Latest

ಸಮಾಜಕ್ಕೆ ಉಪಯುಕ್ತ ಅನ್ವಯಿಕ ಪ್ರಾಜೆಕ್ಟ್ ತಯಾರಿಸಲು ಕರೆ

ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ
ಸ್ಥಳೀಯ ಕೆಎಲ್‌ಇ ಎಂಜಿನಿಯರಿಂಗ್ ಕಾಲೇಜಿನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪ್ರಾಜೆಕ್ಟ್ ಪ್ರದರ್ಶನ ಮತ್ತು ಸ್ಪರ್ಧೆ ಟೆಕ್ನೊವೇಶನ್ ೨ಕೆ೧೯ ಹಮ್ಮಿಕೊಳ್ಳಲಾಗಿತ್ತು. 
ಪ್ರಾಜೆಕ್ಟ್ ಸ್ಪರ್ಧೆಯನ್ನು ಉದ್ದೇಶಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಡಾ. ಪ್ರಸಾದ ರಾಂಪೂರೆ, ವಿದ್ಯಾರ್ಥಿಗಳಲ್ಲಿ ಹೊಸ ಕಲ್ಪನೆಗಳನ್ನು ಸೃಷ್ಟಿಸಲು ಈ ಟೆಕ್ನೋವೇಶನ್ ಪ್ರಾಜೆಕ್ಟ್ ಸ್ಪರ್ಧೆಯನ್ನು ಪ್ರತಿ ವರ್ಷ ಹಮ್ಮಿಕೊಳ್ಳಲಾಗುತ್ತಿದೆ. ವಿದ್ಯಾರ್ಥಿಗಳು ಪ್ರಾಜೆಕ್ಟ ಸಿದ್ಧಪಡಿಸುವಿಕೆಯಲ್ಲಿ ಅತ್ಯಂತ ಕಾಳಜಿಪೂರ್ವಕವಾಗಿ ತೊಡಗಿಸಿಕೊಂಡರೆ ಮಾತ್ರ ಪ್ರಾಯೋಗಿಕ ಜ್ಞಾನ ಹೆಚ್ಚಲು ಸಾಧ್ಯ ಎಂದರು. 
ಇಂದಿನ ದಿನಮಾನದಲ್ಲಿ ವಿದ್ಯಾರ್ಥಿಗಳು ಸಮಾಜಕ್ಕೆ ಉಪಯುಕ್ತ ಅನ್ವಯಿಕ ಪ್ರಾಜೆಕ್ಟಗಳನ್ನು ಆಯ್ದುಕೊಳ್ಳುವುದು ಅತ್ಯವಶ್ಯ. ಎಂಜಿನಿಯರಿಂಗ್ ವಿದ್ಯಾರ್ಥಿಗಳು ಸೈದ್ಧಾಂತಿಕ ಜ್ಞಾನದ ಜೊತೆಗೆ ಪ್ರಾಯೋಗಿಕ ಜ್ಞಾನ ಬೆಳೆಸಿಕೊಳ್ಳುವುದು ಅನಿವಾರ್ಯವಾಗಿದೆ ಎಂದು ನುಡಿದರು. ಅತಿಥಿಗಳಾದ ಹೀನಾಕೌಸರ, ಹುಂಡೆಕರಿ, ಶಶಿಕಾಂತ ಅಂಗಡಿ ಹಾಗೂ ರವಿ ಸನದಿ, ಪ್ರಭು ಹೊನ್ನವರ ಮಾತನಾಡಿದರು. 
ಮೆಕ್ಯಾನಿಕಲ್ ವಿಭಾಗದ ೨೬ ಪ್ರಾಜೆಕ್ಟಗಳಲ್ಲಿ ಪ್ರವೀಣ ಮಾರನೂರ ಹಾಗೂ ತಂಡ ಪ್ರಥಮ, ಲಾಲಸಾಬ ನದಾಫ ಹಾಗೂ ತಂಡ ದ್ವಿತೀಯ, ಕಂಪ್ಯೂಟರ್ ಸೈನ್ಸ್ ವಿಭಾಗದ ೨೩ ಪ್ರಾಜೆಕ್ಟಗಳಲ್ಲಿ ಕೇದಾರ ಜೋಶಿ ಹಾಗೂ ತಂಡ ಪ್ರಥಮ, ಸಹನಾ ತುಪ್ಪದ ಹಾಗೂ ತಂಡ ದ್ವಿತೀಯ, ಎಲೆಕ್ಟ್ರಾನಿಕ್ಸ್ ವಿಭಾಗದ ೧೪ ಪ್ರಾಜೆಕ್ಟಗಳಲ್ಲಿ ಪ್ರವೀಣ ಚಟ್ಟರಕಿ ಹಾಗೂ ತಂಡ ಪ್ರಥಮ, ನಿಕಿತಾ ರಾಜಪುರೋಹಿತ ಹಾಗೂ ತಂಡ ದ್ವಿತೀಯ ಸ್ಥಾನಗಳನ್ನು ಪಡೆದುಕೊಂಡವು.
ಪ್ರೊ. ಅಭಿನಂದನ ಕಬ್ಬೂರ ನಿರ್ವಹಿಸಿದರು. ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button