Latest

ಪತಿ, ಪತ್ನಿ, ಔರ್…. ಹಲವು ಗುಟ್ಟುಗಳನ್ನು ಬಿಚ್ಚಿಟ್ಟ ಪವಿತ್ರಾ ಲೋಕೇಶ್ !!

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬಹುಭಾಷಾ ನಟಿ ಪವಿತ್ರಾ ಲೋಕೇಶ್ ಟಾಲಿವುಡ್ ಸ್ಟಾರ್ ನಟ ಮಹೇಶ್ ಬಾಬು ಅಣ್ಣ, ನಟ ನರೇಶ್ ನನ್ನು ವಿವಾಹವಾಗಿದ್ದಾರೆಯೇ ಎಂಬ ಸುದ್ದಿ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡಿತ್ತು. ನರೇಶ್ ಮೂರನೇ ಪತ್ನಿ ರಮ್ಯಾ ರಘುಪತಿ ಪವಿತ್ರಾ ಲೋಕೇಶ್ ಹಾಗೂ ತಮ್ಮ ಪತಿಯ ವಿರುದ್ಧ ಸಿಡಿದೆದ್ದಿದ್ದರು. ಈ ಎಲ್ಲಾ ವಿವಾದಗಳಿಗೆ ಇದೀಗ ಪವಿತ್ರಾ ಲೋಕೇಶ್ ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ನಟಿ ಪವಿತ್ರಾ ಲೋಕೇಶ್, ತನ್ನ ವಿರುದ್ಧ ಕೇಳಿ ಬರುತ್ತಿರುವ ಆರೋಪ ಸುಳ್ಳು. ನರೇಶ್ ನನಗೆ ನಾಲ್ಕು ವರ್ಷಗಳಿಂದ ಪರಿಚಯ, ನಮ್ಮಿಬ್ಬರ ನಡುವೆ ಉತ್ತಮ ಸ್ನೇಹ ಸಂಬಂಧವಿದೆ. ನಾವಿಬ್ಬರೂ ಸಾಕಷ್ಟು ಕಷ್ಟ ಸುಖ ಹಂಚಿಕೊಂಡಿದ್ದೇವೆ. ನರೇಶ್ ಹಾಗೂ ನಾನು ಮದುವೆಯಾಗಿಲ್ಲ. ಹೆಣ್ನು-ಗಂಡು ಒಟ್ಟಾಗಿ ಓಡಾಡಿದ ಮಾತ್ರಕ್ಕೆ ಮದುವೆ ಎನ್ನಲು ಆಗುತ್ತಾ? ಎಂದು ಪ್ರಶ್ನಿಸಿದ್ದಾರೆ.

ಪವಿತ್ರಾ ಲೋಕೇಶ್ ಅವರಿಂದ ತಮ್ಮ ಸಂಸಾರ ಹಾಳಾಗಿದೆ. ನಾಲ್ಕು ವರ್ಷದ ಹಿಂದೆ ಪವಿತ್ರಾ ನಮ್ಮ ಮನೆಗೆ ಊಟಕ್ಕೆ ಬಂದಿದ್ದರು. ಎಲ್ಲರಂತೆಯೇ ಬೆಳ್ಳಿ ಬಟ್ಟಲಲ್ಲಿ ಊಟ ಬಡಿಸಿ, ಸತ್ಕಾರ ಮಾಡಿ ಗೌರವದಿಂದ ಕಳುಹಿಸಿದ್ದೆ. ಅಂದು ನನಗೆ ಪವಿತ್ರಾ ಲೋಕೇಶ್ ಸೆಲೆಬ್ರಿಟಿ ಎಂಬುದು ಬಿಟ್ಟರೆ ಏನೂ ಗೊತ್ತಿರಲಿಲ್ಲ ಎಂದು ನರೇಶ್ ಮೂರನೇ ಪತ್ನಿ ರಮ್ಯಾ ರಘುಪತಿ ಆರೋಪಿಸಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಪವಿತ್ರಾ ಲೋಕೇಶ್, ನನಗೆ ನರೇಶ್ ಪತ್ನಿ ರಮ್ಯಾ ಯಾರೆಂದೇ ಗೊತ್ತಿಲ್ಲ. ಇಷ್ಟಕ್ಕು ಅವರ ಬಗ್ಗೆ ಯಾರಿಗೆ ಗೊತ್ತು. ಈಗ ಮೀಡಿಯಾ ಮುಂದೆ ಬಂದು ಪ್ರಚಾರಕ್ಕಾಗಿ ಅನಗತ್ಯ ಆರೋಪ ಮಾಡುತ್ತಿದ್ದಾರೆ. ನರೇಶ್ ವಿರುದ್ಧ ಹಲವು ಆರೋಪಗಳನ್ನು ಮಾಡಿ, ತನ್ನ ಪತಿ ಸರಿಯಿಲ್ಲ ಎಂದೆಲ್ಲ ಹೇಳಿ ಅಷ್ಟಾದರೂ ತನಗೆ ತನ್ನ ಪತಿ ನರೇಶ್ ಬೇಕು ಎನ್ನುವುದಾದರೆ ರಮ್ಯಾ ಹೈದರಾಬಾದ್ ನ ನರೇಶ್ ಮನೆಗೆ ಹೋಗಿ ಅವರೊಂದಿಗೆ ಇರಬೇಕಿತ್ತು. ಕರ್ನಾಟಕ್ಕೆ ಬಂದು ಯಾಕೆ ಮಾತನಾಡುತ್ತಿದ್ದಾರೆ? ನರೇಶ್ ಒಬ್ಬ ಒಳ್ಳೆಯ ವ್ಯಕ್ತಿ. ನಾನು ನರೇಶ್ ಜತೆಯೂ ಕೆಲಸ ಮಾಡಿದ್ದೇನೆ. ಟಾಲಿವುಡ್ ನ ಹಲವು ನಟರೊಂದಿಗೆ ಕೆಲಸ ಮಾಡಿದ್ದೇನೆ. ಹಾಗಂತ ಸಂಬಂಧ ಕಟ್ಟಿಕೊಳ್ಳಲು ಆಗುತ್ತಾ?

ಮೊದಲು ನನಗೆ ನರೇಶ್ ಹಿನ್ನೆಲೆ ಬಗ್ಗೆ ಗೊತ್ತಿರಲಿಲ್ಲ. ಕೇವಲ ಕಲಾವಿದರಾಗಿ ನಾವು ಒಟ್ಟಿಗೆ ನಟಿಸುತ್ತಿದ್ದೆವು. ಆಮೇಲೆ ಹಾಗೆ ಪರಿಚಯವಾಯಿತು. ನಾನು ನನ್ನ ಕಷ್ಟದ ಬಗ್ಗೆ ಹೇಳಿಕೊಂಡೆ. ಅವರೂ ಅವರ ಸುಖದು:ಖ ಹೇಳಿಕೊಂಡರು. ನಾವಿಬ್ಬರೂ ಉತ್ತಮ ಗೆಳೆಯರು ಎಂದು ಹೇಳಿದ್ದಾರೆ.

ಇದೇ ವೇಳೆ ನಟ ಸುಚೇಂದ್ರ ಪ್ರಸಾದ್ ಬಗ್ಗೆಯೂ ಮಾತನಾಡಿರುವ ನಟಿ ಪವಿತ್ರಾ ಲೋಕೇಶ್, ಸುಚೇಂದ್ರ ಪ್ರಸಾದ್ ಹಾಗೂ ನಾನು 11 ವರ್ಷಗಳ ಕಾಲ ಜೊತೆಯಾಗಿದ್ದೆವು. ಆದರೆ ಮದುವೆಯಾಗಿರಲಿಲ್ಲ. ಕಳೆದ 5 ವರ್ಷಗಳಿಂದ ನಾನು ಸುಚೇಂದ್ರ ಪ್ರಸಾದ್ ಅವರಿಂದ ದೂರ ಇದ್ದೇನೆ. ನನಗೆ ದುಡ್ಡೇ ಮುಖ್ಯ ಅನ್ನುವುದಾದರೆ ನಾನು ಸುಚೇಂದ್ರ ಪ್ರಸಾದ್ ಜತೆ ಇದ್ದಾಗ ಅವರ ಬಳಿ ಯಾವುದೇ ಹಣ, ಮನೆ, ಕಾರು ಕೂಡ ಇರಲಿಲ್ಲ, ಪಾಕೆಟ್ ಮನಿಗೂ ದುಡ್ದಿರಲಿಲ್ಲ. ಆದರೂ ಅವರ ಜ್ಞಾನಕ್ಕೆ, ಅವರಲ್ಲಿರುವ ವಿದ್ಯಾಭ್ಯಾಸಕ್ಕೆ ಗೌರವಕೊಟ್ಟು ಅವರ ಜತೆಯಿದ್ದೆ. ಆದರೆ ಒಬ್ಬ ವ್ಯಕ್ತಿಗೆ ಜಬ್ದಾರಿಯುತವಾಗಿ ದುಡಿಯುವ ಯೋಚನೆ ಬೇಕಲ್ಲವೇ? ನಾನು ಒಂದು ಹೆಣ್ಣುಮಗಳಾಗಿ ರಸ್ತೆಯಲ್ಲಿ ಓಡಾಡಲು ಆಗುತ್ತಾ? ನನ್ನ ಹಾಗೂ ಸುಚೇಂದ್ರ ಪ್ರಸಾದ್ ವಿಚಾರದ ಬಗ್ಗೆ ಇನ್ನೊಮ್ಮೆ ಹೇಳುತ್ತೇನೆ. ಈಗ ಆ ವಿಚಾರ ಬೇಡ ಎಂದಿದ್ದಾರೆ.

ನೂಪುರ್ ಶರ್ಮಾಗೆ ಸುಪ್ರೀಂ ಕೋರ್ಟ್ ತರಾಟೆ; ಉದಯ್ ಪುರ ಟೈಲರ್ ಹತ್ಯೆಗೆ ನಿಮ್ಮ ಹೇಳಿಕೆಯೇ ಕಾರಣ ಎಂದ ನ್ಯಾಯಾಲಯ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button