
ಪ್ರಗತಿವಾಹಿನಿ ಸುದ್ದಿ; ಅಹಮದಾಬಾದ್: ಯುವತಿಯೊಬ್ಬಳು ತನ್ನನ್ನೇ ತಾನು ವಿವಾಹವಾಗಲು ಸಿದ್ಧತೆ ನಡೆಸುವ ಮೂಲಕ ಅಪರೂಪದಲ್ಲೇ ಅಪರೂಪದ ಮದುವೆಗೆ ಸಾಕ್ಷಿಯಾಗಲು ಅದ್ಧೂರಿ ತಯಾರಿ ನಡೆಸಿರುವ ಘಟನೆ ಗುಜರಾತ್ ನಲ್ಲಿ ನಡೆದಿದೆ.
24 ವರ್ಷದ ಕ್ಷಮಾ ಬಿಂದು ಎಂಬ ಗುಜರಾತ್ ನ ವಡೋದರಾ ಯುವತಿ ತನ್ನನ್ನೇ ತಾನು ವಿವಾಹವಾಗಲು ಸಿದ್ಧತೆ ನಡೆಸಿದ್ದು, ಮಗಳ ಈ ವಿಚಿತ್ರ ಇಚ್ಛೆಗೆ ಮನೆಯವರು ಕೂಡ ಬೆಂಬಲ ನೀಡಿದ್ದಾರೆ. ಈ ಮೂಲಕ ಯುವತಿಯೊಬ್ಬಳು ತನ್ನನ್ನೇ ತಾನು ಮದುವೆಯಾಗುತ್ತಿರುವುದಲ್ಲದೇ ಗೋವಾಗೆ 4 ದಿನಗಳ ಏಕಾಂಗಿ ಹನಿಮೂನ್ ಟ್ರಿಪ್ ಗೂ ಪ್ಲಾನ್ ಮಾಡಿದ್ದಾಳೆ. ಇಂತದ್ದೊಂದು ವಿಚಿತ್ರ ಮದುವೆ ಭಾರತದಲ್ಲಿಯೇ ಮೊದಲ ಘಟನೆಯಾಗಿದೆ.
ಜೂನ್ 11ರಂದು ಗೋತ್ರಿ ದೇಗುಲದಲ್ಲಿ ಕ್ಷಮಾ ಬಿಂದು ಸಂಪ್ರದಾಯಗಳ ಮೂಲಕವೇ ತನ್ನನ್ನೇ ತಾನು ವಿವಾಹವಾಗುತ್ತಿದ್ದು, ಮದುವೆಗೆ ಸಿದ್ಧತೆ ಕೂಡ ಭರ್ಜರಿಯಾಗಿ ನಡೆದಿದೆ.
ಈ ಬಗ್ಗೆ ಸ್ವತ: ಕ್ಷಮಾ ಬಿಂದು ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೆ ನೀಡಿದ್ದು, ನನಗೆ ಮದುವೆ ಆಗಲು ಯಾವುದೇ ಆಸೆಗಳಿಲ್ಲ. ಆದರೆ ನನ್ನನ್ನು ನಾನು ವಧುವಿನ ಅಲಂಕಾದಲ್ಲಿ ನೋಡಿಕೊಳ್ಳಬೇಕು ಎಂಬ ಆಸೆಯಿದೆ. ಎಲ್ಲರೂ ತಾವು ಇಷ್ಟಪಡುವವರೊಂದಿಗೆ, ತಮ್ಮ ಇಷ್ಟದಂತೆ ಮದುವೆ ಆಗುತ್ತಾರೆ. ನಾನು ನನ್ನನ್ನೇ ನಾನು ತುಂಬಾ ಇಷ್ಟ ಪಡುತ್ತೇನೆ. ಹಾಗಾಗೆ ನನಗೆ ನಾನೇ ಮದುವೆ ಆಗುತ್ತಿದ್ದೇನೆ. ನನ್ನ ಆಸೆಯನ್ನು ಮನೆಯಲ್ಲಿ ಪೋಷಕರಿಗೂ ತಿಳಿಸಿದ್ದು, ಅವರು ಕೂಡ ಒಪ್ಪಿಗೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಅಂಧ ಮಕ್ಕಳ ಕಾಲೇಜು ಶಿಕ್ಷಣಕ್ಕೆ ನೆರವಾಗಿ; ಅಂಧರ ಬಾಳಿಗೆ ಬೆಳಕಾಗಿ