ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೇವಲ 12 ಗಂಟೆಯಲ್ಲಿ ಕೊಲೆ ಪ್ರಕರಣವೊಂದನ್ನು ಭೇಧಿಸುವಲ್ಲಿ ಬೆಳಗಾವಿಯ ಉದ್ಯಮಬಾಗ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಜಗಾವಿಯಲ್ಲಿ ಯುವಕನೋರ್ವನನ್ನು ಭೀಕರವಾಗಿ ಕೊಚ್ಚಿ ಕೊಲೆಗೈಯಲ್ಲಾಗಿತ್ತು. ಈ ಕುರಿತು ಯುವಕನ ಸಹೋದರು ದೂರು ನೀಡಿದ್ದರು.
ಸವಿತಾ ಭರಮಪ್ಪಾ ಮೇತ್ರಿ (ಸಾ|| ಕಲ್ಮೇಶ್ವರ ಕಾಲೋನಿ, ಅನಗೋಳ ರೋಡ ಉದ್ಯಮಭಾಗ ಬೆಳಗಾವಿ) ಇವರ ತಮ್ಮನಾದ ಯಲ್ಲೇಶಪ್ಪಾ ಶಿವಾಜಿ ಕೋಲಕಾರ (೩೭) (ಸಾ|| ಅಂಬೇಡ್ಕರ ಗಲ್ಲಿ, ಮಜಗಾಂವಿ) ಇವನಿಗೆ ದಿನಾಂಕ:೨೯/೦೬/೨೦೨೨ ರ ರಾತ್ರಿ ಮಜಗಾವಿಯ ಆದಿನಾಥ ಭವನ ಹತ್ತಿರ ಅವನ ಕುತ್ತಿಗೆಗೆ, ಮುಖದ ಮೇಲೆ, ತಲೆಯ ಮೇಲೆ, ಬೆನ್ನಿಗೆ, ಕಾಲಿನ ಮೇಲೆ ಹರಿತವಾದ ಆಯುಧದಿಂದ ಹೊಡೆದು ಗಾಯಗೊಳಿಸಿ ಅವನನ್ನು ಕೊಲೆ ಮಾಡಲಾಗಿತ್ತು.
ಸವಿತಾ ನೀಡಿದ ದೂರಿನನ್ವಯ ಉದ್ಯಮಭಾಗ ಪೊಲೀಸರು (ಅಪರಾಧ ಸಂಖ್ಯೆ. ೩೨/೨೦೨೨ ಕಲಂ.೩೦೨ ಐಪಿಸಿ) ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.
ಹಿರಿಯ ಅಧಿಕಾರಿಗಳ ಮಾರ್ಗದರ್ಶದಲ್ಲಿ ಎ. ಚಂದ್ರಪ್ಪ ಎಸಿಪಿ ಖಡೇಬಜಾರರವರ ಮೇಲ್ವಿಚಾರಣೆಯಲ್ಲಿ ಧೀರಜ್ ಶಿಂದೆ, ಪಿ.ಐ. ಉದ್ಯಮಬಾಗ ಠಾಣೆ ನೇತೃತ್ವದಲ್ಲಿ ಸಿಬ್ಬಂದಿ ತಂಡ ಕಾರ್ಯಪ್ರವೃತ್ತರಾಗಿ ಆರೋಪಿಗಳ ಬಗ್ಗೆ ಸೂಕ್ಷ್ಮ ಮಾಹಿತಿ ಕಲೆ ಹಾಕಿ ಕೇವಲ ೧೨ ಗಂಟೆಯೊಳಗಾಗಿ ಪ್ರಕರಣ ಭೇಧಿಸಿದರು.
ಕೊಲೆ ಮಾಡಿದ ಆರೋಪಿಗಳಾದ,
ಸಂಧೀಪ ರಾಜು ಕೋಲಕಾರ (೩೨), ಸಾ|| ಅಂಬೇಡ್ಕರ ಗಲ್ಲಿ, ಮಜಗಾಂವ, ಬೆಳಗಾವಿ
ಕುಮಾರ ಸಂತೋಷ ರಾಜಂಗಳಿ (೧೯), ಸಾ|| ಅಂಬೇಡ್ಕರ ಗಲ್ಲಿ, ಮಜಗಾಂವ, ಬೆಳಗಾವಿ
ರವಿ ಗಂಗಪ್ಪಾ ಗುಳ್ಳೆದಕೊಪ್ಪ (೨೫), ಸಾ|| ಕಲ್ಮೇಶ್ವರ ನಗರ, ಮಜಗಾಂವ ಬೆಳಗಾವಿ
ಪ್ರದೀಪ ನಿಂಗಪ್ಪಾ ಕೋಲ್ಕಾರ (೨೪) ಸಾ|| ಅಂಬೇಡ್ಕರ ಗಲಿ, ಮಜಗಾಂವ, ಬೆಳಗಾವಿ
ಶಿವಕುಮಾರ ಚಂದ್ರಕಾಂತ ಮಾನೆ (೨೨) ಸಾ|| ಕಲ್ಮೆಶ್ವರ ನಗರ, ಮಜಗಾಂವ, ಬೆಳಗಾವಿ
ಇವರನ್ನು ಬಂಧಿಸಿದ್ದು, ಅವರಿಂದ ಕೊಲೆ ಮಾಡಲು ಬಳಸಿದ ಹರಿತವಾದ ಕೊಡ್ಲಿ, ತಲ್ವಾರ, ಚಾಕು, ಕೊಯ್ತಾ ಹಾಗೂ ಕೃತ್ಯಕ್ಕೆ ಬಳಸಿದ ಆಟೋರಿಕ್ಷಾವನ್ನು ವಶಪಡಿಸಿಕೊಂಡು ಕಾನೂನು ಕ್ರಮ ಜರುಗಿಸಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ. ಪತ್ತೆ ಮಾಡಿದ ತಂಡವನ್ನು ಪೊಲೀಸ್ ಆಯುಕ್ತರು, ಮತ್ತು ಡಿಸಿಪಿ ರವರುಗಳು ಶ್ಲಾಘಿಸಿದ್ದಾರೆ.
ಬೆಳಗಾವಿ ವರ್ತಕರಿಗೆ 75 ಲಕ್ಷ ರೂ. ಪಂಗನಾಮ ಹಾಕಿ ವಿದೇಶಕ್ಕೆ ಹಾರಿದ್ದ ವ್ಯಕ್ತಿ ಮುಂಬೈಯಲ್ಲಿ ಬೆಳಗಾವಿ ಪೊಲೀಸ್ ಬಲೆಗೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ