Kannada NewsKarnataka NewsLatest

ಕೃಷಿಕರ ಕಂಕಣ ಭಾಗ್ಯ ಯೋಜನೆ ಜಾರಿಗೆ ನಿಡಸೋಸಿ ಶ್ರೀಗಳ ಆಗ್ರಹ

 

ಜನಪ್ರತಿನಿಧಿಗಳ ಹಾಗೂ ಸ್ವಾಮೀಜಿ ನೇತೃತ್ವದ ನಿಯೋಗದ ಮೂಲಕ ಸರಕಾರದ ಮೇಲೆ ಒತ್ತಡ

ಪ್ರಗತಿವಾಹಿನಿ ಸುದ್ದಿ, ಸಂಕೇಶ್ವರ : ಇತರ ಜಾತಿಗಳ ವಿವಾಹಕ್ಕೆ ನೀಡುವ ಪ್ರೋತ್ಸಾಹ ಧನದಂತೆ ಯುವ ರೈತರನ್ನು ಕೈ ಹಿಡಿಯುವ ಯುವತಿಯರಿಗೆ ಕನಿಷ್ಟ ೫ ಲಕ್ಷ ರೂ ಪ್ರೋತ್ಸಾಹಧನ ನೀಡುವ ಕೃಷಿಕರ ಕಂಕಣ ಭಾಗ್ಯ ಯೋಜನೆಯನ್ನು ಜಾತ್ಯಾತೀತವಾಗಿ ಆರಂಭಿಸಬೇಕೆಂದು ನಿಡಸೋಸಿಯ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಸರಕಾರವನ್ನು ಒತ್ತಾಯಿಸಿದ್ದಾರೆ.

ಸಮೀಪದ ಹರಗಾಪೂರಗಢದ ಕುರಣಿ ತೋಟದಲ್ಲಿ ಮುಂಗಾರು ಚಟುವಟಿಕೆ ಹಾಗೂ ಕೃಷಿಕರ ಸಮಸ್ಯೆ ಆಲಿಸಿದ ಅವರು, ಇಂದಿನ ದಿನಮಾನಗಳಲ್ಲಿ ಕೃಷಿ ಕ್ಷೇತ್ರವನ್ನು ಬಲಪಡಿಸಲು ಸರಕಾರ ಸಾಕಷ್ಟು ಯೋಜನೆ ಜಾರಿಗೆ ತಂದಿದೆ. ಆದರೂ ಕೃಷಿಕ ಯುವಕರನ್ನು ಯುವತಿಯರು ಮದುವೆ ಮಾಡಿಕೊಳ್ಳಲು ಹಿಂದೇಟು ಹಾಕುತ್ತಿದ್ದು, ಈ ಕುರಿತು ರೈತ ಮುಖಂಡರ ನೇತೃತ್ವದಲ್ಲಿ ಜನಪ್ರತಿನಿಧಿಗಳ ಹಾಗೂ ಸ್ವಾಮೀಜಿ ನೇತೃತ್ವದ ನಿಯೋಗದ ಮೂಲಕ ಸರಕಾರದ ಮೇಲೆ ಒತ್ತಡ ಹೇರಲಾಗುವುದು ಎಂದರು.

ಮದುವೆ ಸಲುವಾಗಿ ಹೆಚ್ಚಿನ ಯುವ ರೈತರು ಗ್ರಾಮೀಣ ಪ್ರದೇಶ ಬಿಟ್ಟು ನಗರಗಳಲ್ಲಿ ನೌಕರಿ ಹಿಡಿಯುತ್ತಿದ್ದಾರೆ. ಯುವತಿಯ ಪೋಷಕರು ಸಹ ಕೃಷಿಕ ಯುವಕರಿಗೆ ಮಗಳನ್ನು ಕೊಡುತ್ತಿಲ್ಲ. ಇಂತಹ ವ್ಯವಸ್ಥೆಗಳ ಬಗೆಗೆ ಸಾಕಷ್ಟು ಜಾಗೃತಿ ಅವಶ್ಯವಾಗಿದೆ ಎಂದರು.

ರೈತ ಸಂತತಿ ಉಳಿದರೆ ಮಾತ್ರ ಭವಿ?ದ ಬೆಳವಣಿಗೆ ಸಾಧ್ಯ ಹೀಗಾಗಿ ವಿದ್ಯಾವಂತ ಯುವಕರು ಆಧುನಿಕ ಕೃಷಿಯಲ್ಲಿ ತೊಡಗಿಕೊಂಡು ಅನ್ನ ನೀಡುವ ಅನ್ನದಾತನ ಸಂಕುಲಕ್ಕೆ ಬೆಳಕು ಚೆಲ್ಲಬೇಕಾಗಿದೆ.
ವೈಜ್ಞಾನಿಕ ಕೃಷಿಯಿಂದ ರೈತ ಸಮುದಾಯ ದೂರ ಉಳಿಯುತ್ತಿರುವದರಿಂದ ಬೆಳೆ ಬೆಳೆದ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಆಧುನಿಕ ಕೃಷಿಯಿಂದ ರೈತರು ಆರ್ಥಿಕ ಸದೃಢತೆ ಪಡೆಯಬಹುದಾಗಿದ್ದು, ಯುವಕರು ಕೃಷಿಗೆ ಕೈ ಜೋಡಿಸಿದರೆ ಕೃಷಿ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ಸಾಧ್ಯವಿದೆ ಎಂದರು.

ಸರಕಾರ ಕೃಷಿ ಉತ್ತೇಜಿಸುವ ನಿಟ್ಟಿನಲ್ಲಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಆದರೂ ಸಹ ರೈತರ ಆತ್ಮಹತ್ಯೆ ಪ್ರಕರಣಗಳು ಇಂದಿನ ಯುವ ಸಮುದಾಯವನ್ನು ಕೃಷಿಯಿಂದ ದೂರ ಉಳಿಯುವಂತೆ ಮಾಡಿದ್ದು, ಇಂದಿನ ಯಾವ ರೈತನು ಸಹ ಕೃಷಿಯಿಂದ ನಷ್ಟ ಹೊಂದಲು ಸಾಧ್ಯವಿಲ್ಲ ಎಂದರು.

ಸಿರಿಧಾನ್ಯ ಬೆಳೆಗಳಿಗೆ ಒತ್ತು ನೀಡಿ:

ಇಂದಿನ ಆಹಾರ ಪದ್ಧತಿಯಲ್ಲಿ ಸಿರಿಧಾನ್ಯಗಳ ಬಳಕೆಯಿಂದ ಆರೋಗ್ಯ ಸದೃಢವಾಗಿಸಿಕೊಳ್ಳಬಹುದಾಗಿದ್ದು, ರೈತರು ತಮ್ಮ ಮನೆ ಉಪಯೋಗಕ್ಕೆ ಬಳಕೆ ಮಾಡುವಷ್ಟು ಸಿರಿಧಾನ್ಯ ಬೆಳೆದುಕೊಳ್ಳಬೇಕು. ಶ್ರೀಮಠದಿಂದ ಸಿರಿಧಾನ್ಯ ಪ್ರೋತ್ಸಾಹಿಸಲು ಬೀಜ ವಿತರಣೆ ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಹರಗಾಪೂರ, ಅಂಕಲೆ, ನಿಡಸೋಸಿ, ನಿಡಸೋಸಿವಾಡಿ ಸೇರಿದಂತೆ ವಿವಿಧ ಗ್ರಾಮಗಳ ರೈತರು ಪಾಲ್ಗೊಂಡಿದ್ದರು.

 

ಬಿಎಸ್ ವೈ ಇಲ್ಲದೇ ಬಿಜೆಪಿ ಇಲ್ಲ; ಬಿಜೆಪಿ ಇಲ್ಲದೇ ಬಿಎಸ್ ವೈ ಇಲ್ಲ; ವಿಜಯೇಂದ್ರ ಹೀಗೆ ಹೇಳಿದ್ದೇಕೆ?

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button