ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕಟ್ಟಡ ಕಾರ್ಮಿಕಕನೊಬ್ಬನನ್ನು ಮಾಲೀಕರೇ ಹಿಗ್ಗಾಮುಗ್ಗಾ ಥಳಿಸಿ ಕೊಂದ ಘೋರ ಘಟನೆ ಬೆಂಗಳೂರಿನ ರಾಮಮೂರ್ತಿ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮುನೇಶ್ವರ ನಗರ ನಿವಾಸಿ ಅಶ್ವತ್ಥ ಮೃತ ಕಾರ್ಮಿಕ. ನಿರ್ಮಾಣ ಹಂತದ ಕಟ್ಟಡದಲ್ಲಿ ಪಂಪ್ ಸೆಟ್ ಕಳ್ಳತನ ಮಾಡಿದ್ದಾನೆ ಎಂದು ಅಶ್ವತ್ಥನನ್ನು ಹಿಡಿದು ಕಟ್ಟಡ ಮಾಲೀಕರಾದ ಶ್ರೀನಿವಾಸ್ ರೆಡ್ಡಿ ಹಾಗೂ ಸುಬ್ಬಯ್ಯ ನಾಯ್ಡು ಇಬ್ಬರೂ ಕಾರ್ಮಿಕನ ಕೈ ಕಾಲು ಕಟ್ಟಿ ಥಳಿಸಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ಅಶ್ವತ್ಥ ಮಾಲೀಕರ ಏಟಿಗೆ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ನಿರ್ಮಾಣ ಹಂತದ ಕಟ್ಟಡಲ್ಲಿ ಅಶ್ವತ್ಥ ಗಾರೆ ಕೆಲಸ ಮಾಡುತ್ತಿದ್ದ. ಈ ವೇಳೆ ಪಂಪ್ ಸೆಟ್ ಕಳುವಾಗಿದ್ದು, ಅಶ್ವತ್ಥ ಮೇಲೆ ಆರೋಪ ಬಂದಿದೆ.
ಕಾರ್ಮಿಕನನ್ನು ಹೊಡೆದು ಕೊಂದ ಶ್ರೀನಿವಾಸ್ ರೆಡ್ಡಿ ಹಾಗೂ ಸುಬ್ಬಯ್ಯ ನಾಯ್ಡು ಇಬ್ಬರನ್ನು ಪೊಲೀಸರು ಬಂಧಿಸಿದ್ದು, ಕೊಲೆ ಕೇಸ್ ದಾಖಲಿಸಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ಮುಖ್ಯಮಂತ್ರಿ ಚಂದ್ರು ರಾಜೀನಾಮೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ