ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದ್ದು, ಅನಂತರಾಜುಗೆ ಬ್ಲಾಕ್ ಮೇಲ್ ಮಾಡಿದ್ದಳು ಎನ್ನಲಾಗಿದ್ದ ರೇಖಾ ಪೊಲೀಸ್ ಠಾಣೆ ಎದುರೇ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ರೇಖಾ ಎಂಬ ಮಹಿಳೆ ಹಾಗೂ ಆಕೆಯ ಗ್ಯಾಂಗ್ ನಿಂದ ಹನಿಟ್ರಾಪ್ ಜಾಲಕ್ಕೆ ಸಿಲುಕಿ ಮರ್ಯಾದೆಗೆ ಅಂಜಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಡೆತ್ ನೋಟ್ ಬರೆದಿಟ್ಟು ಸಾವಿಗೆ ಶರಣಾಗಿದ್ದ ಅನಂತರಾಜು ಕೇಸ್ ತನಿಖೆ ನಡೆಸಿದಷ್ಟು ವಿಚಿತ್ರ ಆಯಾಮಗಳನ್ನು ಪಡೆದುಕೊಳ್ಳುತ್ತಿದೆ. ಅನಂತರಾಜು ಪತ್ನಿ ಸುಮಾ ಹಾಗೂ ರೇಖಾ ನಡುವಿನ ಹಲವು ಆಡಿಯೋಗಳು ಬಹಿರಂಗವಾಗಿದ್ದು, ಪತಿಯ ಅಕ್ರಮ ಸಂಬಂಧ ಬಗ್ಗೆ ಪತ್ನಿ ಸುಮಾಳಿಗೆ ವಿಷಯ ಗೊತ್ತಾಗಿ ರೇಖಾಳಿಗೆ ಹಲವು ಬಾರಿ ಎಚ್ಚರಿಸಿದ್ದಳು ಎನ್ನಲಾಗಿದೆ.
ಇನ್ನೊಂದೆಡೆ ರೇಖಾ ಹಾಗೂ ಆಕೆಯ ಗ್ಯಾಂಗ್ ಆಡಿಯೋ ಎಡಿಟ್ ಮಾಡಿ ಒನ್ನೊಂದೇ ಆಡಿಯೋಗಳನ್ನು ಈಗ ವೈರಲ್ ಮಾಡುತ್ತಿರುವ ಅನುಮಾನವೂ ಆರಂಭವಾಗಿದೆ. ಈ ಎಲ್ಲಾ ಬೆಳವಣಿಗಗಳ ನಡುವೆ ರೇಖಾ ಇಂದು ಬ್ಯಾಡರಹಳ್ಳಿ ಠಾಣೆಗೆ ಆಗಮಿಸಿ ಸುಮಾ ವಿರುದ್ಧ ಬೆದರಿಕೆ ದೂರು ನೀಡಲು ಬಂದಿದ್ದಳು. ಆದರೆ ದೂರು ನೀಡಲು ಬಂದರೆ ನನ್ನನ್ನೇ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದು, ಪ್ರಕರಣದಲ್ಲಿ ನನಗೆ ನ್ಯಾಯ ಸಿಗುವ ನಂಬಿಕೆಯೆ ಇಲ್ಲ ಎಂದು ಮಾಧ್ಯಮಗಳ ಮುಂದೆ ಅಲವೊತ್ತುಕೊಂಡಿದ್ದಾಳೆ.
ಕೆಲ ತಪ್ಪುಗಳು ನಡೆದಿದೆ ಆದರೆ ನಾನು ಬ್ಲ್ಯಾಕ್ ಮೇಲ್ ಮಾಡಿಲ್ಲ, ಅನಂತರಾಜು ಹಾಗೂ ತಾನು 6 ವರ್ಷಗಳಿಂದ ಲಿವಿನ್ ರಿಲೇಷನ್ ಶಿಪ್ ನಲ್ಲಿದ್ದಿದ್ದು, ಹೀಗಿರುವಾಗ ತಾನೇಕೆ ಅನಂತರಾಜುಗೆ ಬ್ಲ್ಯಾಕ್ ಮೇಲ್ ಮಾಡುತ್ತೇನೆ? ಎಂದು ಪ್ರಶ್ನಿಸಿದ್ದಾಳೆ. ಸುಮಾ ಕಡೆಯಿಂದ ನನಗೆ ಜೀವ ಬೆದರಿಕೆಯಿದೆ. ಈ ಬಗ್ಗೆ ಪೊಲಿಸರಿಗೆ ವಿವರ ನೀಡಿದ್ದೇನೆ ಎಂದು ಹೇಳಿದ್ದಾಳೆ.
ಇದೇ ವೇಳೆ ರಸ್ತೆಯಲ್ಲಿ ಹೋಗುತ್ತಿದ್ದ ಬಿಎಂಟಿಸಿ ಬಸ್ ಗೆ ಅಡ್ಡಲಾಗಿ ಬಂದ ರೇಖಾ ಆತ್ಮಹತ್ಯೆಗೆ ಯತ್ನಿಸಿದ ಘಟನೆಯೂ ನಡೆದಿದೆ. ತಕ್ಷಣ ಆಕೆಯ ಸ್ನೇಹಿತ ಆಕೆಯನ್ನು ರಕ್ಷಿಸಿ ಕರೆದೊಯ್ದಿದ್ದಾನೆ. ಒಟ್ಟಾರೆ ಅನಂತರಾಜು ಆತ್ಮಹತ್ಯೆ ಪ್ರಕರಣ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ.
ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಗೆ ಸಂಕಷ್ಟ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ