದೊಡ್ಡ ಯೋಜನೆಗಳನ್ನು ಕ್ಷೇತ್ರಕ್ಕೆ ತರುವ ಕುರಿತು ಪ್ರಯತ್ನ ನಡೆದಿದೆ. ಅವುಗಳು ಆದಷ್ಟು ಶೀಘ್ರ ಕಾರ್ಯರೂಪಕ್ಕೆ ಬರುವ ವಿಶ್ವಾಸವಿದೆ. ಇದರಿಂದಾಗಿ ಇಲ್ಲಿನ ಯುವಕರಿಗೆ ಉದ್ಯೋಗ ಸಿಗಲಿದೆ ಹಾಗೂ ಕ್ಷೇತ್ರದ ಆರ್ಥಿಕಮಟ್ಟ ಸುಧಾರಿಸಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಯುವರಾಜ ಕದಂ, ರವಳು ಕಣಬರ್ಕರ್, ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್, ರಾಜು ಬಾಂಡ್ಗೆ, ದೋನಕರಿ, ಬಾಳು ಗಡ್ಕರಿ, ಜ್ಯೋತಿಭಾ , ವೈಜು ಗೋಜ್ಗೆಕರ್, ಉಮಾಜಿ ಸಾವಂತ, ಯಲ್ಲಪ್ಪ ಬಾಮನೆ, ಕೃಷ್ಣ ಪಾಟೀಲ, ಲಕ್ಷ್ಮಣ ಚೌಗುಲೆ, ಶಿವಾಜಿ, ದೋನಕರಿ, ಶ್ರೀರಾಮ್ ಮೋರೆ, ಲಕ್ಷ್ಮಣ ಚಂದಗಡ್ಕರ್, ಯಲ್ಲಪ್ಪ ಜಗ್ರೂಚೆ, ಮಾರುತಿ ಕಾಂಡೆಕರ್, ಉಮೇಶ ಪಾವಸೆ, ಜಾವೀದ್ ಜಮಾದಾರ್, ಜ್ಞಾನೇಶ್ವರ ಟ್ರಸ್ಟ್ ಕಮೀಟಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ