Kannada NewsLatest

ನೀನು ಬದುಕು ಇನ್ನೊಬ್ಬರನ್ನು ಬದುಕಲು ಬಿಡು; ಜೈನ ಧರ್ಮದ ತತ್ವ ಎಲ್ಲರಿಗೂ ಅನ್ವಯ; ಶಾಸಕ ಶ್ರೀಮಂತ ಪಾಟೀಲ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಉಗಾರ ಖುರ್ದ್ ದಲ್ಲಿ ಸಮಸ್ತ ಜೈನ ಸಮಾಜದ ಬಾಂಧವರು ಆಯೋಜಿಸಿದ ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವ ಕಾರ್ಯಕ್ರಮದಲ್ಲಿ ನಾಂದನಿ ಮಠದ ಪರಮಪೂಜ್ಯ ಸ್ವಸ್ತಿಶ್ರೀ ಜೀನಸೇನ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿಜಿ, ಆಚಾರ್ಯ 108 ಜ್ಞಾನೇಶ್ವರ ಮುನಿ ಮಹಾರಾಜರು ಹಾಗೂ ಪರಮಪೂಜ್ಯ ಶ್ರೀ 108 ವಿಮಲೇಶ್ವರ ಮುನಿಮಹಾರಾಜರ ದಿವ್ಯ ಸಾನಿಧ್ಯದಲ್ಲಿ ಕಾಗವಾಡ ಮತಕ್ಷೇತ್ರದ ಶಾಸಕ ಶ್ರೀಮಂತ (ತಾತ್ಯಾ) ಪಾಟೀಲ ಭಾಗವಹಿಸಿದ್ದರು.

ಜೈನ ಸಮಾಜದ ಮುನಿ ಮಹಾರಾಜರ ಆಶೀರ್ವಾದವನ್ನು ಪಡೆದು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಉಗಾರ ಖುರ್ದ್ ದಲ್ಲಿ ಜೈನ ಸಮಾಜದ ಎಲ್ಲ ಭಾಂಧವರು ಒಂದಾಗಿ ಪಂಚಕಲ್ಯಾಣ ಮಹೋತ್ಸವ ಕಾರ್ಯಕ್ರಮವನ್ನು ಆಯೋಜಿಸಿದ್ದು ಸಂತೋಷದ ವಿಷಯ. ಜೈನ ಧರ್ಮದ ಶ್ರೀ ಭಗವಾನ್ ಮಹಾವೀರರು ಇಡೀ ವಿಶ್ವಕ್ಕೆ ಅಹಿಂಸಾ ಪರಮೋ ಧರ್ಮದ ತತ್ವವನ್ನು ಸಾರಿ ಹೇಳಿದ್ದಾರೆ. “ನೀನು ಬದುಕು ಇನ್ನೊಬ್ಬರನ್ನು ಬದುಕಲು ಬಿಡು” ಅವರ ಉಪದೇಶ ಎಲ್ಲರಿಗೂ ಅನ್ವಯವಾಗುತ್ತದೆ.

ಶ್ರೀ ಭಗವಾನ್ ಮಹಾವೀರರು ಹೇಳಿರುವ ತತ್ವ ಹಾಗೂ ಸಿದ್ಧಾಂತಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಂಡು ಅವರ ಹಾದಿಯಲ್ಲಿ ನಾವೆಲ್ಲರೂ ಮುಂದೆ ಸಾಗೋಣ ಎಂದರು.

ಈ ಪಂಚಕಲ್ಯಾಣ ಮಹೋತ್ಸವ ಕಾರ್ಯಕ್ರಮವು ಯಶಸ್ವಿ ಪದದಲ್ಲಿ ಸಾಗಲಿ ಈ ಕಾರ್ಯಕ್ರಮದಿಂದ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಶುಭ ಕೋರಿದರು.

ಈ ಸಮಾರಂಭದಲ್ಲಿ ಚಿಕ್ಕೋಡಿ ಲೋಕಸಭಾ ಸಂಸದರಾದ ಶ್ರೀ ಅಣ್ಣಾಸಾಹೇಬ ಜೊಲ್ಲೆ, ಅಥಣಿ ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷರಾದ ಶ್ರೀ ಶೀತಲಗೌಡ ಪಾಟೀಲ ಹಾಗೂ ಸ್ಥಳೀಯ ಮುಖಂಡರು, ಉಗಾರ ಖುರ್ದ ಪುರಸಭೆಯ ಎಲ್ಲ ಸದಸ್ಯರು, ಈ ಪಂಚಕಲ್ಯಾಣ ಮಹೋತ್ಸವ ಕಾರ್ಯಕ್ರಮದ ಅಧ್ಯಕ್ಷರು,ಉಪಾಧ್ಯಕ್ಷರು, ಸದಸ್ಯರು ಹಾಗೂ ಜೈನ ಸಮಾಜದ ಶ್ರಾವಕ – ಶ್ರಾವಕಿಯರು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

ರೆನ್ಯೂ ಪವರ್ ನಿಂದ 50 ಸಾವಿರ ಕೋಟಿ ರೂ. ಹೂಡಿಕೆ ಒಪ್ಪಂದ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button