ಪ್ರಗತಿವಾಹಿನಿ ಸುದ್ದಿ; ಬೆಳಗಾವಿ; ಮಂದಿರ-ಮಸೀದು ವಿವಾದ ಇದೀಗ ಕುಂದಾನಗರಿ ಬೆಲಗಾವಿಗೂ ಬಂದು ತಲುಪಿದೆ. ಬೆಳಗಾವಿಯಲ್ಲಿಯೂ ಕೆಲ ಮಂದಿರಗಳಿರುವ ಕಡೆಗಳಲ್ಲಿ ಮಸೀದಿ ನಿರ್ಮಾಣವಾಗಿದೆ ಎಂದು ಶಾಸಕ ಅಭಯ್ ಪಾಟೀಲ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅಭಯ್ ಪಾಟೀಲ್,ಬೆಳಗಾವಿಯಲ್ಲಿ ನೂರಾರು ವರ್ಷಗಳ ಹಿಂದೆ ಇಂತಹ ಪ್ರಕರಣ ನಡೆದಿದೆ. ನಗರದ ರಾಮದೇವ ಗಲ್ಲಿಯ ಪಕ್ಕದಲ್ಲೇ ಹನುಮಂತ ದೇವರ ಮಂದಿರದ ಬಳಿ ಮಸೀದಿ ನಿರ್ಮಿಸಲಾಗಿದೆ. ಆ ಮಸೀದಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಅದು ಮಸೀದಿಯೋ ಅಥವಾ ದೇವಾಲಯವೋ ಎಂಬ ಅನುಮಾನ ಮೂಡುತ್ತದೆ ಎಂದರು.
ನೂರಾರು ವರ್ಷಗಳ ಹಿಂದೆ ಇಲ್ಲಿ ದೇವಾಲಯ ನಿರ್ಮಾಣವಾಗಿತ್ತು. ಆದರೆ ಈಗ ಚಿಕ್ಕ ಮಂದಿರ ಇದ್ದು, ಪಕ್ಕದಲ್ಲಿಯೇ ದೊಡ್ಡ ಮಸೀದಿ ಇರುವುದನ್ನು ನೋಡಬಹುದು. ಈ ಬಗ್ಗೆ ಜಿಲ್ಲಾಡಳಿತ ಎಚ್ಚೆತ್ತು ಪರಿಶೀಲಿಸಬೇಕು ಎಂದು ಹೇಳಿದರು.
ಬೆಳಗಾವಿಯ ಇನ್ನು ಕೆಲವೆಡೆಗಳಲ್ಲಿ ಈ ರೀತಿಯ ಪ್ರಕರಣ ಗಮನಕ್ಕೆ ಬಂದಿದ್ದು, ಈ ಬಗ್ಗೆ ಗಮನಹರಿಸುತ್ತಿರುವುದಾಗಿ ತಿಳಿಸಿದರು.
ಸಂಗೊಳ್ಳಿ ರಾಯಣ್ಣ ಪುತ್ಥಳಿ ವಿರೂಪ ಪ್ರಕರಣ; ದೂರುದಾರನೇ ಪ್ರಮುಖ ಆರೋಪಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ