Latest

ಪಾಕ್ ಮಾಜಿ ಅಧ್ಯಕ್ಷ ಪರ್ವೆಜ್ ಮುಷರಫ್ ವಿಧಿವಶ: ಸುದ್ದಿ ವೈರಲ್, ಚೇತರಿಕೆ ಅಸಾಧ್ಯ ಎಂದ ಕುಟುಂಬ

ಪ್ರಗತಿವಾಹಿನಿ ಸುದ್ದಿ; ಇಸ್ಲಾಮಾಬಾದ್: ಪಾಕಿಸ್ತಾನ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ (78) ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ವೈರಲ್ ಆಗಿದೆ.

ಆದರೆ, ಅವರಸ್ಥಿತಿ ಗಂಭೀರವಾಗಿದ್ದು, ಚೇತರಿಕೆ ಅಸಾಧ್ಯ ಎಂದು ಕುಟುಂಬದ ಮೂಲಗಳು ಹೇಳಿವೆ.

ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಮುಷರಫ್ ಅವರನ್ನು ದುಬೈನಲ್ಲಿರುವ ಅಮೆರಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ ಎನ್ನುವ ಸುದ್ದಿ ಹರಡಿದೆ.

ಪರ್ವೆಜ್ ಮುಷರಫ್ 1999ರಿಂದ 2008ರವರೆಗೆ ಪಾಕಿಸ್ತಾನದಲ್ಲಿ ಆಡಳಿತ ನಡೆಸಿದ್ದರು. ನವಾಜ್ ಷರೀಫ್ ಸರ್ಕಾರವನ್ನು ಸೇನಾ ಕ್ರಾಂತಿ ಮೂಲಕ ಪದಚ್ಯುತಗೊಳಿಸಿದ್ದರು. ಭಾರತದೊಂದಿಗೆ ಪಾಕಿಸ್ತಾನ ಶಾಂತಿಗಾಗಿ ಯತ್ನಿಸಿದಾಗ ಲೇಹ್-ಕಾರ್ಗಿಲ್ ಹೆದ್ದಾರಿ ಬಳಿ ಪಾಕಿಸ್ತಾನ ಸೇನೆ ಗಡಿ ನಿಯಂತ್ರಣ ರೇಖೆ ದಾಟಿಸಿ ಯುದ್ಧಕ್ಕೂ ಕಾರಣರಾಗಿದ್ದರು.

Home add -Advt

ಮುಷರಫ್ 1943 ಆಗಸ್ಟ್ 11ರಂದು ದೆಹಲಿಯ ಸೈಯದ್ ಮುಷಾರಫುದ್ದೀನ್ ಹಾಗೂ ಬೇಗಂ ಜರೀನ್ ಮುಷರಫ್ ಅವರ ಮಗನಾಗಿ ಜನಿಸಿದ್ದರು. ದೆಹಲಿಯ ವಿಶ್ವವಿದ್ಯಾಲಯ ಇಂದ್ರಪ್ರಸ್ಥ ಕಾಲೇಜಿನಲ್ಲಿ ಪದವಿ ಹಾಗೂ ಇಂಗ್ಲೀಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಮುಷರಫ್ ತಂದೆ ಸೈಯದ್ ಬ್ರಿಟಿಷ್ ಆಡಳಿತ ಭಾರತ ಸರ್ಕಾರದ ವಿದೇಶಾಂಗ ವ್ಯವಹಾರಗಳ ಕಚೇರಿಯಲ್ಲಿ ಅಕೌಂಟೆಂಟ್ ಆಗಿ ನಂತರ ಅಕೌಂಟಿಂಗ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದರು. 1947ರಲ್ಲಿ ದೇಶ ವಿಭಜನೆ ವೇಳೆ ಮುಷರಫ್ ಕುಟುಂಬ ದೆಹಲಿಯಿಂದ ಕರಾಚಿಗೆ ತೆರಳಿತು.

1964ರಲ್ಲಿ ಸೇನೆ ಸೇರಿದ್ದ ಮುಷರಫ್, ಕ್ವೆಟ್ಟಾದಲ್ಲಿ ಆರ್ಮಿ ಕಮಾಂಡ್ ಹಾಗೂ ಸ್ಟಾಫ್ ಕಾಲೇಜಿನಲ್ಲಿ ಪದವಿ ಪಡೆದರು. ಕ್ವೆಟ್ಟಾದಲ್ಲಿ ರಾಷ್ಟ್ರೀಯ ರಕ್ಷಣಾ ಕಾಲೇಜಿನ ಯುದ್ಧ ವಿಭಾಗದಲ್ಲಿ ಬೋಧಕರಾಗಿಯೂ ನೇಮಕಗೊಂಡಿದ್ದರು. ನಂತರ 1999ರಲ್ಲಿ ರಾತ್ರೋರಾತ್ರಿ ನವಾಜ್ ಷರೀಫ್ ಅವರನ್ನು ಪದಚ್ಯುತಗೊಳಿಸಿ ಮುಷರಫ್ ಮಿಲಿಟರಿ ಸರ್ಕಾರ ಸ್ಥಾಪಿಸಿದ್ದರು.

ಅವರ ನಿಧನ ಸುದ್ದಿಯನ್ನು ಅಧಿಕೃತವಾಗಿ ಪ್ರಕಟಿಸುವುದು ಮಾತ್ರ ಬಾಕಿ ಇದೆ ಎನ್ನುವ ಸುದ್ದಿ ಹರಡಿದ್ದು, ಅವರ ಚೇತರಿಕೆ ಅಸಾಧ್ಯ ಎಂದು ಕುಟುಂಬದ ಸದಸ್ಯರು ಟ್ವೀಟ್ ಮೂಲಕ ತಿಳಿಸಿದ್ದಾರೆ.

ನೂಪುರ್ ಶರ್ಮಾ ಬಂಧನಕ್ಕೆ ಆಗ್ರಹಿಸಿ ಬೆಳಗಾವಿ ಸೇರಿದಂತೆ ಹಲವೆಡೆ ಪ್ರತಿಭಟನೆ

Related Articles

Back to top button